ಬೆಂಗಳೂರಿನಲ್ಲಿ ತಾಂಡವಾಡುತ್ತಿದೆ ಕೊರೊನಾ, ಇಂದು ರಾಜ್ಯದಲ್ಲಿ ದಾಖಲಾದ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ?

ಕೊರೊನಾ ತನ್ನ ಅಕ್ರಮಣವನ್ನು ದಿನೇ ದಿನೇ ಹೆಚ್ಚಿಸುತ್ತಲೇ ಇದೆ. ಇಂದು ಬೆಂಗಳೂರಿನಲ್ಲಿ ಒಂದೇ ದಿನ ದಾಖಲೆಯ 138 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ 337 ಪ್ರಕರಣಗಳು ದಾಖಲಾಗಿವೆ.

ಬೆಂಗಳೂರಿನಲ್ಲಿ 7 ಮಂದಿ ಕೊರೋನಾಗದಿಂದ ಸಾವನ್ನಪ್ಪಿದ್ದು, ರಾಜ್ಯದಲ್ಲಿ 10 ಮಂದಿ ಮೃತಪಟ್ಟಿದ್ದರೆ.  ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 8,281ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಪತ್ತೆಯಾಗಿರುವ 8,281 ಪ್ರಕರಣಗಳ ಪೈಕಿ 5,210 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನು 2943 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 337 ಸೋಂಕಿತರ ಪೈಕಿ 93 ಜನ ಅಂತಾರಾಜ್ಯ ಮತ್ತು 11 ಮಂದಿ ಅಂತಾರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ.

ಬೆಂಗಳೂರು ನಗರದಲ್ಲಿ 138, ಕಲಬುರಗಿಯಲ್ಲಿ 52, ಬಳ್ಳಾರಿಯಲ್ಲಿ 37, ಹಾಸನದಲ್ಲಿ 18, ದಕ್ಷಿಣ ಕನ್ನಡದಲ್ಲಿ 13, ದಾವಣಗೆರೆಯಲ್ಲಿ 12, ಉಡುಪಿಯಲ್ಲಿ 11, ಬೀದರ್ ನಲ್ಲಿ 10, ಮೈಸೂರು, ಕೊಪ್ಪಳದಲ್ಲಿ ತಲಾ 6, ಯಾದಗಿರಿ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ತಲಾ 4, ಮಂಡ್ಯ, ಧಾರವಾಡ,ಚಿಕ್ಕಬಳ್ಳಾಪುರ, ಬಾಗಲಕೋಟೆ, ರಾಮನಗರದಲ್ಲಿ ತಲಾ 3, ಚಿಕ್ಕಮಗಳೂರು, ತುಮಕೂರಿನಲ್ಲಿ 2, ಬೆಳಗಾವಿ, ಉತ್ತರಕನ್ನಡ, ಶಿವಮೊಗ್ಗದಲ್ಲಿ ತಲಾ 1 ಪ್ರಕರಣಗಳು ವರದಿಯಾಗಿವೆ.

ಬೆಂಗಳೂರು ನಗರವೊಂದರಲ್ಲೇ ಏಳು ಮಂದಿ ಮೃತಪಟ್ಟಿದ್ದಾರೆ. 65 ವರ್ಷದ ಮಹಿಳೆ, 78 ವರ್ಷದ ವ್ಯಕ್ತಿ, 72,58,50,54,69 ವರ್ಷದ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ. ವಿಜಯಪುರದ 66 ವರ್ಷದ ಮಹಿಳೆ, ಬೀದರ್ ನ 45 ಮತ್ತು 70 ವರ್ಷದ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ.

https://twitter.com/DHFWKA/status/1273972934189682688

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights