ವಿಡಿಯೋ: ಶಂಕರಾಚಾರ್ಯ ಪ್ರತಿಮೆಗೆ ಬಾವುಟ ಎಸೆದವನನ್ನು ಬಂಧಿಸಿದ ಪೊಲೀಸರು: ಕಳ್ಳ ಹೇಳಿದ್ದೇನು ಗೊತ್ತಾ?

ಬೆಂಗಳೂರಿನ ಡಿಜೆ ಹಳ್ಳಿ ಪ್ರಕರಣದ ಬೆನ್ನಲ್ಲೇ ಶೃಂಗೇರಿಯಲ್ಲಿ ಕೋಮು ದ್ವೇಷದ ಉದ್ವಿಗ್ನಸ್ಥಿತಿ ನಿರ್ಮಾಣವಾಗಿತ್ತು. ತಿಳಿಗೇಡಿಯೊಬ್ಬ ಶೃಂಗೇರಿಯ ಶಂಕರಾಚಾರ್ಯ ಪ್ರತಿಮೆಯ ಮೇಲೆ ಮುಸ್ಲೀಂ ಸಂಘಟನೆಯೊಂದರ ಬಾವುಟವನ್ನು ಎಸೆದು ಹೋಗಿದ್ದ. ಇದು ಎಸ್‌ಡಿಪಿಐ ಸಂಘಟನೆಯದ್ದೇ ಪಿತೂರಿ ಎಂದು ಹಿಂದೂ ಸಂಘಟನೆಗಳು ಶೃಂಗೇರಿಯಲ್ಲಿ ಪ್ರಕ್ಷುದ್ಭ ವಾತಾವರಣ ನಿರ್ಮಿಸಿದ್ದವು.

ಈಗಾಗಲೇ ಶೃಂಗೇರಿ ಪ್ರಕರಣ ಕೋಮು ಗಲಬೆಯ ರೂಪ ತಳೆಯಲು ಆರಂಭಸಿತ್ತು. ಆದರೆ ಈಗ ಶಂಕರಾಚಾರ್ಯರ ಪುತ್ಥಳಿ ಮೇಲೆ ಬಿದ್ದಿರುವ ಬಾವುಟ ಎಸ್‌ಡಿಪಿಐಗೆ ಸೇರಿದ್ದಲ್ಲ ಎಂದು ಹೇಳಲಾಗಿದೆ. ಅಲ್ಲದೆ, ಹಸಿರು ಬಾವುಟವನ್ನು ಪ್ರತಿಮೆ ಮೇಲೆ ಎಸೆದಿದ್ದ ಆರೋಪಿ ಮಿಲಿಂದ್ ಎಂಬ ಯುವಕ ಎಂದು ತಿಳಿದುಬಂದಿದ್ದು, ಈತ ಹತ್ತಿರದಲ್ಲೇ ಇದ್ದ ಮಸೀದಿಯಿಂದ ಬಾವುಟವನ್ನು ಕದ್ದು ಹೋಗುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣವನ್ನು ಭೇದಿಸಿರುವ ಪೊಲೀಸರು, ಈ ಘಟನೆಯ ಹಿಂದೆ ಯಾವುದೇ ಪಕ್ಷ ಅಥವಾ ಸಂಘಟನೆಗಳಿಲ್ಲ. ಬಾವುಟವನ್ನು ಕದ್ದಿದ್ದ ಆರೋಪಿ ಮಿಲಿಂದ್ ಎಂಬಾತ ಕುಡುಕನಾಗಿದ್ದು, ಕುಡಿದ ಮತ್ತಿನಲ್ಲಿ ಹೀಗೆ ಮಾಡಿದ್ದಾನೆ. ಎಲ್ಲಾ ದಾಖಲೆಗಳಿವೆ. ಆತ ಎಲ್ಲಿ ಕುಡಿದ, ಎಲ್ಲಿಂದ ಬ್ಯಾನರ್ ತಂದ ಎಂಬ ಎಲ್ಲಾ ವಿಡಿಯೋ ಇದೆ. ಬ್ಯಾನರ್ ಈದ್ ಮಿಲಾದ್‌ ಶುಭಕೋರೋ ಸಂದೇಶದ್ದು, ಇದು ಉದ್ದೇಶ ಪೂರ್ವಕವಾಗಿ ಆಗಿರೋ ಘಟನೆಯಲ್ಲ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್ ಮಚೀಂದ್ರ ಸ್ಪಷ್ಟಪಡಿಸಿದ್ದಾರೆ.

ಕಳ್ಳ ಬಾವುಟ ಕದ್ದು ಶಂಕರಾಚಾರ್ಯ ಪ್ರತಿಮೆ ಮೇಲೆ ಹಾಕಿದ್ದೇಕೆ…? ಕಳ್ಳನನ್ನು ಬಂಧಿಸಿದ ಪೊಲೀಸರು ನೀಡಿದ ಮಾಹಿತಿ…

ಕಳ್ಳ ಬಾವುಟ ಕದ್ದು ಶಂಕರಾಚಾರ್ಯ ಪ್ರತಿಮೆ ಮೇಲೆ ಹಾಕಿದ್ದೇಕೆ…?ಶೃಂಗೇರಿಯಲ್ಲಿ ಬಾವುಟ ಕಳ್ಳನನ್ನು ಬಂಧಿಸಿದ ಪೊಲೀಸರು ನೀಡಿದ ಮಾಹಿತಿ…

Posted by EnSuddi on Friday, August 14, 2020

ಚಿಕ್ಕಮಗಳೂರು ಸೇರಿದಂತೆ ನಾಡಿನಾದ್ಯಂತ ಕೋಮು ಸಾಮರಸ್ಯ ಕದಡಬಲ್ಲ ಪ್ರಕರಣವನ್ನು ಪೊಲೀಸರು ಒಂದೇ ದಿನದಲ್ಲಿ ಬೇಧಿಸಿದ್ದಾರೆ. ಈ ವೇಳೆಗಾಗಲೇ ಶೃಂಗೇರಿಯ ಮಾಜಿ ಶಾಸಕ ಡಿ ಎನ್ ಜೀವರಾಜ್ ಅವರು ಇದಕ್ಕೆ ಕೋಮು ಬಣ್ಣ ನೀಡಲು ಪ್ರಯತ್ನಿಸಿದ್ದವರಲ್ಲಿ ಪ್ರಮುಖರಾಗಿದ್ದರು. ಅವರು ಪೊಲೀಸರೊಂದಿಗೆ ನಡೆಸಿದ ಸಂಭಾಷಣೆಯ ತುಣುಕುಗಳು ವೈರಲ್ ಆಗಿದ್ದವು.

ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸಹ ಈ ಘಟನೆಯ ಕುರಿತು ಟ್ವೀಟ್ ಮಾಡುವ ಮೂಲಕ ಈ ಪ್ರಕರಣಕ್ಕೆ ಎಸ್‌ಡಿಪಿಐ ಮತ್ತು ಪಿಎಫ್ಐ ಕಾರಣ ಎಂದು ಹೇಳಿ ಆ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸಿದ್ದರು.


ಇದನ್ನೂ ಓದಿ: ಮೋದಿ ಸರ್ಕಾರದ ಮಹಾದ್ರೋಹ – ಮಾರಾಟವಾಗುತ್ತಿರುವ “ಮಹಾರತ್ನಗಳು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights