ಸಿಎಎ ವಿರೋಧಿ ಪ್ರತಿಭಟನಾ ನಿರತರನ್ನು ಟೀಕಿಸಿದ ಅನುರಾಗ್ ಠಾಕೂರ್!

ದೆಹಲಿ ವಿಧಾನಸಭಾ ಚುನಾವಣೆ ಅಂಗವಾಗಿ ಸಾರ್ವಜನಿಕ ಭಾಷಣ ಮಾಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನೆರೆದಿದ್ದ ಸಭಿಕರಿಗೆ ದೇಶದ್ರೋಹಿಗಳನ್ನು ಗುಂಡಿಕ್ಕಿ ಸಾಯಿಸಬೇಕೆಂಬ ಘೋಷಣೆ ಕೂಗಲು ಹೇಳಿ ಠಾಕೂರ್ ವಿವಾದದಲ್ಲಿ ಸಿಲುಕಿದ್ದಾರೆ.

ಸಿಎಎ ವಿರೋಧಿ ಪ್ರತಿಭಟನಾ ನಿರತರನ್ನು ಟೀಕಿಸಿರುವ ಅನುರಾಗ್ ಠಾಕೂರ್, ದೇಶದ್ರೋಹಿಗಳಿಗೆ…. ಎಂದು ಹೇಳಿದ್ದು, ನೆರೆದಿದ್ದ ಸಭಿಕರು ಗುಂಡಿಕ್ಕಿ ಎಂದು ಕೂಗಿದ್ದಾರೆ.

ಅನುರಾಗ್ ಠಾಕೂರ್ ಅವರ ಹೇಳಿಕೆ ವಿವಾದ ಸೃಷ್ಟಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಘೋಷಣಾ ವಾಕ್ಯ ಸಂಬಂಧ ವರದಿ ಸಲ್ಲಿಸುವಂತೆ ವಾಯುವ್ಯ ಜಿಲ್ಲಾ ಚುನಾವಣಾಧಿಕಾರಿಗಳಿಗೆ ದೆಹಲಿ ಸಿಇಒ ಕಚೇರಿ ಸೂಚನೆ ನೀಡಿದೆ.

ಹೇಳಿಕೆ ಹಾಗೂ ಘೋಷಣಾ ವಾಕ್ಯಗಳ ಸಂಬಂಧ ಈ ವರೆಗೂ ಯಾವುದೇ ದೂರುಗಳೂ ದಾಖಲಾಗಿಲ್ಲ ಎಂದು ದೆಹಲಿ ಸಿಇಒ ಕಚೇರಿ ಮಾಹಿತಿ ನೀಡಿದೆ. ಚುನಾವಣಾ ರ್ಯಾಲಿಯೊಂದರಲ್ಲಿ ಮಾತನಾಡಿದ್ದ ಠಾಕೂರ್ ಅವರು, ಪ್ರಚೋದನಾಕಾರಿ ಘೋಷಣೆ ಕೂಗಿದ್ದರು. ಭಾಷಣದ ವೇಳೆ ಕೈಗಳನ್ನು ಎತ್ತಿ ದೇಶದ್ರೋಹಿಗಳನ್ನು ಎಂದು ಕೂಗಿದ ಅನುರಾಗ್ ಅವರ ಜೊತೆಗೆ ಗೋಲಿ ಮಾರೋ ಎಂದು ಸಭೆಯಲ್ಲಿ ಸೇರಿದ್ದ ಜನರೆಲ್ಲಾ ಆಕ್ರೋಶದಿಂದ ಕೂಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights