ಹೋಂ ಕ್ವಾರಂಟೈನ್‌ ಮುಗಿಸಿದ ಸಿಎಂ ಬಿಎಸ್‌ವೈ: ನಾಳೆ ಸ್ವಾತಂತ್ರ್ಯ ದಿನಾಚರಣೆಗೆ ಹಾಜರ್!

ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರು ಕೊರೊನಾ ಸೋಂಕು ತಗುಲಿದ್ದರಿಂದಾಗಿ ಆಗಸ್ಟ್‌ 03 ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯರು ಹಾಗೂ ಕ್ವಾರಂಟೈನ್‌ ನಿಯಮದ ಪ್ರಕಾರ ಅವರು ಆಗಸ್ಟ್‌ 16ರ ವರೆಗೆ ಕ್ವಾರಂಟೈನ್‌ನಲ್ಲಿ ಇರಬೇಕು ಎಂದು ಹೇಳಲಾಗಿತ್ತು. ಇದರಿಂದಾಗಿ ಆಗಸ್ಟ್‌ 15ರ ಸ್ವಾತಂತ್ರ್ಯ ದಿನದಂದು ರಾಷ್ಟ್ರಧ್ವಜವನ್ನು ಹಾರಿಸುವವರು ಯಾರು ಎಂಬ ಪ್ರಶ್ನೆ ರಾಜಕೀಯ, ಅಧಿಕಾರಿ ವಲಯವೂ ಸೇರಿದಂತೆ ಎಲ್ಲರೂ ಮನೆ ಮಾಡಿತ್ತು. ಆದರೆ, ಮೂರು ದಿನಗಳ ಹಿಂದೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಅವರಿಗೆ ಕೊರೊನಾ ನೆಗೆಟಿವ್ ಬಂದಿರುವ ಹಿನ್ನೆಲೆಯಲ್ಲಿ ಮನೆಗೆ ಮರಳಿದ್ದು, ಇಂದಿಗೆ ಹೋಂ ಕ್ವಾರಂಟೈನ್‌ ಕೂಡ ಮುಗಿದು ಕೆಲಸ ಹಾಜರಾಗಲಿದ್ದಾರೆ.

ಇಂದು ತಮ್ಮ ಕಚೇರಿಗೆ ತೆರಳಲಿರುವ ಸಿಎಂ ಜನರ ಸಮಸ್ಯೆಯನ್ನ ಆಲಿಸಲಿದ್ದಾರೆ. ಇಂದಿನಿಂದ ಫುಲ್ ಆಕ್ಟೀವ್‌ ಆಗಿ ಕೆಲಸ ಮಾಡಲಿದ್ದಾರೆ. ಕೊರೊನಾ ತಗುಲಿದ್ದರಿಂದಾಗಿ ಕೆಲವು ಕೆಲಸಗಳು ಬಾಕಿ ಉಳಿದಿದ್ದು, ಇಂದಿನಿಂದ ಪ್ರಮುಖ ಕೆಲಸಗಳತ್ತ ಸಿಎಂ ಯಡಿಯೂರಪ್ಪ ಗಮನಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಾಳೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ, ಬೆಂಗಳೂರಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸುವ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ನಡೆಯುವ ಕಾರ್ಯಕ್ರಮದಲ್ಲೂ ಇಂದು ಸಿಎಂ ಭಾಗಿಯಾಗಿ ಚರ್ಚಿಸಲಿದ್ದಾರೆ.

ಆಗಸ್ಟ್‌ 03ರಂದು ಕೊರೊನಾ ಪಾಸಿಟಿವ್ ಬಂದಿದ್ದು, ಅಂದಿನಿಂದ 14 ದಿನಗಲು ಅಂದರೆ ಆಗಸ್ಟ್‌ 16ರ ವರೆಗೆ ಕ್ವಾರಂಟೈನ್‌ನಲ್ಲಿ ಇರಬೇಕಾಗಿದ್ದ ಸಿಎಂ ಬಿಎಸ್‌ವೈ ಆಗಸ್ಟ್ 10 ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಇಂದಿಗೆ ಹೋಂ ಕ್ವಾರಂಟೈನ್‌ ಕೂಡ ಮುಗಿಸಿದ್ದು, ಸಿಎಂ ಸ್ವಾತಂತ್ರ್ಯ ದಿನಾಚರಣೆಯನ್ನು ಮಿಸ್‌ ಮಾಡಿಕೊಳ್ಳಲಾಗದೆ ಕ್ವಾರಂಟೈನ್‌ಗೆ ವಿದಾಯ ಹೇಳಿದ್ದಾರೆ ಎಂಬ ಅಭಿಪ್ರಾಯಗಳೂ ಕೇಳಿಬರುತ್ತಿವೆ.

ಇನ್ನು ಮಾಜಿ ಸಿಎಂ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಅವರೂ ನಾಳೆ ತಮ್ಮ ಕ್ಷೇತ್ರ ಬದಾಮಿಯಲ್ಲಿ ಸ್ವಾತಂತ್ರ್ಯ ದಿನದ ಆಚರಣೆಗೆ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಹುತ್ತಿದೆ.


ಇದನ್ನೂ ಓದಿ:  ಗಲಭೆಗಳಲ್ಲಿ ಭಾಗಿಯಾದ ಆರೋಪಿಗೆ ಎಲ್ಲಾ ಕೇಸು ತೆಗೆದು ಹಾಕುತ್ತೇವೆ ಎಂದ ಗೃಹ ಸಚಿವರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights