ಗಾವಸ್ಕರ್ ಚಿತ್ರಣ: ಅಪ್ರತಿಮ ಬ್ಯಾಟ್ಸ್‌ಮನ್, ಅಪರೂಪದ ವ್ಯಕ್ತಿ ಸುನೀಲ್ ಗಾವಸ್ಕರ್

ಸುನೀಲ್ ಮನೋಹರ್ ಗಾವಸ್ಕರ್ (ಗವಾಸ್ಕರ್ ಅಲ್ಲ), ಅವರು ಒಬ್ಬ  ಅಂತರಾಷ್ಟ್ರೀಯ ಬ್ಯಾಟಿಂಗ್ ದಂತಕತೆ. ಅವರ ಅಪರೂಪದ ವ್ಯಕ್ತಿತ್ವದಿಂದ, ತಮ್ಮ ನಿವೃತಿ ಜೀವನವನ್ನು ಯಶಸ್ವಿಗೊಳಿಸಿಕೊಂಡಿದ್ದು ಅದಕ್ಕಿಂತ ಮಿಗಿಲಾದದ್ದು. ಜೂಲೈ 10 ರಂದು ಅವರ 71ನೇಯ ಹುಟ್ಟುಹಬ್ಬ. ನಂಬರ್ 71 ಅವರಿಗೆ ಅತ್ಯಂತ ಶುಭದಾಯಕ. ಏಕೆಂದರೆ 1970-71ರಲ್ಲಿ ವೆಸ್ಟ್ ಇಂಡೀಸ್‍ನಲ್ಲಿ ಅವರ ಮೊದಲ ಸರಣಿಯಲ್ಲೇ ಐತಿಹಾಸಿಕ ಸಾಧನೆ ಮಾಡಿದ್ದರು. ಸೂರ್ಯ ಪೂರ್ವದಲ್ಲಿ ಹುಟ್ಟಿದರೆ, ಸನ್ನಿ ಪಶ್ಚಿಮದಲ್ಲಿ ಹುಟ್ಟಿದ್ದರು. ಅವರ ದಾಖಲೆ ಮುರಿಯುವಂಥ ಅಂತರಾಷ್ಟ್ರೀಯ ಬ್ಯಾಟಿಂಗ್ ಪ್ರದರ್ಶನಕ್ಕಿಂತ 70ರ ಹಾಗೂ 80ರ ದಶಕದ ದೈತ್ಯಾಕಾರದ ವೆಸ್ಟ್ ಇಂಡೀಸ್ ವೇಗದ ಬೌಲರ್ಸ್ ವಿರುದ್ಧಗಳಿಸಿದ 13 ಶತಕಗಳು, ಅದೂ ಹೆಲ್ಮೆಟ್ ಧರಿಸದೇ ಅತೀವ ಏಕಾಗ್ರತೆ, ಕಳಂಕರಹಿತ technique, ಅವರ footwork, balance ವೀಕ್ಷಕರಿಗೆ ರಸದೌತಣ. ಮುಂಬೈನ ದಾದರ್ ಹಿಂದು ಕಾಲೋನಿಯಲ್ಲಿ ಬೆಳದು ಬಂದ ರೀತಿ, ಅಲ್ಲಿನ ವಿಶಿಷ್ಟ ಖಡೂಸ್ ಕ್ರಿಕೆಟ್ ತುಂಬಾ ಸಹಕಾರಿಯಾಯಿತು.

ಹುಟ್ಟಿದ್ದು corporation ಆಸ್ಪತ್ರೆಯಲ್ಲಿ. ಶಿಶುಗಳಿಗೆ ಸ್ನಾನಮಾಡಿಸುವಾಗ, ಒಬ್ಬ ಮೀನುಗಾರ್ತಿಯ ಮಗನೊಂದಿಗೆ ಅದಲುಬದಲಿಯಾದಾಗ, ನೋಡಲು ಬಂದ ಸಂಬಂಧಿ ನಾರಾಯಣ್ ಮಾಸುರೇಕನ್ ಸಂಶಯಿಸಿ, ಕಿವಿಯ ಕೆಳಗಿನ ಮಚ್ಚೆ ಇದ್ದ ಇವರನ್ನು ಹುಡುಕಿತರದಿದ್ದರೆ ಕ್ರಿಕೆಟ್‍ಗೆ ಗಾವಸ್ಕರ್ ಸಿಗುತ್ತಿದ್ದರೇ?

ಕ್ರಿಕೇಟ್‍ನಲ್ಲಿ ಅವರ ಧ್ಯೇಯ, ವಿಕೆಟ್ ಕೊಡಬಾರದು, ಶತಕ ಬಾರಿಸಬೇಕು. ಆದರೆ ಕೆಲವರು ಅವರ ಅತೀವ ಬ್ಯಾಟಿಂಗ್ ಆಬ್ಸೇಷನ್ ಒಂದು ಸೆಲ್ಫೀಶ್ ಆಟಿಡ್ಯೂಡ್‌ ಎಂದು ವ್ಯಕ್ತಿ ಪಡಿಸಿದ್ದುಂಟು. ಉದಾಹರಣೆಗೆ 1975 ರ ಏಕದಿನದ ವಿಶ್ವಕಪ್‍ನಲ್ಲಿ ಇಂಗ್ಲೆಂಡ್ ವಿರುದ್ಧ 60 ಓವರ್ ಬ್ಯಾಟಿಂಗ್ ಮಾಡಿ ಕೇವಲ 36 ರನ್‍ಗಳಿಸಿ, ಆಜೇಯರಾಗಿ ಉಳಿದದ್ದು. ಈ ಪ್ರಶ್ನೆ ಅವರಿಗೆ ಇನ್ನೂ ಕಾಡುತ್ತಿದೆ. ಆದರೆ ಒಬ್ಬ ಅಂತರಾಷ್ಟೀಯ ಕ್ರೀಡಾಪಟು, ಯಶಸ್ವಿಯಾಗ ಬೇಕೆಂದರೆ ಸ್ವಲ್ಪ ಸೆಲ್ಫಿಶ್‌ ಆಗಿರಲೇಬೇಕು. ಅವರ ಫೋಕಸ್‌ ಎಷ್ಟಿರುತ್ತಿತ್ತೆಂದರೆ, ಬ್ಯಾಟಿಂಗ್ ಹೋಗುವ ಮುನ್ನ ದೂರದ ಒಂದು ಸ್ಥಳದಲ್ಲಿ ಪ್ಯಾಡ್ಸ್ ಕಟ್ಟಿ ಕೂರುತ್ತಿದ್ದು, ಯಾರೂ ಅವರ ಹತ್ತರ ಹೋಗುವ  ಹಾಗಿರಲಿಲ್ಲ . ಮಾತನಾಡಿಸಲು ಹೋದ ಅನೇಕರು ಅವರ ಕೋಪಕ್ಕೆ ಗುರಿಯಾಗಿದ್ದಾರೆ.

Gavaskar Scored His First Century Today 21st March 1971 ...

ಇನ್ನು ವಿವಾದಗಳಿಗೇನು ಹೊರತಾಗಿಲ್ಲ. 1980ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ರನ್ಸ್  ಸಿಕ್ಕಿರಲಿಲ್ಲ. ಆದರೆ ಮೆಲ್ಬರ್ನ್ ಟೆಸ್ಟ್‌ನಲ್ಲಿ ಫಾರ್ಮ್‌ ಕಂಡು ಕೊಂಡಾಗ ಅಂಪೈರ್ Rex Whithead ಅವರನ್ನು ಡೆನ್ನಿಸ್‍ ಲಿಲ್ಲಿ ಬೌಲಿಂಗ್‍ನಲ್ಲಿ LBW ಎಂದು ತೀರ್ಪುನೀಡಿದರು. ನಿರ್ಣಯ ತಪ್ಪು ಎಂದು ಕುಪಿತಗೊಂಡು, ಸಹ ಪ್ರಾರಂಭಿಕ ಬ್ಯಾಟ್ಸ್‌ಮನ್ ಚೇತನ್ ಚೌಹಾನ್‍ರನ್ನು ಎಳೆದುಕೊಂಡು ಪೆವಿಲಿಯನ್‍ನತ್ತ ನಡೆದರು. ಆಗ Sledging ಉತ್ತುಂಗದಲ್ಲಿತ್ತು. ಸರಿಯಾದ ಸಮಯದಲ್ಲಿ ತಂಡದ ಮೇನೆಜರ್ Wing Commander Durrani ಓಡಿ ಬಂದು Chetan Chanhan ರನ್ನು ಮರಳಿ ಕಳಿಸಿ, ಗಾವಸ್ಕರ್‌ರನ್ನು ವಾಪಾಸ್ ಕರೆದುಕೊಂಡು ಬಂದರು. ಕ್ರಮ ತೆಗೆದು ಕೊಳ್ಳದೇ ಹೋಗಿದ್ದರೆ, ಅಂತರಾಷ್ಟೀಯ ಕ್ರಿಕೆಟ್‍ನಲ್ಲಿ   ಮೊದಲ Forfeiture ಆಗುತ್ತಿತ್ತು. ಇನ್ನೊಂದೆಂದರೆ 1982 ಬೆಂಗಳೂರಿನಲ್ಲಿ ರಣಜಿ ಟ್ರೋಫಿ semi Finals ಕರ್ನಾಟಕ v/s ಮುಂಬೈ. ಎಲ್ಲ ದಿಗ್ಗಜರೂ ಆಡುತ್ತಿದ್ದರು ಏಕೆಂದರೆ ಆಗ ಇಷ್ಟೊಂದು ಹರಿತ ಅಂತರಾಷ್ಟ್ರೀಯ schedule ಆಗಿರಲಿಲ್ಲ ನಮ್ಮ ಮಿತ್ರ ಎಡಗೈ ಸ್ಪಿನ್ನರ್ Raghuram Bhat ಮೊದಲು ಇನ್ನಿಂಗ್ಸ್‌ನಲ್ಲಿ ಹ್ಯಾಟ್ರಿಕ್  ಸಾಧಿಸಿ, ಲೀಡ್‌ ತಂದು ಕೊಟ್ಟಿದ್ದರು. ಡೆಡ್ಲಿ ಭಟ್‌ ಎದುರಿಸಲು, ಗಾವಸ್ಕರ್ ಎರಡನೇಯ ಇನ್ನಿಂಗ್ಸ್‍ನಲ್ಲಿ ಎಡಗೈ ಬ್ಯಾಟಿಂಗ್ ಮಾಡಿ, ಮಿಕ್ಕ ಬೌಲರುಗಳಿಗೆ ಬಲಗೈ ಬ್ಯಾಟಿಂಗ್ ಮಾಡಿದರು. ಇದು ಎಲ್ಲರಿಗೂ ಶಾಕ್ ಆಯಿತು.

ಪೆವಿಲಿಯನ್‍ನಲ್ಲಿ ನಾವು ಕುಳಿತುನೋಡುತ್ತಿದಂತೆ, ಮುಂಬೈ ಆಟಗಾರರು ಸಂದೀಪ್ ಪಾಟೀಲ್, ದಿಲೀಪ್ ವೆಂಗಸರ್ಕರ್ ಎದ್ದು ನಿಂತು ಕೈ ತೋರಿಸಿ ನಿರಾಸೆ ವೈಕ್ತಪಡಿಸಿದರು. ಆದರೆ ಗಾವಸ್ಕರ್ ತಾವು ಮಾಡಿದ್ದು ಸರಿಯೇ ಎಂದು ವಾದಿಸಿದರು ಔಟಾಗಲಿಲ್ಲ. ಎಲ್ಲರಿಗೂ ಸ್ವಲ್ಪ ಬೇಸರಮೂಡಿತು.

ಗಾವಸ್ಕರ್ ವೈಯಕ್ತಿಕ ಪ್ರಾಯೋಜಕತ್ವದ ರೂವಾರಿ 1983ರಲ್ಲಿ ವೆಸ್ಟ್‌ ಇಂಡಿಸ್ ವಿರುದ್ಧ ಮದ್ರಾಸ್‌ ಟೆಸ್ಟ್‌ನಲ್ಲಿ ತಮ್ಮ ಬ್ಯಾಟ್‍ಗೆ ಎಮ್‌ಆರ್‌ಎಫ್‌ ಹಚ್ಚಿಕೊಂಡು, ಪಾನೀಯ ವಿರಾಮದಲ್ಲಿ ಎಮ್‌ಆರ್‌ಎಫ್ ಸ್ಟಿಕ್ಕರ್‌ ಹಚ್ಚಿಕೊಂಡು ಪ್ರಚಾರ ಮಾಡಿದಾಗ, ಸಹಆಟಗಾರರೆಲ್ಲಾ ಚಕಿತಗೊಂಡರು. ನೋಡಿ ಈಗ ವೈಯಕ್ತಿಕ ಪ್ರಾಯೋಜಕತ್ವ ಯಾವ ಮಟ್ಟಿಕ್ಕಿದೆ!!!

Birthday wishes to Sunil Gavaskar as he turns 70

ಗಾವಸ್ಕರ್‌ರ ಎರಡು ಸ್ಪೆಷಲ್ ಇನ್ನಿಂಗ್ಸ್ ನಾನು ಸ್ಟೇಡಿಯಂನಲ್ಲಿ ನೋಡಿದ್ದೇನೆ. ಒಂದು 1983ರ ಮದ್ರಾಸ್‌ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಾಲ್ಕನೇಯ ಕ್ರಮಾಂಕದಲ್ಲಿ ಬಂದರೂ ಮೊದಲ ಓವರಿನಲ್ಲೇ ಬ್ಯಾಟಿಂಗ್‍ಗೆ ಇಳಿದು ಬಾರಿಸಿದ ದ್ವಿಶತಕ. Roger binny ಪಾಸ್‌ ನೀಡಿದ್ದರಿಂದ ನಾನು ಹಾಗೂ ಮಿತ್ರ ನಂದನ್‍ ಹೋಗಿದ್ದೆವು. ಮತ್ತೊಂದು ಮರೆಯಲಾಗದಂಥ ಇನ್ನಿಂಗ್ಸ್ 1987 ರಲ್ಲಿ ಬೆಂಗಳೂರಿನಲ್ಲಿ  ಇಮ್ರಾನ್‌ ಖಾನ್‌ ನಾಯಕತ್ವದ ಪಾಕಿಸ್ತಾನ್ ತಂಡದ ವಿರುದ್ಧ ಸರಣಿ ನಿರ್ಣಾಯಕ ಪಂದ್ಯ. ಎಲ್ಲೆಡೆಯಲ್ಲೂ ಟೆನ್ಶನ್‌, ಸೂಜಿ ಬಿದ್ದರೂ ಶಬ್ದವಾಗುವ ಸನ್ನಿವೇಶ ನಾವು ಕಣ್ಣು ಮುಚ್ಚಿ ಜಪಿಸುತ್ತಿದ್ದೆವು ಅಂಥ Mine Field ತರಹ ಇರುವ ಪಿಚ್ ಮೇಲೆ ನಾಲ್ಕನೇಯ ನಿರ್ಣಾಯಕ ಇನ್ನಿಂಗ್ಸ್‌ನಲ್ಲಿ ಅವರು ಗಳಿಸಿದ ಅಮೋಘ 96 ರನ್ಸ್ ಗೆಲುವು ತಂದು ಕೊಡಲು ಆಗಲಿಲ್ಲ. ಆದರೆ ಆ ಇನ್ನಿಂಗ್ಸ್ ಮಾತ್ರ ಮನೆಮಾತಾಗಿದೆ.

ಜಿಆರ್ ವಿಶ್ವನಾಥ್‌ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದ್ದರೂ. ಗಾವಸ್ಕರ್ ನನ್ನ ಗುರು ಎಂದು ಎದೆತಟ್ಟಿ ಹೇಳಿಕೋಳ್ಳುತ್ತೇನೆ. ನಿವೃತರಾದ ಮೇಲೆ ಅವರು ತಮ್ಮ ವೃತ್ತಿಪರ ಧೋರಣೆಯಿಂದ ಎಷ್ಟೊಂದು ಸಾಧಿಸಿದರು. ಮೊದಲು ಗಾವಸ್ಕರ್‌ ಪ್ರೆಸೆಂಟ್ಸ್‌ ಎಂಬ ಟಿವಿ ಶೋ ಪ್ರಾರಂಭಿಸಿದರು ಪ್ರೊಫೆಷನಲ್‌ ಮ್ಯಾನೇಜ್‌ಮೆಂಟ್‌ ಗ್ರೂಪ್‌ ಎಂಬ ಕಂಪನಿ ಸ್ಫಾಪಿಸಿ ಸಿಂಡಿಕೇಟೆಡ್‌ ಕಾಲಮ್ಸ್‌ ಹಾಗೂ ಆಟಗಾರರನ್ನು ಮ್ಯಾನೇಜ್‌ ಮಾಡಿದರು (ಇತ್ತೀಚಗೆ Lodha committee ನಿಯಮದ ಹಿತಾಸಕ್ತಿ ಪ್ರಸ್ತಾಪದಲ್ಲಿ ಕಷ್ಟಕ್ಕೆ ಸಿಲುಕಿಕೊಂಡಿದ್ದು ಬೇರೆ ಮಾತು) ವೀಕ್ಷಕ ವಿವರಣೆಯಲ್ಲಿ ಇನ್ನೂ ಮುಂಚೂಣೆಯಲ್ಲೆದ್ದಾರೆ. ಚಾರಿಟಬಲ್‌ ಆರ್ಗನೈಸೇಷನ್‌ಗಳಲ್ಲಿ ಭಾಗಿಯಾಗಿದ್ದಾರೆ. ಪ್ರಮುಖವಾಗಿ ಬಡ ಮಕ್ಕಳ ಉಚಿತ ಹೃದಯ ಶಸ್ತ್ರ ಚಿಕಿತ್ಸೆ ನಡೆಸುತ್ತಾರೆ. ಕೋಟಿಗಟ್ಟಲೇ ಹಣ ವಿದ್ವತ್ತು, ಗುಡ್‌ವಿಲ್‌ ಗಳಿಸಿದ್ದಾರೆ. ಒಂದೊಂದು ಬಾರಿ ಅನ್ನಿಸುತ್ತೆ ಯಾಕೆ ಮಿಕ್ಕ ನಿವೃತ್ತ ಆಟಗಾರರು ಅವರ ಹಾದಿತುಳಿಯಲಿಲ್ಲ?

ಮಾಜಿ ಕ್ರಿಕೆಟರ್ ಗಳಿಗೆ ಏನು ಸಹಾಯ ಮಾಡಲು ಸಿದ್ಧ. ಮಗ ರೋಹನ್‍ನನ್ನು  ಮುಂಬೈ ಕ್ರಿಕೆಟ್ ಒತ್ತಡ ಬೇಡವೆಂದು ಕೊಲ್ಕತ್ತಾಗೆ  ಕಳುಹಿಸಿದರು. ಭಾವೀ ಹಂಡತಿ ಮಾರ್ಶೆನಿಲ್‍ರನ್ನು ಎಡಗೈ ಸ್ಫಿನ್ನರ್ ದಿಲೀಪ್‌ ದೋಷಿ ಪರಿಚಯಿಸಿದ್ದರು. ಆದರೆ ದಿಲೀಪ್‌ ದೋಷಿಗೆ ಹೆಚ್ಚುವರ್ಷ ಗಾವಸ್ಕರ್ ನಾಯಕತ್ವದಲ್ಲಿ ಭಾರತದ ಪರವಾಗಿ ಅವಕಾಶಸಿಗಲಿಲ್ಲ. ಇದಕ್ಕೆ ಗಾವಸ್ಕರ್ ಕಾರಣವೆಂದು ತಮ್ಮ ಆತ್ಮಚರಿತ್ರೆಯಲ್ಲಿ ದೋಷಿ ದೋಷಿಸಿದಾಗ ನಸುನಕ್ಕರು.

ಸುನೀಲ್ ಗಾವಸ್ಕರ್‌ರೊಂದಿಗೆ ಚಂದ್ರಮೌಳಿ ಕಣವಿ

ಚಿನ್ನ ಸ್ವಾಮಿ ಸ್ಟೇಡಿಯಂಗೆ ಕಾಮೇಂಟ್ರಿಗಾಗಿ ಬಂದಾಗ ಪ್ರೆಸ್‌ ಬಾಕ್ಸ್‌ನಲ್ಲಿ ಅವರನ್ನು ಕಾಣುವ ಸಂದರ್ಭ ನನಗೆ ಒದಗುತ್ತಿತ್ತು. ನಾವು ಅವರನ್ನು ನೋಡಿಕೊಳ್ಳುತ್ತಿದ್ದರಿಂದ ಅವರ ವೀಕ್ನೆಸ್‌ ಪಾರ್ಲೆಜಿ ಬಿಸ್ಕತ್ ನೀಡಿ, ಮೂಡ್‌ ನೋಡಿ ಅನೇಕ ಬಾರಿ ಮಾತನಾಡಿಸಿದ್ದೇನೆ.

ನಾನು ಅವರ ಮೇಲೆ ಬರದ ಲೇಖನಗಳನ್ನು ನೀಡಿದಾಗ, ವಿಶ್ವನಾಥ್ ರಿಂದ ಓದಿಸಿ ಕೇಳುತ್ತೇನೆ ಎನ್ನುತ್ತಿದ್ದರು. 2015ರಲ್ಲಿ  ಸ್ಟಾರ್‌ ಸ್ಪೋರ್ಟ್ಸ್‌ ಎಲ್ಲ ಬಾಷೆಗಳಲ್ಲಿ ಏಕದಿನದ ವಿಶ್ವಕಪ್ ಕಾಮೆಂಟ್ರಿ ನಡೆಸಿದಾಗ, ಅಲ್ಲಿ lounge ನಲ್ಲಿ ಅವರ ಜೋಕು ಭರಿತ ಮಾತುಗಳನ್ನು ಕೇಳುವುದೇ ಒಂದು ವರದಾನವಾಗಿತ್ತು. ಆಗ ಅವರೊಂದಿಗೆ ತೆಗೆದುಕೊಂಡ ಭಾವಚಿತ್ರ ಕಳೆದ 6 ವರ್ಷಗಳಿಂದ ನನ್ನ Whatsapp DP ಆಗಿದೆ ಆದನ್ನೆಂದೂ ತೆಗೆಯುವುದಿಲ್ಲ.

ಗಾವಸ್ಕರ್‍ಅವರ ನೇರಮಾತುಗಳು, ಅತೀವ ವೃತ್ತಿಪರ ನಡತೆ, ಎಪ್ಪತ್ತೊಂದಾದರೂ ತೋರುವ ಲವಲವಿಕೆ, ಎಲ್ಲರಿಗೂ ಒಂದು ಮಾದರಿ ಅನ್ನುವುದರಲ್ಲಿ ಸಂದೇಹವಿಲ್ಲ. ಕಿರಿಯರು ಅವರಿಂದ ಕಲಿಯುವವುದು ಸಾಕಷ್ಟಿದೆ. ಸನ್ನಿ ಭಾಯಿ ಹುಟ್ಟುಹಬ್ಬದ ಶುಭಾಶಯಗಳು.


ಇದನ್ನೂ ಓದಿ:  ಕ್ರಿಕೆಟ್‌ ಪ್ರೇಮಿಗಳಿಗೆ ನಿರಾಶೆ: ಏಷ್ಯಾಕಪ್‌ 2020 ರದ್ದು ಮಾಡಿರುವುದಾಗಿ ಬಿಸಿಸಿಐ ಸ್ಪಷ್ಟನೆ!

Spread the love

Leave a Reply

Your email address will not be published. Required fields are marked *