ಪಕ್ಷಾಂತರಿಗಳಿಗೆ 05 ವರ್ಷ ಸಾರ್ವಜನಿಕ ಹುದ್ದೆಗಳಿಂದ ನಿಷೇಧ ಹೇರಬೇಕು: ಕಪಿಲ್ ಸಿಬಲ್‌

ಅಧಿಕಾರ ಹಾಗೂ ಹಣದ ಆಮಿಷಕ್ಕೆ ಒಳಗಾಗಿ ಒಂದು ಪಕ್ಷದಿಂದ ಪಕ್ಷಕ್ಕೆ ಪಕ್ಷಾಂತರವಾಗುವ ರಾಜಕಾರಣಿಗಳನ್ನು 5 ವರ್ಷ ಸಾರ್ವಜನಿಕ ಹುದ್ದೆಯಿಂದ ನಿಷೇಧಿಸಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಖ್ಯಾತ ವಕೀಲರಾದ ಕಪಿಲ್‌ ಸಿಬಲ್‌ ಹೇಳಿದ್ದಾರೆ.

‘ಪಕ್ಷಾಂತರ ಮಾಡಿದವರು ಮುಂದಿನ ಐದು ವರ್ಷಗಳ ಕಾಲ ಯಾವುದೇ ಸಾರ್ವಜನಿಕ ಹುದ್ದೆ ಅನುಭವಿಸುವುದು ಮತ್ತು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕು’ ಎಂದು ಕಪಿಲ್‌ ಸಿಬಲ್‌ ಟ್ವೀಟ್‌ ಮಾಡಿದ್ದಾರೆ.

ರಾಜಸ್ಥಾನದ ರಾಜಕೀಯದಲ್ಲಾಗುತ್ತಿರುವ ತಲ್ಲಣಗಳ ನಡುವೆ ಪಕ್ಷಾಂತರದ ಬಗ್ಗೆ ಮಾತನಾಡಿರುವ ಕಪಿಲ್‌ ಸಿಬಲ್, ‘ಜನರಿಂದ ಆಯ್ಕೆಯಾದ ಸರ್ಕಾರವನ್ನು ‘ಭ್ರಷ್ಟ ಮಾರ್ಗ’ದಿಂದ ಕೆಡವುವಂಥ ವೈರಸ್‌ ದೆಹಲಿಯಲ್ಲಿದೆ. ಇದು ಕೊರೊನಾ‌ ವೈರಸ್‌ನಷ್ಟೇ ಅಪಾಯಕಾರಿ. ಇದನ್ನು ತಡೆಗಟ್ಟಲು ಇರುವ ಮಾರ್ಗವೆಂದರೆ, ಸಂವಿಧಾನದ ಹತ್ತನೇ ವಿಧಿಗೆ ತಿದ್ದುಪಡಿ ಮಾಡುವುದಾಗಿದೆ. ಪಕ್ಷಾಂತರ ನಿಷೇಧ ಕಾನೂನಿಗೆ ತಿದ್ದುಪಡಿ ತಂದು, ಪಕ್ಷಾಂತರಿಗಳು ಐದು ವರ್ಷಗಳ ಕಾಲ ಯಾವುದೇ ಸಾರ್ವಜನಿಕ ಹುದ್ದೆ ಹೊಂದುವುದು ಹಾಗೂ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸಬೇಕು ಎಂದು ಹೇಳಿದ್ದಾರೆ.

ತಾನು ಬಿಜೆಪಿ ಸೇರುವುದಿಲ್ಲ ಎಂದು ಸಚಿನ್‌ ಪೈಲಟ್‌ ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿ, ‘ಅವರ ಘರ್‌ ವಾಪಸಿ ವಿಚಾರ ಏನಾಯಿತು? ಹರಿಯಾಣದಲ್ಲಿ ಕೇಸರಿ ಪಕ್ಷದ ಕಣ್ಗಾವಲಿನಲ್ಲಿ ಸಚಿನ್‌ ಬೆಂಬಲಿಗ ಶಾಸಕರು ರಜೆ ಅನುಭವಿಸುತ್ತಿದ್ದಾರೆಯೇ’ ಎಂದು ಸಿಬಲ್‌ ಪ್ರಶ್ನಿಸಿದ್ದಾರೆ.

https://twitter.com/KapilSibal/status/1283607580162420736?ref_src=twsrc%5Etfw%7Ctwcamp%5Etweetembed%7Ctwterm%5E1283607580162420736%7Ctwgr%5E&ref_url=https%3A%2F%2Fwww.kannadaprabha.com%2Fnation%2F2020%2Fjul%2F19%2Fdefectors-should-be-barred-from-holding-public-office-for-5-years-kapil-sibal-424040.html

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights