ಕ್ರಿಕೆಟ್‌ ವಿಶ್ವಕಪ್‌ನಲ್ಲಿ ಶ್ರಿಲಂಕಾ ಮ್ಯಾಚ್‌ ಫಿಕ್ಸಿಂಗ್‌; ವಿಚಾರಣೆಗೆ ಒಳಗಾದ ಉಪುಲ್‌ ತರಂಗಾ!

2011ರ ವಿಶ್ವಕಪ್​ ಫೈನಲ್​ ಫಿಕ್ಸಿಂಗ್​ ಆರೋಪಕ್ಕೆ ಸಂಬಂಧಿಸಿದಂತೆ ಕ್ರಿಕೆಟ್ ಓಪನರ್​ ಉಪುಲ್​ ತರಂಗಾ ಅವರನ್ನ ತನಿಖಾ ತಂಡ ತನಿಖೆ ನಡೆಸಿದೆ. ಇದರೊಂದಿಗೆ ವಿಚಾರಣೆಗೆ ಒಳಪಟ್ಟ ಮೊದಲ ಲಂಕಾ ಆಟಗಾರ ಆಗಿದ್ದಾರೆ.

9 ವರ್ಷಗಳ ಹಿಂದೆ ಮುಂಬೈನ ವಾಂಖೆಡೆಯಲ್ಲಿ ನಡೆದ ಏಕದಿನ ವಿಶ್ವಕಪ್​ ಫೈನಲ್​ ಪಂದ್ಯ ಫಿಕ್ಸ್ ಆಗಿತ್ತು ಎಂದು ಲಂಕಾ ತಂಡದ ಮಾಜಿ ಕ್ರೀಡಾ ಸಚಿವ ಮಹಿದಾನಂದ ಅಲತುಗಮಗೆ ಗಂಭೀರ ಆರೋಪ ಮಾಡಿದ್ದರು. ಲಂಕಾ ಮಂಡಳಿ ವಿಶ್ವಕಪ್​ ಅನ್ನ ಮಾರಿದರು ಎಂದು ಹೇಳಿ ವಿಶ್ವ ಕ್ರಿಕೆಟ್​ನಲ್ಲಿ ಭಾರೀ ಸುಂಟರಗಾಳಿ ಎಬ್ಬಿಸಿದ್ದರು. ಈ ಆರೋಪಕ್ಕೆ ಸಂಬಂಧಿಸಿದಂತೆ ​ಲಂಕಾದ ಕ್ರೀಡಾ ಸಚಿವಾಲಯ ದೊಡ್ಡ ಮಟ್ಟದ ತನಿಖೆಗೆ ಸೂಚಿಸಿತು.

ಅಂದು ಮುಂಬೈನ ವಾಖೆಂಡೆ ಅಂಗಳದಲ್ಲಿ ನಡೆದ ಅಂತಿಮ ಕದನದಲ್ಲಿ ಗೌತಮ್​ ಗಂಭೀರ್​ (97) ಮತ್ತು ಧೋನಿ (91) ರನ್​ಗಳ ನೆರವಿನಿಂದ ಸುದೀರ್ಘ 28 ವರ್ಷಗಳ ಬಳಿಕ ವಿಶ್ವಕಪ್​ ಎತ್ತಿಹಿಡಿದು ಹೊಸ ಇತಿಹಾಸ ಬರೆದಿತ್ತು.

ಲಂಕಾ ಓಪನರ್ ಉಪುಲ್​ ತರಂಗಾ ಅವರನ್ನ ವಿಚಾರಣೆಗೆ ಒಳಪಡಿಸಿದ ತನಿಖಾ ಅಧಿಕಾರಿಗಳ ತಂಡ ಸತತ ಎರಡು ಗಂಟೆಗಳ ಕಾಲ ವಿಚಾರಣೆ ನಡೆಸಿತು. ವಿಚಾರಣೆ ನಂತರ ಹೊರ ಬಂದ ಉಪುಲ್​ ತರಂಗಾ ತನಿಖೆಗೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನ ಕೇಳಿದರು. ನಾನು ನನ್ನ ಹೇಳಿಕೆಯನ್ನ ನೀಡಿದ್ದೆನೆ ಎಂದಿದ್ದಾರೆ.

ಉಪುಲ್​ ತರಂಗಾ ಅವರನ್ನ ವಿಚಾರಣಗೆ ಒಳಪಡಿಸುವ ಮುನ್ನ ಲಂಕಾ ಪೊಲೀಸರು ಮಾಜಿ ನಾಯಕ ಅರವಿಂದ ಡಿ’ಸಿಲ್ವಾ ಮತ್ತು ಮಾಜಿ ಕ್ರೀಡಾ ಸಚಿವ ಮಹಿದಾನಂದ ಅಲತುಗಮಗೆ ಅವರನ್ನ ವಿಚಾರಣೆಗೆ ಒಳಪಡಿಸಿತ್ತು.
ಇದೇ ಆರೋಪಕ್ಕೆ ಸಂಬಂಧಿಸಿದಂತೆ ಲಂಕಾ ಪೊಲೀಸರು ಮಾಜಿ  ನಾಯಕ ಅರವಿಂದ ಡಿ’ಸಿಲ್ವಾ ಅವರನ್ನ ವಿಚಾರಣೆಗೆ ಒಳಪಡಿಸಿದ್ದಾರೆ. ಮ್ಯಾಚ್​ ಫಿಕ್ಸಿಂಗ್​ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಅಲತುಗಮಗೆಯನ್ನ ಪ್ರಶ್ನಿಸಿದಾಗ ಯು ಟರ್ನ್​ ಹೊಡೆದಿದ್ದರು. ಇದೀಗ ಅರವಿಂದ ಡಿ’ಸಿಲ್ವಾ ಅವರ ಹೇಳಿಕೆಯನ್ನ ಲಂಕಾ ಪೊಲೀಸರು ದಾಖಲಿಸಿದ್ದಾರೆ

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights