ಜಾತ್ಯತೀತತೆ, ಪೌರತ್ವ, ರಾಷ್ಟ್ರೀಯತೆ, ಪ್ರಜಾಪ್ರಭುತ್ವದ ಹಕ್ಕುಗಳನ್ನು ಪಠ್ಯಕ್ರಮದಿಂದ ಕೈಬಿಟ್ಟ ಸಿಬಿಎಸ್‌ಇ

ಜಾತ್ಯತೀತತೆ, ಪೌರತ್ವ, ರಾಷ್ಟ್ರೀಯತೆ, ನೋಟು ನಿಷೇಧ, ಪ್ರಜಾಪ್ರಭುತ್ವದ ಹಕ್ಕುಗಳೇನು ಎಂಬುದನ್ನೇ ಇಂದಿನ ಯುವಜನಾಂಗ ಮರೆಯುತ್ತಿದೆ. ಸದ್ಯ ಪಠ್ಯಕ್ರಮದಲ್ಲಿದ್ದ ಕಾರಣಕ್ಕಾಗಿ ಯಾದರೂ ಅವುಗಳ ಮೌಲ್ಯವನ್ನು ವಿದ್ಯಾರ್ಥಿಗಳು ಅರಿಯುತ್ತಿದ್ದರು. ಆದರೆ, ಈಗ ಸಿಬಿಎಸ್‌ಇ ಬೋರ್ಡ್‌ ಅದಕ್ಕೂ ಕಲ್ಲು ಹಾಕಿದೆ.

ಜಾತ್ಯತೀತತೆ, ಪೌರತ್ವ, ರಾಷ್ಟ್ರೀಯತೆ, ನೋಟು ನಿಷೇಧ, ಪ್ರಜಾಪ್ರಭುತ್ವದ ಹಕ್ಕುಗಳ ಅಧ್ಯಯನವನ್ನು ಪಠ್ಯಕ್ರಮದಿಂದ ಸಿಬಿಎಸ್‌ಇ ಕೈಬಿಟ್ಟಿದೆ.

ಕೊರೊನಾ ಹಿನ್ನೆಲೆ ಪಠ್ಯ ಕ್ರಮಗಳನ್ನು ಕಡಿತಗೊಳಿಸುತ್ತಿರುವುದರಿಂದ ಈ ಎಲ್ಲಾ ಅಂಶಗಳ ಬಗ್ಗೆ ವಿವರಣೆ ನೀಡುವ ಪಾಠಗಳನ್ನು ಪಠ್ಯಕ್ರಮದಿಂದ ಹೊರಗಿಡಲು ಸಿಬಿಎಸ್ಇ ನಿರ್ಧರಿಸಿದ್ದು ವಿದ್ಯಾರ್ಥಿಗಳು ಇದರ ಕುರಿತು ಪರೀಕ್ಷೆಗಳಿಗಾಗಿ ತಯಾರಿ ನಡೆಸಬೇಕಿಲ್ಲ ಎಂದು ಅಧಿಸೂಚನೆ ಹೊರಡಿಸಲಾಗಿದೆ.

2020-21 ರ ಶೈಕ್ಷಣಿಕ ವರ್ಷಕ್ಕೆ 9-12 ತರಗತಿಗಳಿಗೆ ಸಿಬಿಎಸ್ ಇ ಜು.8 ರಂದು ಹೊಸ ಪಠ್ಯಕ್ರಮವನ್ನು ಘೋಷಿಸಿದ್ದು,  ಶೇ.30 ರಷ್ಟು ಪಠ್ಯವನ್ನು ಕಡಿತಗೊಳಿಸಿದೆ.

10 ನೇ ತರಗತಿಯಲ್ಲಿ ಪ್ರಜಾಪ್ರಭುತ್ವ, ವೈವಿಧ್ಯತೆ, ಲಿಂಗ, ಧರ್ಮ, ಜಾತಿ ಹಾಗೂ ಖ್ಯಾತ ಹೋರಾಟ, ಚಳುವಳಿ, ಪ್ರಜಾಪ್ರಭುತ್ವದ ಸವಾಲುಗಳಿಗೆ ಸಂಬಂಧಪಟ್ಟ ಪಠ್ಯಗಳನ್ನು ಕೈಬಿಡಲಾಗಿದೆ. 11 ನೇ ತರಗತಿಯಿಂದ ಪೌರತ್ವ, ರಾಷ್ಟ್ರೀಯತೆ, ಜಾತ್ಯಾತೀತತೆ, ಫೆಡರಲಿಸಮ್, ಭಾರತದಲ್ಲಿ ಸ್ಥಳೀಯ ಸರ್ಕಾರಗಳ ಬೆಳವಣಿಗೆಯ ಅಂಶಗಳನ್ನು ಪಠ್ಯದಿಂದ ಕೈಬಿಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights