ಪಾಕ್‌ ಕ್ರಿಕೆಟ್‌ ತಂಡದ 10 ಮಂದಿಗೆ ಕೊರೊನಾ; ಇಂಗ್ಲೆಂಡ್‌-ಪಾಕ್‌ ಪಂದ್ಯದ ಕತೆ?

ಕ್ರಿಕೆಟ್​​ ಮತ್ತೆ ಆರಂಭ ಆಗುತ್ತೆ ಅನ್ನುವಾಗಲೇ ಕೊರೊನಾ ದೊಡ್ಡ ಶಾಕ್​ ನೀಡಿದೆ. ಪಾಕಿಸ್ತಾನ ಕ್ರಿಕೆಟ್​ ತಂಡ ಇನ್ನೇನು ಇಂಗ್ಲೆಂಡ್​ನಲ್ಲಿ ಕ್ರಿಕೆಟ್​​​ ಆಡಲು ವಿಮಾನ ಹತ್ತಲಿದೆ ಅನ್ನುವಾಗಲೇ ಮೇಲಿಂದ ಮೇಲೆ ಕೊರೊನಾ ಪಾಸಿಟಿವ್​ ಕೇಸ್​ ಗಳು ಪತ್ತೆಯಾಗಿದೆ. ಇಂಗ್ಲೆಂಡ್​ನಲ್ಲಿ ಕ್ರಿಕೆಟ್​ ಆಡಬೇಕಿದ್ದ 18 ಆಟಗಾರರ ಪೈಕಿ ಪಾಕಿಸ್ತಾನ ತಂಡದ 10 ಆಟಗಾರರಿಗೆ ಕೊರೊನಾ ಪಾಸಿಟ್​ ಬಂದಿದೆ. ಪಾಕ್​ ಕ್ರಿಕೆಟ್​ ಬೋರ್ಡ್​ ಚೀಫ್​ ಎಕ್ಸಿಕ್ಯುಟಿವ್​ ವಾಸಿಂ ಖಾನ್​ ಈ ವಿಷಯವನ್ನು ದೃಢಪಡಿಸಿದ್ದಾರೆ.

ಇಂಗ್ಲೆಂಡ್ ವಿಮಾನ ಹತ್ತುವ ಮೊದಲು ಪಾಕ್​ ಕ್ರಿಕೆಟಿಗರು ಕೋವಿಡ್​19 ಟೆಸ್ಟ್​ಗೆ ಒಳಗಾಗಬೇಕಿತ್ತು. ಕಳೆದ ವಾರ ನಡೆದ ಟೆಸ್ಟ್​ನಲ್ಲಿ ಕೆಲ ಕ್ರಿಟಿಗರು ಪಾಸ್​ ಆಗಿದ್ದರು. ಆದ್ರೆ ಈಗ ನಡೆದ ಟೆಸ್ಟ್​ನಲ್ಲಿ ಪಾಕ್​ ಕ್ರಿಕೆಟ್​ ತಂಡದ 10 ಆಟಗಾರರಿಗೆ ಕೋವಿಡ್​ 19 ಪಾಸಿಟಿವ್​ ಆಗಿದೆ. ಶಾದಾಬ್​ ಖಾನ್​, ಹ್ಯಾರಿಸ್​ ರೌಫ್​, ಹೈದರ್​ ಆಲಿ, ಫಕರ್​ ಝಮಾನ್​, ಮೊಹಮ್ಮದ್​ ರಿಜ್ವಾನ್​​, ವಹಾಬ್​ ರಿಯಾಜ್​, ಇಮ್ರಾನ್​ ಖಾನ್​, ಮೊಹಮ್ಮದ್​ ಹಫೀಝ್​, ಮೊಹಮ್ಮದ್​ ಹಸ್ನೈನ್​ ಮತ್ತು ಖಾಶಿಫ್​ ಭಟ್ಟಿ ಇಂಗ್ಲೆಂಡ್​ ಪ್ರಯಾಣ ಮಾಡುವ ಹಾಗಿಲ್ಲ.

ಪಾಕಿಸ್ತಾನ ಇಂಗ್ಲೆಂಡ್​ನಲ್ಲಿ 3 ಟೆಸ್ಟ್​ ಮತ್ತು 3 ಟಿ-20 ಪಂದ್ಯಗಳನ್ನು ಆಡಲು ತಯಾರಿ ನಡೆಸುತ್ತಿತ್ತು. ಜುಲೈ ಮೊದಲ ವಾರದಲ್ಲಿ ಪಾಕಿಸ್ತಾನ ಮತ್ತು ಇಂಗ್ಲೆಂಡ್​ ನಡುವೆ ಕ್ರಿಕೆಟ್​ ಸರಣಿ ಆರಂಭವಾಗಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights