ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ನಾಲ್ವರ ಬರ್ಬರ ಕೊಲೆ : ಬೀದಿಯಲ್ಲಿ ಬಿದ್ದ ಶವಗಳನ್ನು ಕಂಡು ಬೆಚ್ಚಿದ ಜನ!

ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸುಕಾಲಪೇಟೆಯಲ್ಲಿ ನಾಲ್ಕವರನ್ನು ಬರ್ಬರ ಕೊಲೆ ಮಾಡಿದ ಪ್ರಕರಣ ಜನರನ್ನ ಬೆಚ್ಚಿ ಬೀಳಿಸಿದೆ.

5 ತಿಂಗಳ ಹಿಂದೆ ನಡೆದಿದ್ದ ಪ್ರೇಮ ವಿವಾಹದಿಂದ ಹುಟ್ಟಿಕೊಂಡಿದ್ದ ಧ್ವೇಷ ನಾಲ್ವರನ್ನು ಬಲಿ ಪಡೆದುಕೊಂಡಿದೆ. ಕೊಲೆಯಾದವರು ಒಂದೇ ಕುಟುಂಬದವರಾಗಿದ್ದು ಇವರಲ್ಲಿ ಇಬ್ಬರು ಮಹಿಳೆಯರು ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ.

ಕಲ್ಲು ದೊಣ್ಣೆಗಳಿಂದ ಹೊಡೆದು ಕೊಲೆ ಮಾಡಲಾಗಿದ್ದು ಯುವತಿ ಮನೆಯವರಿಂದಲೇ ಹತ್ಯೆ ಆರೋಪ ಕೇಳಿಬಂದಿದೆ. ಬೀದಿಯಲ್ಲಿ ಬಿದ್ದ ಶವಗಳನ್ನು ನೋಡಿ ಜನ ಬೆಚ್ಚಿ ಬಿದ್ದಿದ್ದಾರೆ.

ನಾಗರಾಜ, ಸುಶೀಲಮ್ಮ, ಶ್ರೀದೇವಿ, ಹನುಮೇಶ್ ಹತ್ಯೆಗೊಳಗಾದ ದುರ್ದೈವಿಗಳು. ಇನ್ನಿಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿಯ ಕಡೆಯರಾದ ಅಂಬಣ್ಣ ಹಾಗೂ ಪಕ್ಕೀರಪ್ಪ ಎನ್ನುವವರು ಈ ಭೀಕರ ಕೃತ್ಯ ಎಸಗಿದ ಆರೋಪಿಗಳಾಗಿದ್ದಾರೆ.

ಯುವಕ-ಯುವತಿ ಪ್ರೀತಿಸಿ ಕಳೆದ 5 ತಿಂಗಳ ಹಿಂದೆ ಮದುವೆಯಾಗಿದ್ದರು. ಇದಕ್ಕೆ ಯುವತಿಯ ಮನೆಯಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ವಿರೋಧದದ ನಡುವೆಯೂ ಮದುವೆ ನಡೆದಿತ್ತು. ಇಂದು ಬೆಳಿಗ್ಗೆ ಇಬ್ಬರು ಕುಟುಂಬಸ್ಥರ ನಡುವೆ ವಾಗ್ವಾದ ಉಂಟಾಗಿದೆ. ಜಗಳ ವಿಕೋಪಕ್ಕೆ ಹೋದ ಕಾರಣ ನಾಲ್ವರು ಕೊಲೆಯಾಗಿದ್ದಾರೆ. ಅದೃಷ್ಟವಶಾತ್ ಕೊಲೆ ಬೆದರಿಕೆಯಿಂದ ಯುವಕ-ಯುವತಿ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದರಿಂದ ಅಪಾಯದಿಮದ ತಪ್ಪಿಸಿಕೊಂಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights