ರಾಜ್ಯದಲ್ಲಿಂದು 8,865 ಕೊರೊನಾ ಕೇಸ್ ದೃಢ : 104 ಸೋಂಕಿತರು ಮಹಾಮಾರಿಗೆ ಬಲಿ!

ಕರ್ನಾಟಕಕ್ಕೆ ಕೊರೊನಾ ಕಂಟಕ ಕೈಬಿಡುವಂತೆ ಕಾಣಿಸುತ್ತಿಲ್ಲ. ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಸಾವಿನ ಸಂಖ್ಯೆ ಜನರಲ್ಲಿ ಆತಂಕವನ್ನೇ ಸೃಷ್ಟಿ ಮಾಡಿದೆ.

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಬರೋಬ್ಬರಿ 8865 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 104 ಸೋಂಕಿತರು ಮಹಾಮಾರಿ ಕೊರೊನಾಕ್ಕೆ ಬಲಿಯಾಗಿದ್ದಾರೆ. ಈವರೆಗೆ ರಾಜ್ಯದಲ್ಲಿ 3,70, 206 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದುವರೆಗೆ ಮೃತಪಟ್ಟವರ ಸಂಖ್ಯೆ 6054ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ವರದಿ ನೀಡಿದೆ.

ಇಂದು ಬೆಂಗಳೂರು ನಗರವೊಂದರಲ್ಲೆ ಅತಿ ಹೆಚ್ಚು ಅಂದರೆ 3189 ಹೊಸ ಪ್ರಕರಣಗಳು ವರದಿಯಾಗಿದ್ದು, ರಾಜ್ಯದಲ್ಲಿ ಒಟ್ಟು 8865 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ.ಇಂದು ರಾಜ್ಯದಲ್ಲಿ ಸಾವನ್ನಪ್ಪಿದ 104 ಪೈಕಿ 24 ಜನ ಬೆಂಗಳೂರಿಗರಾಗಿದ್ದಾರೆಂದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಇಂದು 7122 ಮಂದಿ ಆಸ್ಪತ್ಪೆಯಿಂದ ಡಿಸ್ಚಾರ್ಜ್ ಆಗಿದ್ದು, ಗುಣಮುಖರಾದವರ ಸಂಖ್ಯೆ 2,68,035ಕ್ಕೆ ಏರಿಕೆಯಾಗಿದೆ. 96,098 ಮಂದಿ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 735 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಬೆಂಗಳೂರು ಹೊರತುಪಡಿಸಿದರೆ ಮೈಸೂರು, ಬೆಳಗಾವಿ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಪಾಸಿಟಿವ್‌ ಕೇಸ್‌ಗಳು ಹೆಚ್ಚಾಗಿ ಕಂಡುಬಂದಿವೆ. ಈ ಮೂರು ಜಿಲ್ಲೆಗಳಲ್ಲಿ ಕ್ರಮವಾಗಿ 475, 454 ಹಾಗೂ 424 ಪ್ರಕರಣಗಳು ಪತ್ತೆಯಾಗಿವೆ. ಇನ್ನು, ಬಾಗಲಕೋಟೆ 123, ಬೆಂಗಳೂರು ಗ್ರಾಮಾಂತರ 160, ಬೀದರ್‌ 56, ಚಾಮರಾಜನಗರ 43, ಚಿಕ್ಕಬಳ್ಳಾಪುರ 104, ಚಿಕ್ಕಮಗಳೂರು 123, ಚಿತ್ರದುರ್ಗ 151 ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 316 ಕೇಸ್‌ಗಳು ಕಂಡುಬಂದಿವೆ.

ರಾಯಚೂರು 161, ರಾಮನಗರ 67, ಶಿವಮೊಗ್ಗ 251, ತುಮಕೂರು 132, ಉಡುಪಿ 228, ದಾವಣಗೆರೆಯಲ್ಲಿ 222, ಧಾರವಾಡ 342, ಗದಗ 183, ಹಾವೇರಿ 252, ಕಲಬುರಗಿ 195, ಕೊಡಗು 82, ಕೋಲಾರ 103, ಕೊಪ್ಪಳ 226, ಮಂಡ್ಯ 239, ಉತ್ತರ ಕನ್ನಡ 182, ವಿಜಯಪುರ 131 ಹಾಗೂ ಯಾದಗಿರಿಯಲ್ಲಿ 112 ಹೊಸ ಕೇಸ್‌ಗಳು ಪತ್ತೆಯಾಗಿವೆ.

Spread the love

Leave a Reply

Your email address will not be published. Required fields are marked *