ಭಾರತೀಯ ನೌಕಾಪಡೆಯ ಯುದ್ದ ಹಡಗಿಗೆ ಮೊದಲ ಬಾರಿಗೆ ಮಹಿಳಾ ಅಧಿಕಾರಿಗಳ ನೇಮಕ!

ಭಾರತೀಯ ನೌಕಾಸೇನೆಯ ಯುದ್ಧ ಹಡಗಿಗೆ ಇಬ್ಬರು ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹಾಗಾಗಿ ನೌಕಾಸೇನೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಯುದ್ದ ಹಡಗಿನಲ್ಲಿ ಮಹಿಳಾ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದಾರೆ.

ಕೊಚ್ಚಿಯ ನೌಕಾ ನೆಲೆಯಲ್ಲಿ ನಡೆದ ಸಮಾರಂಭದಲ್ಲಿ, ಭಾರತೀಯ ನೌಕಾಸೇನೆಯ ಐಎನ್‌ಎಸ್‌ ಗರುಡ ಎಂಬ ಯುದ್ಧ ಹಡಗಿನಲ್ಲಿ ಕರ್ತವ್ಯ ನಿರ್ವಹಿಸಲು ಮಹಿಳಾ ಅಧಿಕಾರಿಗಳಾದ ಸಬ್ ಲೆಫ್ಟಿನೆಂಟ್ ಕುಮುದಿನಿ ತ್ಯಾಗಿ ಹಾಗೂ ಸಬ್ ಲೆಫ್ಟಿನೆಂಟ್ ರಿತಿ ಸಿಂಗ್ ಅವರನ್ನು  ನೇಮಕ ಮಾಡಿಕೊಳ್ಳಲಾಗಿದೆ. ಈ ಮೂಲಕ ಈ ಇಬ್ಬರೂ ಅಧಿಕಾರಿಗಳು ಅಧಿಕೃತವಾಗಿ ಸೇರ್ಪಡೆಗೊಂಡರು.

ನೌಕಾಪಡೆಯ ಮಲ್ಟಿ-ರೋಲ್ ಹೆಲಿಕಾಪ್ಟರ್‌ಗಳಲ್ಲಿ ಸೋನಾರ್ ಕನ್ಸೋಲ್‌ಗಳು ಮತ್ತು ಇಂಟೆಲಿಜೆನ್ಸ್, ಕಣ್ಗಾವಲು ಮತ್ತು ಮರುಪರಿಶೀಲನೆ (ಐಎಸ್‌ಆರ್) ತರಬೇತಿ ಪಡೆಯುತ್ತಿದ್ದ ಈ ಇಬ್ಬರೂ ಮಹಿಳಾ ಅಧಿಕಾರಿಗಳನ್ನು ಐಎನ್‌ಎಸ್ ಗರುಡ ಹಡಗಿಗೆ ನೇಮಿಸಿಕೊಳ್ಳಲಾಗಿದ್ದು, ಇವರು ನೌಕಾಪಡೆಯ MH-60 R ಹೆಲಿಕಾಪ್ಟರ್‌ಗಳಲ್ಲಿ ಹಾರಾಟ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

MH-60 R ಹೆಲಿಕಾಪ್ಟರ್‌ಗಳನ್ನು ಶತ್ರು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚಲು ವಿನ್ಯಾಸಗೊಳಿಸಲಾಗಿದೆ.

ಭಾರತೀಯ ವಾಯುಸೇನೆ ತನ್ನ ರಫೇಲ್ ಯುದ್ಧ ವಿಮಾನದಲ್ಲಿ ಕಾರ್ಯ ನಿರ್ವಹಿಸಲು ಮಹಿಳಾ ಫೈಟರ್ ಪೈಲಟ್‌ ಒಬ್ಬರನ್ನು ನೇಮಕ ಮಾಡಲಿದೆ ಎಂದು ಘೋಷಿಸಿದೆ.


ಇದನ್ನೂ ಓದಿ: ನೌಕಾಯಾನಕ್ಕೆ ಪುರುಷರಷ್ಟೇ ಮಹಿಳಾ ಅಧಿಕರಿಗಳೂ ಸಮರ್ಥರು: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights