ಸೂರತ್: ಒಎನ್‌ಜಿಸಿ ಸ್ಥಾವರದ ಮುಖ್ಯ ಟರ್ಮಿನಲ್ ಸಾಲಿನಲ್ಲಿ ಭಾರಿ ಸ್ಪೋಟ!

ಸತತ ಮೂರು ಸ್ಫೋಟಗಳು ಸೂರತ್ ನಗರದ ಒಎನ್‌ಜಿಸಿಯ ಹಜೀರಾ ಸ್ಥಾವರದಲ್ಲಿ ಗುರುವಾರ ಮುಂಜಾನೆ ಮುಖ್ಯ ಟರ್ಮಿನಲ್ ಸಾಲಿನಲ್ಲಿ ಭಾರಿ ಬೆಂಕಿಗೆ ಕಾರಣವಾಯಿತು. ಜಿಲ್ಲಾಡಳಿತದಿಂದ ಇದುವರೆಗೆ ಯಾವುದೇ ಪ್ರಾಣಹಾನಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿದೆ.

ಸೂರತ್ ಜಿಲ್ಲಾಧಿಕಾರಿ ಡಾ.ಧವಲ್ ಪಟೇಲ್ ಅವರು, “ಈ ಘಟನೆ ಒಎನ್‌ಜಿಸಿ ಹಜೀರಾ ಸ್ಥಾವರದಲ್ಲಿ ನಡೆದಿದ್ದು, ಅಲ್ಲಿ ಜಲ ಇಂಗಾಲದ ಆವಿಯ ಮೋಡವು ಕಾಣಿಸಿಕೊಂಡಿತು. ಸತತ ಮೂರು ಸ್ಫೋಟಗಳ ನಂತರ ಬೆಳಿಗ್ಗೆ 3.05 ಕ್ಕೆ ಬೆಂಕಿ ಕಾಣಿಸಿಕೊಂಡಿದೆ. ಹಲವಾರು ಅಗ್ನಿಶಾಮಕ ಟೆಂಡರ್‌ಗಳು ಸ್ಥಳದಲ್ಲಿದ್ದು, ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ.

“ಗ್ಯಾಸ್ ಟರ್ಮಿನಲ್ ಸ್ಥಾವರದಲ್ಲಿ ಬೆಂಕಿ ಸಂಭವಿಸಿದೆ. ವಾಯು ಒತ್ತಡವನ್ನು ಕಡಿಮೆ ಮಾಡುವ ತಾಂತ್ರಿಕ ಚಟುವಟಿಕೆಯನ್ನು ಒಎನ್‌ಜಿಸಿ ಅಧಿಕಾರಿಗಳು ನಡೆಸಿದ್ದಾರೆ. ನಿಧಾನವಾಗಿ, ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗುತ್ತಿದೆ. ಪ್ರದೇಶದ ಜನರನ್ನು ಸ್ಥಳಾಂತರಿಸುವ ಅಗತ್ಯವಿಲ್ಲ. ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ”ಎಂದು ಸೂರತ್ ಜಿಲ್ಲಾಧಿಕಾರಿ ಡಾ.ಧವಲ್ ಪಟೇಲ್ ಹೇಳಿದ್ದಾರೆ.

ಸೂರತ್ ಮುನ್ಸಿಪಲ್ ಕಾರ್ಪೋರೇಶನ್‌ನ ಹಲವಾರು ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಮತ್ತು ಹಜೀರಾದಲ್ಲಿನ ಇತರ ಕಂಪನಿಗಳವರು ಸ್ಥಳದಲ್ಲಿದ್ದಾರೆ. ಸ್ಥಳದಲ್ಲಿ ಹಲವಾರು ಪೊಲೀಸರನ್ನು ನಿಯೋಜಿಸಲಾಗಿದೆ. ಈ ಘಟನೆಯಿಂದಾಗಿ ಮುಖ್ಯ ರಸ್ತೆಯ ಉದ್ದಕ್ಕೂ ಸಂಚಾರ ದಟ್ಟಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights