ಅಯೋಧ್ಯೆಯ ರಾಮಮಂದಿರಕ್ಕಿಂತಲೂ ಭವ್ಯ ಸೀತಾಮಂದಿರ ಕಟ್ಟುತ್ತೇನೆ: ಚಿರಾಗ್ ಪಾಸ್ವಾನ್
ಹಾರದ ಸೀತಾಮಹ್ರಿಯಲ್ಲಿ ಭವ್ಯವಾದ ಸೀತಾ ಮಂದಿರವನ್ನು ನಿರ್ಮಿಸುವುದು ನನ್ನ ಕನಸಾಗಿದೆ. ಹಾಗಾಗಿ ಅಯೋಧ್ಯೆಯ ರಾಮ ಮಂದಿರಕ್ಕಿಂತಲೂ ಭವ್ಯವಾದ ಸೀತಾ ಮಂದಿರನ್ನು ನಿರ್ಮಿಸಲು ಶ್ರಮಿಸುತ್ತೇನೆ ಎಂದು ಎಲ್ಜೆಪಿ ಮುಖ್ಯಸ್ಥ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಸೀತಾಮಹ್ರಿಯಲ್ಲಿರುವ ಸೀತಾ ದೇವಾಲಯಕ್ಕೆ ಭೇಟಿ ನೀಡಿದ ನಂತರ ಮಾತನಾಡಿರುವ ಚಿರಾಗ್ ಪಾಸ್ವಾನ್, ಸೀತಾ ಮಾತೆಯಿಲ್ಲದೇ ಪ್ರಭು ಶ್ರೀರಾಮ ಅಪೂರ್ಣ. ಹಾಗೆಯೇ ಪ್ರಭು ಶ್ರೀರಾಮನಿಲ್ಲದೇ ಸೀತಾಮಾತೆಯೂ ಅಪೂರ್ಣ. ಹೀಗಾಗಿ ಅಯೋಧ್ಯೆಯಲ್ಲಿ ನಿರ್ಮಾಣವಾಗುವ ರಾಮ ಮಂದಿರಕ್ಕಿಂತಲೂ ದೊಡ್ಡದಾದ ಸೀತಾ ಮಂದಿರವನ್ನು ಸೀತಾಮಹ್ರಿಯಲ್ಲಿ ನಿರ್ಮಿಸುವ ಉದ್ದೇಶ ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಕೇವಲ ಸೀತಾಮಾತೆ ಮಂದಿರ ನಿರ್ಮಾಣ ಮಾತ್ರವಲ್ಲದೇ ಅದನ್ನು ಅಯೋಧ್ಯೆಯ ರಾಮ ಮಂದಿರಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಯೂ ಇದೆ. ಎರಡೂ ದೇವಾಲಯಗಳ ಮಧ್ಯೆ ಸಂಪರ್ಕ ಕಲ್ಪಿಸಿ, ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡುವ ಭಕ್ತಾದಿಗಳು ಸೀತಾಮಹ್ರಿಗೂ ಭೇಟಿ ನೀಡಿ ಸೀತಾಮಾತೆಯ ದರ್ಶನ ಪಡೆಯುವಂತೆ ಅವಕಾಶ ಕಲ್ಪಿಸಲಾಗುವುದು ಎಂದು ಚಿರಾಗ್ ಹೇಳಿದ್ದಾರೆ.
#WATCH I want a temple bigger than #RamMandir in Ayodhya to be built for Goddess Sita in Sitamarhi. Lord Ram is incomplete without Goddess Sita, & vice versa. So, a corridor connecting Ayodhya's Ram Temple & Sitamarhi should be constructed: LJP chief Chirag Paswan https://t.co/tyAL5cLrMg pic.twitter.com/cZR8Cc8LqF
— ANI (@ANI) October 25, 2020
ಚುನಾವಣೆಗೆ ಬಿಜೆಪಿಯು ಅಯೋಧ್ಯೆಯ ರಾಮಮಂದಿರವನ್ನು ಬಳಸಿಕೊಳ್ಳುತ್ತಿತ್ತು. ಇದೀಗ ಬಿಹಾರ ಚುನಾವಣೆಗೆ ಎಲ್ಜೆಪಿ ಪಕ್ಷವು ಸೀತಾ ಮಂದಿರದ ಹೆಸರೇಳಿ ರಾಜಕೀಯಕ್ಕೆ ಮುಂದಾಗಿದೆ ಎಂದು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: ಬಿಹಾರ ಚುನಾವಣೆ: ಜೆಡಿಆರ್ ಪಕ್ಷದ ಅಭ್ಯರ್ಥಿಗೆ ಗುಂಡು ಹಾರಿಸಿ ಹತ್ಯೆ!