ರಿಪಬ್ಲಿಕ್ ಭಾರತ್ ಗೆ ಬ್ರಿಟನ್ ಸಂವಹನ ನಿಯಂತ್ರಕ ಪ್ರಾಧಿಕಾರದಿಂದ ದಂಡ..!

ಅರ್ನಬ್ ಗೋಸ್ವಾಮಿ ಸಂಪಾದಕತ್ವದ ಹಿಂದಿ ಸುದ್ದಿ ವಾಹಿನಿ ರಿಪಬ್ಲಿಕ್ ಭಾರತ್ ಗೆ ಬ್ರಿಟನ್ ಸಂವಹನ ನಿಯಂತ್ರಕ ಪ್ರಾಧಿಕಾರ ಅಸಭ್ಯ ಪದ, ದ್ವೇಷಪೂರಿತ ಹೇಳಿಕೆಗಳ ಬಳಕೆಯ ಆರೋಪದಲ್ಲಿ 20,000 ಪೌಂಡ್ (ಅಂದಾಜು 19.73 ಲಕ್ಷ) ದಂಡ ವಿಧಿಸಿದೆ.

ಅಸಭ್ಯ ಭಾಷೆ, ದ್ವೇಷಪೂರಿತ ಹೇಳಿಕೆ ಮತ್ತು ನಿಂದನಾತ್ಮಕ ಅಥವಾ ವ್ಯಕ್ತಿ, ಗುಂಪುಗಳು, ಧರ್ಮಗಳು ಅಥವಾ ಸಮುದಾಯಗಳ ಅವಹೇಳನೆಯ ಅಂಶಗಳನ್ನು ಒಳಗೊಂಡ ವಿಚಾರಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಯುನೈಟೆಡ್ ಕಿಂಗ್‌ಡಮ್‌ನ ಸಂವಹನ ಕಚೇರಿ ಈ ದಂಡ ವಿಧಿಸಿದೆ. ಇದರ ಜತೆಗೆ ರಿಪಬ್ಲಿಕ್ ಭಾರತ್ ವಾಹಿನಿಯು ತನ್ನ ಚಾನೆಲ್‌ನಲ್ಲಿ ಕ್ಷಮೆಯನ್ನೂ ಪ್ರಸಾರ ಮಾಡಬೇಕು ಎಂದು ಅದು ಆಗ್ರಹಿಸಿದೆ.

ಭಾರತದ ಚಂದ್ರಯಾನ 2 ಬಾಹ್ಯಾಕಾಶ ಯೋಜನೆಯ ನೌಕೆಯ ಉಡಾವಣೆಗೆ ಸಂಬಂಧಿಸಿದಂತೆ ನಡೆದ ಕಾರ್ಯಕ್ರಮದಲ್ಲಿ, ಭಾರತದ ಬಾಹ್ಯಾಕಾಶ ಸಂಶೋಧನೆಗಳು ಮತ್ತು ತಂತ್ರಜ್ಞಾನ ಕ್ಷೇತ್ರದ ಸಾಧನೆಗಳನ್ನು ಪಾಕಿಸ್ತಾನಕ್ಕೆ ಹೋಲಿಸಲಾಗಿತ್ತು. ಪಾಕಿಸ್ತಾನವು ಭಾರತವನ್ನು ಗುರಿಯನ್ನಾಗಿಸಿ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಆರೋಪಿಸಲಾಗಿತ್ತು’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights