ಭುಗಿಲೆದ್ದ ರೈತರ ಆಕ್ರೋಶ: ಹೆದ್ದಾರಿ ಟೋಲ್‌ ಪ್ಲಾಜಾಗಳನ್ನು ವಶಪಡಿಸಿಕೊಂಡ ರೈತರು!

ಕೇಂದ್ರ ಸರ್ಕಾರದ ಕೃಷಿ ನೀತಿಗಳ ವಿರುದ್ಧ ರೈತರ ಹೋರಾಟ ಒಂದು ತಿಂಗಳು ಕಳೆದಿದೆ. ಅದರೆ, ಸರ್ಕಾರ ತನ್ನ ಅಹಮ್ಮಿಕೆಯನ್ನು ಪ್ರದರ್ಶಿಸುತ್ತಿದ್ದು, ಕೃಷಿ ನೀತಿಗಳನ್ನು ಹಿಂಪಡೆಯಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ರೈತರು ಹರಿಯಾಣದ ಹಲವಾರು ಟೋಲ್  ಪ್ಲಾಜಾಗಳನ್ನು ವಶಪಡಿಸಿಕೊಂಡಿದ್ದಾರೆ.

ಈಗಾಗಲೇ ದೆಹಲಿಯನ್ನು ಬೇರೆ ಬೇರೆ ಉತ್ತರದ ರಾಜ್ಯಗಳೊಂದಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 44 ರಲ್ಲಿರುವ ಕಾರ್ನಾಲ್‌ನಲ್ಲಿರುವ ಬಸ್ತಾರಾ ಟೋಲ್ ಪ್ಲಾಜಾ, ಅಸ್ಸಂಧ್-ಕರ್ನಾಲ್ ಹೆದ್ದಾರಿಯಲ್ಲಿನ ಗುಲ್ಲರ್‌ಪುರ ಟೋಲ್ ಪ್ಲಾಜಾ ಮತ್ತು ಹಿಸಾರ್-ಚಂಡೀಗಡ ಹೆದ್ದಾರಿಯಲ್ಲಿರುವ ಕುರುಕ್ಷೇತ್ರದ ಥೋನಾ ಟೋಲ್ ಪ್ಲಾಜಾದಲ್ಲಿ ಹಾಕಿದ್ದ ಬ್ಯಾರಿಕೇಡ್‌ಗಳನ್ನು ರೈತರು ಬಲವಂತವಾಗಿ ಸರಿಸಿದ್ದಾರೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ತೆರೆದ ಪಾಣಿಪತ್ ಟೋಲ್ ಪ್ಲಾಜಾ ಮತ್ತು ಪಾಣಿಪತ್-ರೋಹ್ಟಕ್ ಹೆದ್ದಾರಿಯ ದಹಾರ್ ಟೋಲ್ ಪ್ಲಾಜಾವನ್ನು ಸರಿಸಲು ರೈತರ ಸಂಘದ ಮುಖಂಡರು ಯೋಜಿಸುತ್ತಿದ್ದಾರೆ ಎಂದು ಹಿಂದುಸ್ಥಾನ್ ಟೈಮ್ಸ್‌‌ ವರದಿ ಮಾಡಿದೆ.

ಪ್ರತಿಭಟನಾ ನಿರತ ರೈತರು ಟೋಲ್‌ ಗೇಟ್‌ಗಳನ್ನು ತೆರೆಯುವಾಗ ಅಲ್ಲಿಯೇ ಇದ್ದ ಪೊಲೀಸರು ಅವರನ್ನು ತಡೆಯದೆ, ಎಲ್ಲಾ ವಾಹನಗಳ ಶುಲ್ಕ ರಹಿತ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು. ಸಿಂಘು ಮತ್ತು ಟಿಕ್ರಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತ ಮುಖಂಡರ ಸೂಚನೆಯಂತೆ ಮುಂದಿನ ಮೂರು ದಿನಗಳವರೆಗೂ ಎಲ್ಲಾ ಟೋಲ್ ಪ್ಲಾಜಾಗಳಲ್ಲಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.

ಹರಿಯಾಣದ ಟೋಲ್ ಪ್ಲಾಜಾಗಳಿಗೆ ಭಾರತೀಯ ಕಿಸಾನ್ ಯೂನಿಯನ್ (ಚಾರುನಿ) ಅಧ್ಯಕ್ಷ ಗುರುನಮ್ ಸಿಂಗ್ ಚಾರುನಿ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಬೇಕು ಮತ್ತು ಯಾವುದೇ ಹಿಂಸಾಚಾರದಲ್ಲಿ ಪಾಲ್ಗೊಳ್ಳಬಾರದು ಎಂದು ಶುಕ್ರವಾರ ಬೆಳಿಗ್ಗೆ ತನ್ನ ವಿಡಿಯೋ ಸಂದೇಶದಲ್ಲಿ ಚಾರುಣಿ ರೈತರಿಗೆ ಹೇಳಿದ್ದಾರೆ.

ಈ ಹಿಂದೆ ಕಳೆದ ನವೆಂಬರ್ 27 ರಿಂದ ಮೂರು ದಿನಗಳವರೆಗೆ ದೆಹಲಿ- ಹರಿಯಾಣ ಗಡಿಯ ಎಲ್ಲಾ ಟೋಲ್ ಪ್ಲಾಜಾಗಳನ್ನು ವಾಹನಗಳಿಗೆ ಉಚಿತವಾಗಿಸಲು ರೈತರು ಕರೆ ನೀಡಿದ್ದರು.


ಇದನ್ನೂ ಓದಿ:  ಕೃಷಿ ನೀತಿಗಳ ಪ್ರಚಾರಕ್ಕೆ ರೈತನ ಫೋಟೋ ಬಳಿಸಿದ ಸರ್ಕಾರ; BJPಗೆ ಲೀಗಲ್‌ ನೋಟಿಸ್‌ ನೀಡಿದ ರೈತ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights