ಲಾಕ್ ಡೌನ್ ಸಮಯದಲ್ಲಿ ಸಚಿವ ಸುಧಾಕರ್ ಈಜಾಡುತ್ತಿರುವ ಫೋಟೋ ಟ್ವೀಟ್: ಕಾಂಗ್ರೆಸ್ ಟೀಕೆ

ಕೋವಿಡ್-19 ಬಿಕ್ಕಟ್ಟಿಗೆ ಉಸ್ತುವಾರಿಯಾಗಿದ್ದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಕೆ ಅವರು ಈಜುಕೊಳದಲ್ಲಿ ಈಜಾಡುತ್ತಿರುವ ಫೋಟೋ ಹಾಕಿದ್ದನ್ನು ತರಾಟೆಗೆ ತೆಗೆದುಕೊಂಡಿರುವ ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್, ಇಂತಹ ಸಮಸ್ಯೆಯ ಸಮಯದಲ್ಲಿ ಇದು ಬೇಜವಬ್ದಾರಿತನದ ವರ್ತನೆ ಎಂದಿದ್ದಾರೆ.

ಎಪ್ರಿಲ್ 12 ರಂದು ಟ್ವಿಟ್ಟರ್ ನಲ್ಲಿ ಸಚಿವರು ತಮ್ಮ ಮಕ್ಕಳ ಜೊತೆಗೆ ಈಜುಕೊಳದಲ್ಲಿ ಇದ್ದ ಚಿತ್ರವನ್ನು ಹಂಚಿಕೊಂಡಿದ್ದರು ಆದರೆ ಅದನ್ನು ನಂತರ ಡಿಲೀಟ್ ಮಾಡಿದ್ದರು. “ಬಹಳ ಸಮಯದ ನಂತರ ಮಕ್ಕಳ ಜೊತೆಗೆ ಈಜಾಡುತ್ತಿದ್ದೇನೆ. ಇಲ್ಲಿಯೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತಿದ್ದೇನೆ ಹ ಹ” ಎಂದು ಅವರು ಟ್ವೀಟ್ ಮಾಡಿದ್ದರು.

ಇದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಡಿ ಕೆ ಶಿವಕುಮಾರ್ “ಇಡೀ ವಿಶ್ವವೇ ಆರೋಗ್ಯ ಬಿಕ್ಕಟ್ಟು ಎದುರಿಸುತ್ತಿರುವಾಗ ಕೊರೊನ ಉಸ್ತವಾರಿ ಸಚಿವ ಡಾ. ಸುಧಾಕರ್ ಬೇಜವಬ್ದಾರಿಯಿಂದ ವರ್ತಿಸಿ ಈಜು ಕೊಳದಲ್ಲಿ ಕಾಲ ಕಳೆಯುತ್ತಿದ್ದಾರೆ. ಇದು ನೈತಿಕ ಮಟ್ಟದ ಪ್ರಶ್ನೆ. ಅವರೇ ರಾಜೀನಾಮೆ ನೀಡಬೇಕು ಇಲ್ಲ ಮುಖ್ಯಮಂತ್ರಿಗಳು ಅವರನ್ನು ಸಂಪುಟದಿಂದ ವಜಾ ಮಾಡಬೇಕು” ಎಂದು ಟ್ವೀಟ್ ಮಾಡಿದ್ದಾರೆ.

 

ಕರ್ನಾಟಕದಲ್ಲಿ ಸೋಮವಾರಕ್ಕೆ ಕೊರೊನ ಸೊಂಕಿತ ಪ್ರಕರಣಗಳು 232ಕ್ಕೆ ಏರಿವೆ. ಮತ್ತು ಇಲ್ಲಿಯವರೆಗೂ 6 ಜನ ಮೃತಪಟ್ಟಿದ್ದಾರೆ. ಕೊರೊನ ಲಾಕ್ ಡೌನ್ ಪ್ರಾರಂಭವಾದಾಗಿನಿಂದಲೂ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಸುಧಾಕರ್ ನಡುವೆ ಸಂಬಂಧ ಸರಿ ಇರಲಿಲ್ಲ ಎನ್ನಲಾಗುತ್ತಿತ್ತು. ಕಾಂಗ್ರೆಸ್ ಪಕ್ಷ ತೊರೆದು ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಸುಧಾಕರ್ ಅವರಿಗೆ ಕೊರೊನ ಉಸ್ತುವಾರಿ ನೀಡಿದ್ದಕ್ಕೆ ಶ್ರೀರಾಮಲು ಅಸಮಾಧಾನಗೊಂಡಿದ್ದರು ಎನ್ನಲಾಗಿತ್ತು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights