ಭಾರತಕ್ಕೆ ಒಂದು ಬಿಲಿಯನ್ US ಡಾಲರ್ ನೆರವು ಘೋಷಿಸಿದ ವಿಶ್ವಬ್ಯಾಂಕ್
ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕಾಗಿ ಭಾರತಕ್ಕೆ ಸಹಾಯಾಸ್ತ ನೀಡಿರುವ ವಿಶ್ವಬ್ಯಾಂಕ್ ಒಂದು ಬಿಲಿಯನ್ ಅಮೆರಿಕನ್ ಡಾಲರ್ ನೀಡುವುದಾಗಿ ಘೋಷಿಸಿದೆ.
ಭಾರತ ಸರ್ಕಾರದ ಪ್ರಧಾನ ಮಂತ್ರಿ ಗರಿಬ್ ಕಲ್ಯಾಣ ಯೋಜನೆ ಸೇರಿದಂತೆ ಅನೇಕ ಯೋಜನೆಗಳ ಜೊತೆಗೆ ಈ ಪ್ಯಾಕೇಜ್ ಸಹಯೋಗವನ್ನು ಹೊಂದಿರಲಿದೆ. ಇದು ಕೊರೊನಾ ವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ನಗರ ಪ್ರದೇಶದಲ್ಲಿರುವ ದೇಶದ ಬಡ ಹಾಗೂ ವಲಸೆ ಕಾರ್ಮಿಕರಿಗೆ ನೆರವಾಗಲಿದೆ ಎಂದು ಹೇಳಲಾಗಿದೆ.
ಕಳೆದ ತಿಂಗಳಷ್ಟೇ ತುರ್ತು ಪರಿಹಾರ ನಿಧಿ ಯೋಜನೆಯಡಿಯಲ್ಲಿ ವಿಶ್ವ ಬ್ಯಾಂಕ್, ಭಾರತಕ್ಕೆ 1 ಬಿಲಿಯನ್ ಡಾಲರ್ ನೆರವನ್ನು ಘೋಷಿಸಿತ್ತು. ಇದರೊಂದಿಗೆ ಒಟ್ಟು ಸಹಾಯ ಮಾಡಿರುವ ಮೊತ್ತ 2 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ.
ಗ್ರಾಮೀಣ ಪ್ರದೇಶದಷ್ಟೇ ಅಲ್ಲದೆ ನಗರ ಪ್ರದೇಶದ ಬಡವರ ಕಡೆಗೆ ಸಾಮಾಜಿಕ ರಕ್ಷಣೆಗಾಗಿ ಈ ಪ್ಯಾಕೇಜ್ ಸಹಾಯಕವಾಗಲಿದೆ ಎಂದು ವಿಶ್ವ ಬ್ಯಾಂಕ್‌ನ ಭಾರತೀಯ ನಿರ್ದೇಶಕ ಜುನೈದ್ ಅಹ್ಮದ್ ತಿಳಿಸಿದ್ದಾರೆ.

