ಮದುವೆಯಾಗು ಎಂದಿದ್ದಕ್ಕೆ ಪ್ರೇಯಸಿಯನ್ನು ಕೊಂದು ಗೋಡೆಯೊಳಗೆ ದೇಹವಿಟ್ಟ ಪ್ರಿಯಕರ..!

ಮದುವೆಯಾಗು ಎಂದಿದ್ದಕ್ಕೆ ಪ್ರೇಯಸಿಯನ್ನು ಕೊಂದ ಪ್ರಿಯಕರನೊಬ್ಬ ಆಕೆಯ ದೇಹವನ್ನು ಒಂದು ವರ್ಷದವರೆಗೆ ಗೋಡೆಯೊಳಗೆ ಇಟ್ಟ ಘಟನೆ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ.

32 ವರ್ಷದ ಮಹಿಳೆಯೊಂದಿಗೆ 5 ವರ್ಷದಿಂದ ಸಂಬಂಧ ಹೊಂದಿದ್ದ 30 ವರ್ಷದ ವ್ಯಕ್ತಿ ಕ್ರೂರತನ ಮೆರೆದಿದ್ದಾನೆ. ತನ್ನನ್ನು ಮದುವೆಯಾಗು ಎಂದಿದ್ದಕ್ಕೆ ಮಹಿಳೆಯನ್ನು ಕೊಂದ ಪ್ರಿಯಕರ ಪ್ರೇಯಸಿಯ ಮೃತದೇಹವನ್ನು ಗೋಡೆಯೊಳಗೆ ಅಡಗಿಸಿಟ್ಟಿದ್ದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಅಕ್ಟೋಬರ್ 21 ರಂದು ಆಕೆ ಕೊನೆಯ ಬಾರಿಗೆ ಕುಟುಂಬದವರಿಗೆ ಕಾಣಿಸಿಕೊಂಡಿದ್ದಳು. ಸಂತ್ರಸ್ತೆಯ ಕುಟುಂಬ ಸದಸ್ಯರು ಆಕೆ ಇರುವ ಸ್ಥಳದ ಬಗ್ಗೆ ವಿಚಾರಿಸಿದಾಗ ಆರೋಪಿ ಆಕೆ ಗುಜರಾತ್‌ನ ವಾಪಿಗೆ ಹೋಗಿದ್ದಾಗಿ ಹೇಳುತ್ತಿದ್ದನು. ಸಂತ್ರಸ್ತೆ ಒಂದು ವರ್ಷವಾದರೂ ವಾಪಸ್ಸು ಬಾರದೇ ಇದ್ದ ಕಾರಣ ಅನುಮಾನ ಬಂದು ಆಕೆ ಕುಟುಂಬಸ್ಥರು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ವಿಚಾರಣೆ ವೇಳೆ ಸತ್ಯ ಬಯಲಾಗಿದ್ದು ಇಂದು ಆತನನ್ನು ವಶಕ್ಕೆ ಪಡೆಯಲಾಗಿದೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೊಲ್ಲಲ್ಪಟ್ಟ 32 ವರ್ಷದ ಸಂತ್ರಸ್ತೆಯ ಅಸ್ಥಿಪಂಜರವನ್ನು ವಂಗಾಂವ್ ಗ್ರಾಮದ ಆರೋಪಿಯ ಫ್ಲ್ಯಾಟ್‌ನಿಂದ ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಮೇಲೆ ಕೊಲೆ ಮತ್ತು  ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights