‘ಒಂದು ರಾಷ್ಟ್ರ, ಒಂದೇ ವಿದ್ಯುತ್ ದರ’ ಕಾನೂನು ತಂದಿದಿಯಾ ಮೋದಿ ಸರ್ಕಾರ?

ಇತ್ತೀಚೆಗೆ ಭಾರತ ಏಕರೂಪದ ವಿದ್ಯುತ್ ದರ ನೀತಿಯತ್ತ ಸಾಗುತ್ತಿದೆಯೇ? ಎಂಬ ಪ್ರಶ್ನೆ  ಸೋಷಿಯಲ್ ಮೀಡಿಯಾದಲ್ಲಿ ಉದ್ಬವಾಗಿದೆ. ಇದಕ್ಕೆ ಬಂಗಾಳಿ ಭಾಷೆಯಲ್ಲಿರುವ ಸಂದೇಶ “ಮೋದಿ ಸರ್ಕಾರ ‘ಒಂದು ರಾಷ್ಟ್ರ, ಒಂದು ಸುಂಕ’ ಕಾನೂನನ್ನು ಪರಿಚಯಿಸುತ್ತಿರುವುದರಿಂದ ದೇಶಾದ್ಯಂತ ವಿದ್ಯುತ್ ಸುಂಕಗಳು ಏಕರೂಪವಾಗಿರುತ್ತವೆ” ಎಂದು ಹೇಳುತ್ತದೆ.

ಆದರೆ ಈ ಸಂದೇಶ ತಪ್ಪು ಮಾಹಿತಿ ರವಾನೆ ಮಾಡಿದ್ದು, ಕೇಂದ್ರ ಸರ್ಕಾರ ಯಾವುದೇ “ಒಂದು ರಾಷ್ಟ್ರ, ಒಂದು ವಿದ್ಯುತ್ ದರ” ಕಾನೂನನ್ನು ಜಾರಿಗೊಳಿಸುತ್ತಿಲ್ಲ.

ಬಿಜೆಪಿ ರಾಜ್ಯಸಭಾ ಸಂಸದ ಶ್ವೇತ್ ಮಲಿಕ್ ಅವರು ಜುಲೈ 15, 2019 ರಂದು ಮೇಲ್ಮನೆಯ ಶ್ಯೂನ್ಯ ಅವಧಿ ಸಂದರ್ಭದಲ್ಲಿ ಭಾರತದಾದ್ಯಂತ ಏಕರೂಪದ ವಿದ್ಯುತ್ ಶುಲ್ಕವನ್ನು ಪ್ರಸ್ತಾಪಿಸಿದ್ದಾರೆ. ಆದರೆ ಸರ್ಕಾರ ಈ ಪ್ರಸ್ತಾಪವನ್ನು ಅಂಗೀಕರಿಸಿದೆಯೆ ಅಥವಾ ಅಂತಹ ಕಾಯ್ದೆಯನ್ನು ಮುಂದೂಡುತ್ತಿದೆಯೇ ಎಂಬ ಬಗ್ಗೆ ಯಾವುದೇ ವರದಿಗಳಿಲ್ಲ.

ಎಎಫ್‌ಡಬ್ಲ್ಯೂಎ ಪಶ್ಚಿಮ ಬಂಗಾಳ ರಾಜ್ಯ ವಿದ್ಯುತ್ ವಿತರಣಾ ನಿಗಮ ಲಿಮಿಟೆಡ್‌ನ ಮಾಜಿ ನಿರ್ದೇಶಕರಾದ ಅನಿರ್‌ಬನ್ ಗುಹಾ ಅವರನ್ನು ಈ ಬಗ್ಗೆ ಪ್ರಶ್ನಿಸಿದಾಗ, “ಅಂತಹ ಕಾಯಿದೆ ವಾಣಿಜ್ಯಿಕವಾಗಿ ಲಾಭದಾಯಕವಲ್ಲ ಎಂದು ಹೇಳಿದ್ದಾರೆ. ಆದ್ದರಿಂದ, ಯಾವುದೇ ರಾಜ್ಯ ಸರ್ಕಾರ ಎಲ್ಲ ರಾಜ್ಯಗಳಿಗೂ ಏಕರೂಪದ ವಿದ್ಯುತ್ ದರವನ್ನು ಜಾರಿಗೆ ತರಲು ಯೋಚಿಸಿರಲಿಲ್ಲ. ಎನ್‌ಡಿಎ ಸರ್ಕಾರ ಇಂತಹ ಕಾಯ್ದೆಯನ್ನು ಜಾರಿಗೆ ತರುತ್ತಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ ”ಎಂದು ಗುಹಾ ಹೇಳಿದರು. ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ತಮ್ಮ 2019 ರ ಬಜೆಟ್ ಭಾಷಣದಲ್ಲಿ “ಒಂದು ರಾಷ್ಟ್ರ, ಒಂದು ಗ್ರಿಡ್” ಯೋಜನೆಯನ್ನು ಘೋಷಿಸಿದ್ದರು.

ಸೆಪ್ಟೆಂಬರ್ 2020 ರಲ್ಲಿ, ಕೇಂದ್ರ ವಿದ್ಯುತ್ ಕಾರ್ಯದರ್ಶಿ ನಂದನ್ ಸಹೈ ಅವರು ಭಾರತವು ಈಗಾಗಲೇ “ಒಂದು ರಾಷ್ಟ್ರ, ಒಂದು ಗ್ರಿಡ್ ಮತ್ತು ಒಂದು ಆವರ್ತನ” ಸ್ಥಾನಮಾನವನ್ನು ಪಡೆದಿದೆ ಎಂದು ಹೇಳಿಕೊಂಡಿದ್ದರು. ಆದಾಗ್ಯೂ, ಯೋಜನೆಯು ಯಾವುದೇ ರೀತಿಯಲ್ಲಿ ವಿದ್ಯುತ್ ಸುಂಕದೊಂದಿಗೆ ಸಂಪರ್ಕ ಹೊಂದಿಲ್ಲ. ಇದು ಭಾರತದ ಐದು ಪ್ರಾದೇಶಿಕ ಗ್ರಿಡ್‌ಗಳನ್ನು ಸಂಯೋಜಿಸುತ್ತದೆ ಮತ್ತು ಕಾರ್ಯಾಚರಣೆಯ ಹೆಚ್ಚುವರಿಗಳನ್ನು ಪ್ರದೇಶಗಳ ನಡುವೆ ವಿನಿಮಯ ಮಾಡಿಕೊಳ್ಳುವ ಗುರಿಯನ್ನು ಹೊಂದಿದೆ. “ಈ ಯೋಜನೆಗೆ ಏಕರೂಪದ ವಿದ್ಯುತ್ ದರಕ್ಕೆ ಯಾವುದೇ ಸಂಬಂಧವಿಲ್ಲ” ಎಂದು ಗುಹಾ ಹೇಳಿದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights