‘ಚರ್ಮದಿಂದ ಚರ್ಮಕ್ಕೆ ಸಂಪರ್ಕ’ವಿಲ್ಲದ್ದು ಲೈಂಗಿಕ ಕಿರುಕುಳವಲ್ಲ: ಬಾಂಬೆ ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ!

“ಚರ್ಮದಿಂದ ಚರ್ಮಕ್ಕೆ ಸಂಪರ್ಕವಿಲ್ಲದೆ” ಅಥವಾ ಬಟ್ಟೆಯ ಮೇಲಿಂದ ಅಪ್ರಾಪ್ತೆಯ ಸ್ತನಗಳನ್ನು ಮುಟ್ಟುವುದನ್ನು ಲೈಂಗಿಕ ದೌರ್ಜನ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಬಾಂಬೆ ಹೈಕೋರ್ಟ್‌ ನೀಡಿದ್ದ ಆದೇಶವನ್ನು ಸುಪ್ರೀಂ ಕೋರ್ಟ್‌ ತಡೆಹಿಡಿದಿದೆ.

ಅಪ್ರಾಪ್ತ ಬಾಲಿಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂಬ ಪೋಸ್ಕೋ ಪ್ರಕರಣದ ವಿಚಾರಣೆ ನಡಿಸಿದ್ದ ಬಾಂಬೆ ಹೈಕೋರ್ಟ್‌, ಅಪ್ರಾಪ್ತ ವಯಸ್ಸಿನ ಬಾಲಕಿಯ ಸ್ತನಗಳನ್ನು ಆಕೆಯ ಉಡುಪಿನ ಮೇಲಿಂದ ಸ್ಪರ್ಶಿಸಿದರೆ ಅದನ್ನು ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಚರ್ಮದಿಂದ ಚರ್ಮದ ಸ್ಪರ್ಶವಿದ್ದರೆ ಮಾತ್ರ ಪೋಕ್ಸೋ ಕಾಯ್ದೆಯಡಿ ಅಪರಾಧವಾಗಿ ಪರಿಗಣಿಸಲಾಗುತ್ತದೆ. ನೇರ ದೈಹಿಕ ಸಂಪರ್ಕವಿಲ್ಲದ ಕಾರಣ ಅಪರಾಧ ಮಾಡುವಲ್ಲಿ ಲೈಂಗಿಕ ಉದ್ದೇಶವಿಲ್ಲ ಎಂದು ಹೇಳಿ ಪೋಕ್ಸೊ ಸೆಕ್ಷನ್ 8 ರ ಅಡಿಯಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿತ್ತು.

ಬಾಂಬೆ ಹೈಕೋರ್ಟ್ ಜನವರಿ 19 ರಂದು ವಿವಾದಾತ್ಮಕ ಆದೇಶವನ್ನು ಹೊರಡಿಸಿತ್ತು.

ಹೈಕೋರ್ಟ್‌ನ ಆದೇಶವು ಆಘಾತ ಮತ್ತು ಕೆರಳಿದ ಚರ್ಚೆಯನ್ನು ಉಂಟುಮಾಡಿದೆ. ಇದು ಗೊಂದಲ ಮತ್ತು ಅಪಾಯಕಾರಿ ನಿದರ್ಶನವನ್ನು ಸೃಷ್ಟಿಸುತ್ತದೆ ಎಂದು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಯ ನಡೆಸಿದ ಸುಪ್ರೀಂ ಕೋರ್ಟ್, ಇಂದು ಆದೇಶವನ್ನು ತಡೆಹಿಡಿದಿದೆ.

ಮುಂಬೈ ಮೂಲದ ಆರೋಪಿ ಸತೀಶ್ ಬಂಡು ರಗ್ಡೆ ಎಂಬಾತ 2016ರಲ್ಲಿ 12 ವರ್ಷದ ಬಾಲಕಿಗೆ ಸೀಬೆ ಹಣ್ಣು ನೀಡುವ ನೆಪದಲ್ಲಿ ಮನೆಗೆ ಕರೆದೊಯ್ದು ಆಕೆಯ ಎದೆಯನ್ನು ಒತ್ತುವುದು ಮತ್ತು ಸಲ್ವಾರ್ ಕಳಚುವ ಪ್ರಯತ್ನ ಮಾಡುತ್ತಿದ್ದ. ಇದೇ ಸಮಯಕ್ಕೆ ಅಲ್ಲಿಗೆ ಧಾವಿಸಿದ್ದ ಬಾಲಕಿಯ ತಾಯಿ ಈ ಘಟನೆಯನ್ನು ಗಮನಿಸಿ, ದೂರು ಸಲ್ಲಿಸಿದ್ದರು. ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು ಮತ್ತು ಐವರು ಸಾಕ್ಷಿಗಳ ಹೇಳಿಕೆಯನ್ನು ಪರಿಗಣಿಸಿ ಸೆಷನ್‌ ನ್ಯಾಯಾಲಯವು ಆರೋಪಿಗೆ ಕಠಿಣ ಶಿಕ್ಷೆ ವಿಧಿಸಿತ್ತು.

ಆದರೆ, ಸೆಷನ್‌ ಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಆರೋಪಿ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ. ಪೋಕ್ಸೋ ಕಾಯ್ದೆಯ ಸೆಕ್ಷನ್ 8 ಮತ್ತು ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಲೈಂಗಿಕ ದೌರ್ಜನ್ಯ ಎಂದು ಪರಿಗಣಿಸಲು, ಲೈಂಗಿಕ ಉದ್ದೇಶದೊಂದಿಗೆ ಕೃತ್ಯ ಎಸಗಿರಬೇಕು. ಪರಸ್ಪರ ಗುಪ್ತಾಂಗಗಳ ಸ್ಪರ್ಶ, ಮಗುವಿನ ಎದೆ ಸ್ಪರ್ಶದಂತಹ ಬಲತ್ಕಾರದ ಚಟುವಟಿಕೆಗಳು ನಡೆದಿರಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಪುಷ್ಪಾ ವಿ. ಗಣೇಡಿವಾಲಾ ಹೇಳಿದ್ದರು.

ಇದನ್ನೂ ಓದಿ: ಓಡಿ ಹೋದ ಪತ್ನಿ : ಕೋಪದಿಂದ 18 ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಕೊಂದ ಪತಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights