ಓಡಿ ಹೋದ ಪತ್ನಿ : ಕೋಪದಿಂದ 18 ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಕೊಂದ ಪತಿ!

ಪತ್ನಿ ಮೇಲೆನ ಧ್ವೇಷದಿಂದಾಗಿ ವ್ಯಕ್ತಿಯೊಬ್ಬ 18 ಜನ ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಕೊಂದ ಘಟನೆ ಹೈದರಾಬಾದ್ ನ ರಾಚಕೊಂಡದಲ್ಲಿ ನಡೆದಿದೆ.

ಆರೋಪಿಯನ್ನು ಮೈನಾ ರಾಮುಲು (45) ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡುತ್ತಿದ್ದ ಈತ ವಿಪರೀತ ಮದ್ಯವ್ಯಸನಿಯಾಗಿದ್ದನು. ಇತರ ಅಪರಾಧಗಳು ಸೇರಿದಂತೆ 18 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಮೈನಾ ರಾಮುಲುನನ್ನು ಹೈದರಾಬಾದ್‌ನಲ್ಲಿ ಮಂಗಳವಾರ ಪೊಲೀಸರು ಬಂಧಿಸಲಾಗಿದೆ. ಆತನ ಬಂಧನದ ನಂತರ ಮಹಿಳಾ ಹತ್ಯೆಯ ಎರಡು ಇತ್ತೀಚಿನ ಪ್ರಕರಣಗಳು ಪತ್ತೆಯಾಗಿವೆ.

21 ನೇ ವಯಸ್ಸಿನಲ್ಲಿ ವಿವಾಹವಾದ ಈತನನ್ನು ಬಿಟ್ಟು ಪತ್ನಿ ಅಲ್ಪಾವಧಿಯಲ್ಲಿಯೇ ಇನ್ನೊಬ್ಬ ವ್ಯಕ್ತಿಯೊಂದಿಗೆ ಓಡಿಹೋದಳು. ಅಂದಿನಿಂದ ಅವನು ಮಹಿಳೆಯರ ವಿರುದ್ಧ ದ್ವೇಷ ಸಾಧಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

21 ಪ್ರಕರಣಗಳಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ಇದರಲ್ಲಿ 16 ಕೊಲೆ ಪ್ರಕರಣಗಳು, ನಾಲ್ಕು ಆಸ್ತಿ ಅಪರಾಧಗಳು ಮತ್ತು ಕಳ್ಳತನ ದರೋಡೆ ಪ್ರಕರಣ ಸೇರಿವೆ ಎಂದು ಪೊಲೀಸ್ ತಿಳಿಸಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights