ರಿಹಾನಾ ಮತ್ತು ಗ್ರೇಟಾ ಥನ್‌ಬರ್ಗ್ ನಂತರ ರೈತರ ಪ್ರತಿಭಟನೆ ಬೆಂಬಲಿಸಿ ಮಿಯಾ ಖಲೀಫಾ ಟ್ವೀಟ್!

ರಿಹಾನಾ ಮತ್ತು ಗ್ರೇಟಾ ಥನ್‌ಬರ್ಗ್ ನಂತರ ಭಾರತದಲ್ಲಿ ನಡೆಯುತ್ತಿರುವ ರೈತರ ಆಂದೋಲನವನ್ನು ಬೆಂಬಲಿಸಿ ಮಿಯಾ ಖಲೀಫಾ ಟ್ವೀಟ್ ಮಾಡಿದ್ದಾರೆ. ಮಿಯಾ ತನ್ನ ಪೋಸ್ಟ್ನಲ್ಲಿ, ಪ್ರತಿಭಟನೆಯ ಚಿತ್ರವನ್ನು ಹಂಚಿಕೊಂಡು ದೆಹಲಿಯ ಘಟನೆಗಳ ಅನುಕ್ರಮದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

ಮಿಯಾ ಖಲೀಫಾ ಯಾರು?

ಮಿಯಾ ಖಲೀಫಾ ಕೇವಲ 3 ತಿಂಗಳು ಪಾರ್ನ್ ನಟಿಯಾಗಿದ್ದರೂ ಈಗಲೂ ಈಕೆಯ ಪಾರ್ನ್ ವಿಡಿಯೋಗಳು ಟಾಫ್ ಟ್ರೆಂಡಿಂಗ್ ನಲ್ಲಿವೆ. ಪಾರ್ನ್ ವೀಕ್ಷಣೆಯಲ್ಲಿ ಈಕೆಯ ವಿಡಿಯೋಗಳು ಅಗ್ರ ಸ್ಥಾನದಲ್ಲಿವೆ. ಜನರು ಈಕೆಯ ವಿಡಿಯೋಗಳಿಗೆ ಸರ್ಚ್ ಮಾಡಿ ನೋಡುತ್ತಾರೆ. 2018ರಲ್ಲಿ ಅತೀ ಹೆಚ್ಚು ಸರ್ಚ್ ಆದ ಪಾರ್ನ್ ನಡಿ ಇವಳೆನಿಸಿದ್ದಾಳೆ. ಬಹುತೇಕ ಮಂದಿಗೆ ಈಕೆ ಪಾರ್ನ್ ಉದ್ಯಮ ತೊರೆದು ಸಾಕಷ್ಟು ವರ್ಷಗಳೇ ಆಗಿದ್ದರೂ ಗೊತ್ತೇ ಇರಲಿಲ್ಲ. ಅಷ್ಟರ ಮಟ್ಟಿಗೆ ಇವರ ವಿಡಿಯೋಗಳು ಸರ್ಚಿಂಗ್ ನಲ್ಲಿರುತ್ತವೆ.

ರಿಹಾನಾ ಮತ್ತು ಗ್ರೇಟಾ ಥನ್‌ಬರ್ಗ್ ಟ್ವೀಟ್ :-

ಕೇಂದ್ರದ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಪಂಜಾಬ್, ಹರಿಯಾಣ ಮತ್ತು ಪಶ್ಚಿಮ ಉತ್ತರ ಪ್ರದೇಶದ ರೈತರು ಎರಡು ತಿಂಗಳಿನಿಂದ ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಗಣರಾಜ್ಯೋತ್ಸವದಂದು, ಪ್ರತಿಭಟನಾಕಾರರ ಗುಂಪು ರೈತರ ಟ್ರ್ಯಾಕ್ಟರ್ ಪೆರೇಡ್‌ನ ಮಾರ್ಗದಿಂದ ವಿಮುಖವಾಗಿ ಮತ್ತು ಕೆಂಪು ಕೋಟೆಗೆ ನುಗ್ಗುವ ಮೊದಲು ಐಟಿಒನಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿತು. ಘಟನೆ ಹಿಂಸಾಚಾರಕ್ಕೆ ತಿರುಗಿತು. ಹೀಗಾಗಿ ಇದೆಲ್ಲದರ ಪರಿಣಾಮವನ್ನು ರೈತರು ಅನುಭವಿಸುವಂತಾಗಿದೆ. ಎರಡು ತಿಂಗಳಿಗೂ ಹೆಚ್ಚು ಶಾಂತಿಯುತ ಹೋರಾಟ ಮಾಡಿಕೊಂಡು ಬರುತ್ತಿದ್ದ ರೈತರನ್ನು ಉಗ್ರರಂತೆ ನೋಡಲು ಪ್ರಚೋದಿಸಲಾಗುತ್ತಿದೆ. ಇದು ನಿಜಕ್ಕೂ ನಮ್ಮ ದೇಶದ ದೌರ್ಬಾಗ್ಯವೇ ಸರಿ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights