ಎಫ್ಐಆರ್ ಬಳಿಕವೂ ರೈತರಿಗೆ ಬೆಂಬಲ ಸೂಚಿಸಿ ಗ್ರೇಟಾ ಥನ್‌ಬರ್ಗ್ ಹೊಸ ಟ್ವೀಟ್!

ರೈತರ ಪ್ರತಿಭಟನೆ ಕುರಿತು ಟ್ವೀಟ್ ಮಾಡಿದ ಬೆನ್ನಲ್ಲೆ ದೆಹಲಿ ಪೊಲೀಸರು ಗ್ರೇಟಾ ಥನ್‌ಬರ್ಗ್ ವಿರುದ್ಧ ಎಫ್‌ಐಆರ್ ದಾಖಲಿಸದ ನಂತರವೂ ಗ್ರೇಟಾ ‘ನಾನು ಇನ್ನೂ ರೈತರೊಂದಿಗೆ ನಿಲ್ಲುತ್ತೇನೆ’ ಎಂದು ಹೊಸ ಟ್ವೀಟ್‌ನಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಅವರು, “ನಾನು ಇನ್ನೂ ರೈತರೊಂದಿಗೆ ನಿಲ್ಲುತ್ತೇನೆ. ಶಾಂತಿಯುತ ಪ್ರತಿಭಟನೆಯನ್ನು ಬೆಂಬಲಿಸುತ್ತೇನೆ. ಯಾವುದೇ ರೀತಿಯ ದ್ವೇಷ, ಬೆದರಿಕೆಗಳು ಅಥವಾ ಮಾನವ ಹಕ್ಕುಗಳ ಉಲ್ಲಂಘನೆಯು ಇದನ್ನು ಎಂದಿಗೂ ಬದಲಾಯಿಸುವುದಿಲ್ಲ” ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಭಾರತದಲ್ಲಿ ರೈತರ ಪ್ರತಿಭಟನೆ ಕುರಿತು ಇತ್ತೀಚೆಗೆ ಟ್ವೀಟ್ ಮಾಡಿರುವ ಬಗ್ಗೆ ದೆಹಲಿ ಪೊಲೀಸರು ಆಕೆಯ ವಿರುದ್ಧ ಎಫ್ಐಆರ್ ದಾಖಲಿಸಿದ ಸ್ವಲ್ಪ ಸಮಯದ ನಂತರ ಗ್ರೆಟಾ ಅವರ ಟ್ವೀಟ್ ಬಂದಿದೆ.

ಪಾಪ್ ತಾರೆ ರಿಹಾನ್ನಾ ನಂತರ, ಭಾರತದಲ್ಲಿ ನಡೆಯುತ್ತಿರುವ ರೈತರ ಆಂದೋಲನಕ್ಕೆ ಬೆಂಬಲ ನೀಡಲು ಸ್ವೀಡಿಷ್ ಹವಾಮಾನ ಕಾರ್ಯಕರ್ತೆ ಗ್ರೆಟಾ ಥನ್‌ಬರ್ಗ್ ಗುರುವಾರ ಟ್ವಿಟ್ ಮಾಡಿದ್ದರು.

ಮಂಗಳವಾರ ರಾತ್ರಿ ಅವರು ಮಾಡಿದ ಮೊದಲ ಟ್ವೀಟ್‌ನಲ್ಲಿ, ಗ್ರೇಟಾ ಥನ್‌ಬರ್ಗ್ “ನಾವು ಭಾರತದಲ್ಲಿ ರೈತರ ಪ್ರತಿಭಟನೆಯೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ” ಎಂದು ಬರೆದಿದ್ದಾರೆ. ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಮತ್ತು ದೆಹಲಿ ಗಡಿಯ ಸುತ್ತ ಅಂತರ್ಜಾಲವನ್ನು ಹೇಗೆ ಸ್ಥಗಿತಗೊಳಿಸಲಾಗಿದೆ ಎಂಬುದರ ಕುರಿತು ಸಿಎನ್‌ಎನ್ ಲೇಖನವನ್ನು ಹಂಚಿಕೊಂಡಿದ್ದಾರೆ.

ರೈತರ ಪ್ರತಿಭಟನೆಯಿಂದಾಗಿ ದೆಹಲಿಯಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯನ್ನು ವಿವರಿಸುವ ಅಂಥದ್ದೇ ಟ್ವೀಟ್ ಅನ್ನು ಪಾಪ್ ತಾರೆ ರಿಹಾನ್ನಾ ಹಂಚಿಕೊಂಡ ಕೆಲವೇ ಗಂಟೆಗಳ ನಂತರ ಈ ಟ್ವೀಟ್ ಬಂದಿದೆ. “ನಾವು ಈ ಬಗ್ಗೆ ಏಕೆ ಮಾತನಾಡುತ್ತಿಲ್ಲ ?! #FarmersProtest” ಎಂದು ಟ್ವೀಟ್ ನಲ್ಲಿ ರಿಹಾನ್ನಾ ಕೇಳಿದ್ದರು.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights