ರೈತರಿಗೆ ಒಳ್ಳೆಯದಾಗುವುದನ್ನೇ ಮಾಡಬೇಕು: ರೈತ ಪರವಾಗಿ ದನಿಗೂಡಿಸಿದ ನಟ ಸಲ್ಮಾನ್‌ ಖಾನ್

ಮೂರನೇ ತಿಂಗಳಿಗೆ ಕಾಲಿಟ್ಟಿರುವ ರೈತರ ಪ್ರತಿಭಟನೆ, ಹಾಲಿವುಡ್‌-ಬಾಲಿವುಡ್‌ ಅಂಗಳದಲ್ಲಿ ಚರ್ಚೆಯಾಗುತ್ತಿದೆ. ರೈತ ಹೋರಾಟವನ್ನು ಬೆಂಬಲಿಸಿ ಮೊನ್ನೆ ಅಂತಾರಾಷ್ಟ್ರೀಯ ಪಾಪ್‌ ಸಿಂಗರ್‌ ಮಾಡಿದ ಒಂದು ಟ್ವೀಟ್‌ ರೈತ ಹೋರಾಟಕ್ಕೆ ಜಾಗತಿಕ ಬೆಂಬಲವನ್ನು ತಂದುಕೊಟ್ಟಿದೆ. ಇದೀಗ ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಕೂಡ ರೈತರ ಪರವಾಗಿ ಮಾತನಾಡಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಲ್ಮಾನ್‌ ಖಾನ್‌, “ರೈತರಿಗೆ ಒಳ್ಳೆಯದಾಗುವುದನ್ನೇ ಮಾಡಬೇಕು, ಸಮರ್ಪಕ ಮತ್ತು ಉತ್ತಮವಾದುದನ್ನೇ ಮಾಡಬೇಕು. ಪ್ರತಿಯೊಬ್ಬ ರೈತನಿಗೂ ಸರಿಯಾದುದನ್ನೇ ಮಾಡಬೇಕು” ಎಂದು ಹೇಳಿದ್ದಾರೆ.

ಕಳೆದ ಮೂರು ದಿನಗಳಿಂದ ರೈತರನ್ನು ಬೆಂಬಲಿಸಿ ಹಲವಾರು ಅಂತಾರಾಷ್ಟ್ರೀಯ ಮತ್ತು ಬಾಲಿವುಡ್‌ನ ಸಿನಿಮಾ ಸ್ಟಾರ್‌ಗಳು ಮತ್ತು ಕ್ರಿಕೆಟಿಗರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಕಂಗೆಟ್ಟ ಕೇಂದ್ರ ಸರ್ಕಾರ, ರೈತರಿಗೆ ಬೆಂಬಲ ನೀಡಿದವರ ವಿರುದ್ಧ ಟ್ವೀಟ್‌ ಮಾಡುವಂತೆ ಬಿಜೆಪಿ ಬೆಂಬಲಿಗರಾದ ಸಿನಿಮಾ ಸ್ಟಾರ್‌ಗಳು ಮತ್ತು ಕ್ರಿಕೆಟಿಗರನ್ನು ಟ್ವಿಟರ್‌ ಕಣಕ್ಕೆ ಇಳಿಸಿತ್ತು.

ಬಿಜೆಪಿಯ ಮಾತು ಕೇಳಿ ಸರ್ಕಾರದ ಪರವಾಗಿ ಟ್ವೀಟ್‌ ಮಾಡಿದ (ಕಾಪಿ ಮತ್ತು ಪೇಸ್ಟ್) ಮಾಡಿದ ಸೆಲೆಬ್ರೆಟಿಗಳು ಭಾರೀ ಟ್ರೋಲ್‌ಗೆ ಒಳಗಾಗಿದ್ದಾರೆ.ಕೇಂದ್ರ ಸರಕಾರದ ಪರ ಮಾತನಾಡಿದ್ದ ಅಕ್ಷಯ್‌ ಕುಮಾರ್‌, ಅಜಯ್‌ ದೇವಗನ್‌, ಸಚಿನ್‌ ತೆಂಡೂಲ್ಕರ್‌ ಮತ್ತು ಅನಿಲ್‌ ಕುಂಬ್ಳೆ ಸಾಮಾಜಿಕ ತಾಣದಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಈ ಮಧ್ಯೆ ನಟ ಸಲ್ಮಾನ್‌ ಖಾನ್‌ ರೈತರಿಗೆ ಒಳ್ಳೆಯದ್ದೇನೆ ಮಾಡಬೇಕು ಎಂದು ರೈತ ಹೋರಾಟವನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ.

ಇದನ್ನೂ ಒದಿ: ಅನಿಲ್ ಕುಂಬ್ಳೆಗೆ ನಾಚಿಕೆಯಾಗಬೇಕು ಎಂದ ಕನ್ನಡಿಗರು; ಕುಂಬ್ಳೆ ವಿರುದ್ಧ ಕನ್ನಡಿಗರು ಸಿಡಿದಿದ್ದೇಕೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights