ಈಗ ಪರವಾನಗಿಗಾಗಿ ಅರ್ಜಿ ಸಲ್ಲಿಸುವಾಗ ಚಾಲನಾ ಪರೀಕ್ಷೆ ಏಕೆ ಅಗತ್ಯವಿಲ್ಲ?

ಚಾಲಕ ತರಬೇತಿ ಕೇಂದ್ರಗಳ ಮಾನ್ಯತೆಗಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಶುಕ್ರವಾರ ಕರಡು ಅಧಿಸೂಚನೆಯನ್ನು ಹೊರಡಿಸಿದೆ. ಇದರಲ್ಲಿ ಒಬ್ಬ ವ್ಯಕ್ತಿ ಚಾಲಕ ತರಬೇತಿ ಕೇಂದ್ರಗಳಿಂದ ಚಾಲಕ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುವಾಗ ಚಾಲನಾ ಪರೀಕ್ಷೆಯ ಅವಶ್ಯಕತೆಯಿಂದ ವಿನಾಯಿತಿ ನೀಡಲಾಗುತ್ತದೆ ಎಂದೇಳಲಾಗಿದೆ.

ಈ ಹಿಂದೆ ಪರವಾನಿಗೆ ಪಡೆಯುವ ಚಾಲಕರು ಚಾಲಕ ತರಬೇತಿ ಕೇಂದ್ರಗಳಿಂದ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಚಾಲನಾ ಪರವಾನಗಿಗೆ ಅರ್ಜಿ ಸಲ್ಲಿಸುವಾಗ ಚಾಲನಾ ಪರೀಕ್ಷೆ ಕಡ್ಡಾಯವಿತ್ತು. ಆದರೀಗ ಅದು ಸಡಿಲಗೊಂಡಿದೆ.

ನಾಗರಿಕರಿಗೆ ಗುಣಮಟ್ಟದ ಚಾಲಕ ತರಬೇತಿಯನ್ನು ನೀಡುವ ಸಲುವಾಗಿ ಸಚಿವಾಲಯ ನಿರ್ಧರಿಸಿದೆ. ಇದಲ್ಲದೆ, ಅಂತಹ ಕೇಂದ್ರಗಳಿಂದ ಚಾಲಕ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಯಾವುದೇ ವ್ಯಕ್ತಿಗೆ ಚಾಲನಾ ಪರವಾನಗಿಗಾಗಿ ಅರ್ಜಿ ಸಲ್ಲಿಸುವಾಗ ಚಾಲನಾ ಪರೀಕ್ಷೆಯ ಅವಶ್ಯಕತೆಯಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಸಚಿವಾಲಯ ಹೇಳಿದೆ. ಈ ಕ್ರಮದಿಂದಾಗಿ ಸಾರಿಗೆ ಉದ್ಯಮಕ್ಕೆ ವಿಶೇಷವಾಗಿ ತರಬೇತಿ ಪಡೆದ ಚಾಲಕರನ್ನು ಹೊಂದಲು ಸಹಾಯ ಮಾಡುತ್ತದೆ. ಇದು ಅವರ ದಕ್ಷತೆಯನ್ನು ಸುಧಾರಿಸುತ್ತದೆ ಮತ್ತು ರಸ್ತೆ ಅಪಘಾತಗಳನ್ನು ಕಡಿಮೆ ಮಾಡುತ್ತದೆ ಎಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights