ಹಳ್ಳಿ ಹುಡುಗಿ ಡ್ಯಾನ್ಸ್ ಸ್ಟೈಲ್ ಗೆ ಫಿದಾ ಆದ ಬಾಲಿವುಡ್ ಬೆಡಗಿ ಮಾಧುರಿ ದೀಕ್ಷಿತ್…!

ಹೊಸ ಪ್ರತಿಭೆ ಅಲ್ಲ ಕಣ್ರಿ ಇವರು ಅದ್ಬುತ ಪ್ರತಿಭೆ. ಈ ಪ್ರತಿಭೆಗೆ ಬಾಲಿವುಡ್ ಬೆಡಗಿ ಮಾಧುರಿ ದೀಕ್ಷಿತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಳ್ಳಿ ಹುಡುಗಿಯ ನೃತ್ಯಕ್ಕೆ ಬಾಲಿವುಡ್ ನಟಿ ಭಲೇ.. ಭೇಷ್… ಎಂದಿದ್ದಾರೆ. ಯಾಕಂದ್ರೆ ಈ ಹುಡುಗಿಯ ನೃತ್ಯ ಮಾಡುವ ಸ್ಟೈಲೇ ಹಾಕಿದೆ. ಪಕ್ಕಾ ಓಲ್ಡ್ ಸ್ಟೈಲ್ ನಲ್ಲಿ ಜನ ಮನ ಗೆದ್ದಿದ್ದಾಳೆ ಈ ಹುಡುಗಿ.

ಹೌದು.. ಹೀಗೊಂದು ವೀಡಿಯೋ ಸೋಷಿಯಲ್ ಮೀಡಿಯಲ್ಲಿ ವೈರಲ್ ಆಗಿತ್ತು. ಈ ವೀಡಿಯೋಗೆ ಪ್ರತಿಕ್ರಿಯೆ ನೀಡಿದ ಮಾಧುರಿ ಹಳ್ಳಿ ಹುಡುಗಿ ನೃತ್ಯವನ್ನು ಮೆಚ್ಚಿಕೊಂಡಿದ್ದಾರೆ.

ಹುಡಿಗಿಯೊಬ್ಬಳು ಹಳ್ಳಿ ಪರಿಸರದಲ್ಲಿ ಹಕ್ಕಿಯಂತೆ ಜಿಗಿದಾಡಿ ಅದ್ಬುತವಾಗಿ ನೃತ್ಯ ಮಾಡಿದ್ದು ನೆಟ್ಟಿಗರ ಮನ ಗೆದ್ದಿದೆ. ಪಕ್ಕಾ ಓಲ್ಡ್ ಸಾಂಗ್ ಗೆ ಓಲ್ಡ್ ಸ್ಟೈಲ್ ನಲ್ಲಿ ಎಂಟ್ರಿ ಕೊಡುವ ಹುಡುಗಿ ಸಕತ್ ಸ್ಟೆಪ್ ಹಾಕಿದ್ದಾಳೆ. ಇವಳ ಬ್ಯಾಲೆನ್ಸ್ ಹಾಗೂ ಎನರ್ಜಿಗೆ ನಟಿ ಫುಲ್ ಫಿದಾ ಆಗಿದ್ದಾರೆ.

ಮಾತ್ರವಲ್ಲದೇ 1975ರಲ್ಲಿ ಮಾಧುರಿ ನಟಿಸಿರುವ ಘೂಂಗಟ್ ನಹೀ ಖೋಲು ಸೈಯ್ಯಾ ತೆರೆ ಆಗೆ ಎನ್ನುವ ಹಾಡಿಗೆ ಯುವತಿ ಹಚ್ಚಹಸಿರಿನಿಂದ ಕುಡಿರುವ ಕೃಷಿ ಭೂಮಿಯಲ್ಲಿ ನಿಂತು ನೃತ್ಯ ಮಾಡಿದ್ದಾಳೆ. ನರ್ತಕರಿಗೆ ಹಾರಲು ರೆಕ್ಕೆಗಳ ಅಗತ್ಯವಿಲ್ಲ. ನೀವು ಹಳ್ಳಿ ಹುಡುಗಿಯ ನೃತ್ಯದಲ್ಲಿ ಕಾಣಬಹುದು ಎಂದು ಬರೆದು ವೀಡಿಯೋವನ್ನು ಟ್ವೀಟ್ ಮಾಡಲಾಗಿತ್ತು. ಈ ವಿಡಿಯೋ ಎಲ್ಲೆಡೆ ಸುದ್ದಿಯಲ್ಲಿತ್ತು. ಈ ವಿಡಿಯೋವನ್ನು ಮಾಧುರಿ ಮೆಚ್ಚುಕೊಂಡಾಡಿದ್ದಾರೆ.

ವಾವ್ಹ್.. ಅದ್ಬುತ್! ಈಕೆ ತುಂಬಾ ಸುಂದರವಾಗಿ ನೃತ್ಯ ಮಾಡಿದ್ದಾಳೆ. ಇಂಥಹ ಮತ್ತಷ್ಟು ಪ್ರತಿಭೆಗಳು ಬೆಳಕಿಗೆ ಬರಲಿ, ನಾವು ಕಾಯುತ್ತಿದ್ದೇವೆ ಎಂದು ಬರೆದುಕೊಂಡು ವಿಡಿಯೋವನ್ನು ಮಾಧುರಿ ದೀಕ್ಷಿತ್ ಶೇರ್ ಮಾಡಿದ್ದಾರೆ.

ಆದರೆ ಈ ಹುಡುಗಿ ಯಾರು ಎನನ್ಉವ ವಿಚಾರ ಮಾತ್ರ ತಿಳಿದು ಬಂದಿಲ್ಲ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights