ಬಾದಾಮಿಯಲ್ಲಿ ನನ್ನನ್ನು ಸೋಲಿಸಿದ್ದು ಜನರಲ್ಲ, BJP ನಾಯಕರು: ಶ್ರೀರಾಮುಲು ಆರೋಪ

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಾದಾಮಿ ಕ್ಷೇತ್ರದಲ್ಲಿ ನಾನು ಸೋಲಲು ಕಾರಣ ಜನರಲ್ಲ, ಬಿಜೆಪಿ ನಾಯಕರು. ಬಿಜೆಪಿಗರೇ ನನ್ನನ್ನು ಸೋಲಿಸಿದರು ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ ಶ್ರೀರಾಮುಲು ಹೇಳಿಕೆ ನೀಡಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ.

ಮೊಳಕಾಲ್ಮೂರು ತಾಲ್ಲೂಕಿನಲ್ಲಿ ಗ್ರಾಮ ಪಂಚಾಯತಿಗೆ ಅಧ್ಯಕ್ಷರಾಗಿ ಅಯ್ಕೆಯಾದವರಿಗೆ ಸನ್ಮಾನಿಸಲು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಳ ಜಾತಿಯವನು ಎಂಬ ಕಾರಣಕ್ಕೆ ನನ್ನನ್ನು ಬಿಜೆಪಿ ನಾಯಕರು ಸೋಲಿಸಿದರು. ಎರಡು ಕ್ಷೇತ್ರದಲ್ಲಿ ಎದ್ದರೆ ತನ್ನ ವರ್ಚಸ್ಸು ಹೆಚ್ಚಾಗುತ್ತದೆ ಎಂಬುದನ್ನು ಅವರು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.

ಮೋದಿ, ಅಮಿತ್ ಶಾ ಅಂತಹವರು ದೊಡ್ಡ ನಾಯಕರು ಮಾತ್ರ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಾರೆ. ಶ್ರೀರಾಮುಲು ವಾಲ್ಮೀಕಿ ನಾಯಕ ಸಮಾಜದ ಸಣ್ಣ ಕುಲದವನು. ಶ್ರೀರಾಮುಲು ಎರಡೂ ಕ್ಷೇತ್ರದಲ್ಲೂ ಗೆದ್ದರೆ ಪ್ರಭಾವ ಹೆಚ್ಚಾಗುತ್ತದೆ. ಇದರಿಂದಾಗಿ ತಮಗೂ – ತಮ್ಮ ವರ್ಚಸ್ಸಿಗೂ ಮುಳ್ಳು ಆಗ್ತಾನೆಂದು ಬಿಜೆಪಿಯವರೇ ನನ್ನನ್ನು ಸೋಲಿಸಿದರು ಎಂದು ಅವರು ತಿಳಿಸಿದ್ದಾರೆ.

ಬಾದಾಮಿ ಕ್ಷೇತ್ರದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಎದುರು 1400 ಅಲ್ಪ ಮತಗಳಿಂದ ಸೋತಿದ್ದೇನೆ. ಬಾದಾಮಿಯಲ್ಲಿ ಸೋತರೂ ಮೊಳಕಾಲ್ಮೂರಿನ ಜನರು ನನ್ನನ್ನು ಗೆಲ್ಲಿಸಿದ್ದಾರೆ. ಈ ಜನರ ವಿಶ್ವಾಸವನ್ನು ಎಂದಿಗೂ ನಾನು ಕಳೆದುಕೊಳ್ಳುವುದಿಲ್ಲ ಎಂಧು ಅವರು ತಮ್ಮ ಕ್ಷೇತ್ರದ ಜನರಿಗೆ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: BJP ಮುಕ್ತವಾಗುತ್ತಿವೆ ಸ್ಥಳೀಯ ಸಂಸ್ಥೆಗಳು; ಆಂಧ್ರದ 3,221 ಪಂಚಾಯತ್‌ ಸ್ಥಾನಗಳಲ್ಲಿ BJP ಗೆದ್ದಿದ್ದು 13 ಮಾತ್ರ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights