ಬಿಜೆಪಿ ಕನಸು ಭಗ್ನ : ಕೈ-ದಳ ದೋಸ್ತಿ – ಜೆಡಿಎಸ್ ಗೆ ಮೈಸೂರು ಮೇಯರ್ ಪಟ್ಟ!

ಮೈಸೂರು ಮಹಾನಗರ ಪಾಲಿಕೆಯ ಮೇಯರ್‌, ಉಪ ಮೇಯರ್‌ ಚುನಾವಣಾ ಕಣದಲ್ಲಿ  ಕೈ-ದಳ ದೋಸ್ತಿ ಮಾಡಿಕೊಂಡ ಬೆನ್ನಲ್ಲೆ ಬಿಜೆಪಿ ಕನಸು ಭಗ್ನವಾಗಿದೆ. ಜೆಡಿಎಸ್ ನ ರುಕ್ಮಿಣಿ ಮಾದೇಗೌಡ ಅವರಿಗೆ ಮೈಸೂರು ಮೇಯರ್ ಪಟ್ಟ ಸಿಕ್ಕಿದೆ.

ಹೌದು, ಕಾಂಗ್ರೆಸ್‌ನಿಂದ ಮೇಯರ್ ಅಭ್ಯರ್ಥಿಯಾಗಿ 32ನೇ ವಾರ್ಡ್‌ನ ಪಾಲಿಕೆ ಸದಸ್ಯೆ ಶಾಂತಕುಮಾರಿ, ಉಪ ಮೇಯರ್ ಅಭ್ಯರ್ಥಿಯಾಗಿ 10ನೇ ವಾರ್ಡ್‌ನ ಪಾಲಿಕೆ ಸದಸ್ಯ ಅನ್ವರ್ ಬೇಗ್ ಮತ್ತು ಜೆಡಿಎಸ್‌ 36ನೇ ವಾರ್ಡ್‌ ಪಾಲಿಕೆ ಸದಸ್ಯೆ ರುಕ್ಮಿಣಿ ಮಾದೇಗೌಡ ಮೇಯರ್‌ ಸ್ಥಾನದ ಅಭ್ಯರ್ಥಿಯಾಗಿ ನಾಮಪತ್ರ ನಾಮಪತ್ರ ಸಲ್ಲಿಸಿದ್ದರು. ಇದರಲ್ಲಿ 43 ಮತ ಪಡೆದ ರುಕ್ಮಿಣಿ ಮಾದೇಗೌಡ 23ನೇ ಮೇಯರ್‌ ಸ್ಥಾನ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ನ ಅನ್ವರ್ ಬೇಗ್ ಗೆ ಉಪಮೇಯರ್ ಪಟ್ಟ ಸಿಕ್ಕಿದೆ.

ಉಪ ಮೇಯರ್‌ ಆಗಿ ಜೆಡಿಎಸ್‌ನಿಂದ ಪಕ್ಷೇತರ ಅಭ್ಯರ್ಥಿ ಸಮೀವುಲ್ಲಾ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಪಕ್ಷದಿಂದ ಉಪಮೇಯರ್‌ ಆಗಿ ಸಾತ್ವಿಕ್‌ ಸಂದೇಶ್‌ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಪಕ್ಷದಿಂದ ಮೇಯರ್‌ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸುನಂದಾ ಪಾಲನೇತ್ರಗೆ 26 ಮತ ಲಭಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights