ಮತದಾರ ಪಟ್ಟಿಯಲ್ಲಿ ನಕಲಿ ಹೆಸರು; ಬಿಹಾರ ಮುಖ್ಯಮಂತ್ರಿ ಸೇರಿ 14 ಜನರ ವಿರುದ್ಧ ದೂರು ದಾಖಲು!

ಬಿಹಾರದ ಚಾಕಿ ಸೊಹಾಗ್‌ಪುರದಲ್ಲಿ ನಡೆದ ಪಂಚಾಯತ್ ಚುನಾವಣೆಯ ಸಂದರ್ಭದಲ್ಲಿ ಮತದಾರ ಪಟ್ಟಿಯಲ್ಲಿ ಮತದಾರರ ಹೆಸರುಗಳನ್ನು ಬಲವಂತಾಗಿ ಸೇರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಬಿಹಾರದ ಸಮಾಜಿಕ ಕಾರ್ಯಕರ್ತರೊಬ್ಬರು ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ 14 ಜನರ ವಿರುದ್ಧ ಮುಜಾಫರ್ಪುರ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ನ್ಯಾಯಾಲಯವು ಮಾರ್ಚ್ 4 ರಂದು ವಿಚಾರಣೆ ನಡೆಸಲಿದೆ ಎಂದು ಮುಜಾಫರ್ಪುರ್ ಸಿವಿಲ್ ಕೋರ್ಟ್‌ನ ವಕೀಲ ಜಯಚಂದ್ರ ಪ್ರಸಾದ್ ಸಾಹ್ನಿ ಅವರು ಎಎನ್‌ಐಗೆ ತಿಳಿಸಿದ್ದಾರೆ.

“ಚಾಕಿ ಸೊಹಾಗ್‌ಪುರದಲ್ಲಿನ ಮತದಾರರ ಪಟ್ಟಿಯಲ್ಲಿ ಮತ್ತೊಂದು ಪಂಚಾಯತ್‌ನ ಜನರ ಹೆಸರನ್ನು ಬಲವಂತವಾಗಿ ಪಟ್ಟಿ ಮಾಡಲಾಗಿತ್ತು ಎಂದು ಸಾಮಾಜಿಕ ಕಾರ್ಯಕರ್ತ ಚಂದನ್ ಕುಮಾರ್ ಸಹಾನಿ ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಮುಜಫರ್ಪುರ್ ಜಿಲ್ಲಾಧಿಕಾರಿ ಸೇರಿದಂತೆ 14 ಜನರ ವಿರುದ್ಧ ದೂರು ದಾಖಲಿಸಿದ್ದಾರೆ” ಎಂದು ವಕೀಲರು ಹೇಳಿದ್ದಾರೆ.

Read Also: ಪಂಚಮಸಾಲಿ ಹೋರಾಟ: ಪ್ರಶ್ನಾತೀತ ಲಿಂಗಾಯತ ನಾಯಕ ಬಿಎಸ್‌ವೈಗೆ ಬಿಕ್ಕಟ್ಟು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights