ದೇಶದಲ್ಲಿ ಕೊರೊನಾ ಹೆಚ್ಚಳ : 47,092 ಹೊಸ ಕೇಸ್ ಪತ್ತೆ – 509 ಜನ ಬಲಿ!

ದೇಶದಲ್ಲಿ ದಿನದಿಂದ ದಿನಕ್ಕೆ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು ಕಳೆದ 24 ಗಂಟೆಯಲ್ಲಿ 47,092 ಹೊಸ ಕೇಸ್ ಪತ್ತೆಯಾಗಿದೆ. ಜೊತೆಗೆ 509 ಜನ ಮಹಾಮಾರಿಗೆ ಬಲಿಯಾಗಿದ್ದಾರೆ.

ಭಾರತದಲ್ಲಿ 47,092 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು ಇದು ಎರಡು ತಿಂಗಳಲ್ಲಿ ಗರಿಷ್ಠ ಪ್ರಕರಣ ಸಂಖ್ಯೆಯಾಗಿದೆ. ಕಳೆದ ಬಾರಿ ಇದಕ್ಕಿಂತ ಹೆಚ್ಚಿನ ಪ್ರಕರಣಗಳು 63 ದಿನಗಳ ಹಿಂದೆ ಅಂದರೆ ಜುಲೈ 1 ರಂದು 48,786 ಪ್ರಕರಣಗಳು ದಾಖಲಾಗಿದ್ದವು. ಈವರೆಗೆ ದೇಶದಲ್ಲಿ ಒಟ್ಟು 3,28,57,937 ಪ್ರಕರಣಗಳು ದಾಖಲಾಗಿದೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 509 ಸಾವುಗಳು ದಾಖಲಾಗಿದ್ದು ಈವರೆಗೆ ಸಾವಿನ ಸಂಖ್ಯೆ 4,39,529 ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 35,181 ರೋಗಿಗಳು ಚೇತರಿಸಿಕೊಂಡಿದ್ದು ದೇಶಾದ್ಯಂತ ಒಟ್ಟು 3,20,28,825 ಜನ ಚೇತರಿಸಿಕೊಂಡಿದ್ದಾರೆ. ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 3,89,583 ರಷ್ಟಿದೆ.

ಭಾರತದ ಏಕದಿನ 32,803 ಪ್ರಕರಣಗಳಲ್ಲಿ ಕೇರಳದಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 4,456 ಪ್ರಕರಣಗಳು, ಮಿಜೋರಾಂದಲ್ಲಿ 1,992 ಪ್ರಕರಣಗಳು, ತಮಿಳುನಾಡು 1,509 ಪ್ರಕರಣಗಳು ಮತ್ತು ಆಂಧ್ರಪ್ರದೇಶ 1,186 ಪ್ರಕರಣಗಳು ದಾಖಲಾಗಿವೆ.

ದೇಶದಲ್ಲಿ 509 ಸಾವುಗಳಲ್ಲಿ ಮಹಾರಾಷ್ಟ್ರದಲ್ಲಿ ಗರಿಷ್ಠ ಸಾವುಗಳು ವರದಿಯಾಗಿವೆ (183). ಕೇರಳದಲ್ಲಿ 173 ಪ್ರಕರಣಗಳು ದಾಖಲಾಗಿವೆ .

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 81,09,244 ಕೋವಿಡ್ -19 ಲಸಿಕೆ ಡೋಸ್‌ಗಳನ್ನು ನೀಡಲಾಗಿದ್ದು, ಈವರೆಗೆ 66,30,37,334 ಡೋಸ್‌ಗಳನ್ನು ನೀಡಲಾಗಿದೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 16,84,441 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights