ಡ್ರಗ್ಸ್ ಕೇಸ್: ಮತ್ತೊಂದು ಸ್ಪೋಟಕ ಹೇಳಿಕೆ ನೀಡಿದ ಇಂದ್ರಜಿತ್ ಲಂಕೇಶ್!

ಸ್ಯಾಂಡಲ್ವುಡ್ ಮಾದಕ ಮಾಫಿಯಾಗೆ ಸಂಬಂಧಿಸಿದಂತೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಮತ್ತೊಂದು ಸ್ಪೋಟಕ ಹೇಳಿಕೆ ಕೊಟ್ಟಿದ್ದಾರೆ.

ಬೆಂಗಳೂರಿನ ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ಮಾದ್ಯಮದೊಂದಿಗೆ ಮಾತನಾಡಿದ ಇಂದ್ರಜಿತ್ , “ಇಲ್ಲಿವರೆಗೂ ಡ್ರಗ್ಸ್ ಮಾಫಿಯಾದಲ್ಲಿ ಸಣ್ಣ ಮೀನುಗಳು ಮಾತ್ರ ಸಿಕ್ಕಿವೆ. ಆದರೆ ಇನ್ನೂ ದೊಡ್ಡ ತಿಮಿಂಗಿಲಗಳನ್ನು ಹಿಡಿಯುವುದು ಬಾಕಿ ಇದೆ” ಎಂದು ಹೇಳಿದ್ದಾರೆ.

‘ದೊಡ್ಡ ದೊಡ್ಡವರ ಮಕ್ಕಳ ಲಿಂಕ್ ಡ್ರಗ್ಸ್ ಧಂದೆಯಲ್ಲಿದೆ ಎಂದು ಇಂದ್ರಜಿತ್ ಹೇಳಿದ್ದಾರೆ. ವಿರೋಧ ಪಕ್ಷದವರೇ ಈ ಬಗ್ಗೆ ಚರ್ಚೆ ಮಾಡುತ್ತಿಲ್ಲ. ವೈಯಕ್ತಿಕವಾಗಿ ನಾನು ಯಾರ ಮೇಲೂ ಆರೋಪ ಮಾಡುತ್ತಿಲ್ಲ. ಈ ಹಿಂದೆ ಪೊಲೀಸರ ಕೈಗೆ ಸಿಕ್ಕವರು ಆರಾಮವಾಗಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ಹಲವಾರು ಜನರಿದ್ದಾರೆ. ರಾಜಕಾರಣಿಗಳು, ನಿರ್ದೇಶಕರು, ನಿರ್ಮಾಪಕರ ಮಕ್ಕಳಿದ್ದಾರೆ. ನಮ್ಮ ಮಾಹಿತಿಯಳನ್ನು ಕೊಡಬೇಕು ಅದು ನಮ್ಮ ಕರ್ತವ್ಯ ಅಷ್ಟೇ. ಸಿಸಿಬಿಗೆ ನನಗೆ ಗೊತ್ತಿರುವ ಮಾಹಿತಿ ನೀಡಿದ್ದೇನೆ’ ಎಂದಿದ್ದಾರೆ.

ಈ ಹಿಂದೆ ಇಂದ್ರಜಿತ್ ಲಂಕೇಶ್ ಕೊಟ್ಟ ಮಾಹಿತಿ ಜಾಲ ಹಿಡಿದು ಹೊರಟ ಸಿಸಿಬಿಗೆ ಸ್ಯಾಂಡಲ್ ವುಡ್ ನಟಿಯರಾದ ಸಂಜನಾ ಮತ್ತು ರಾಗಿಣಿ ಸೇರಿದಂತೆ ಹಲವಾರು ಡ್ರಗ್ಸ್ ಪೆಡ್ಲರ್ ಗಳು ಸಿಕ್ಕಿ ಹಾಕಿಕೊಂಡಿದ್ದರು. ಸದ್ಯ ನಟಿಯರಿಬ್ಬರೂ ಜೈಲುವಾಸದಿಂದ ಜಮೀನು ಪಡೆದು ಹೊರಬಂದಿದ್ದಾರೆ. ಈ ಕೇಸ್ ನಲ್ಲಿ ರಿಯಾಲಿಟಿ ಶೋ ಆ್ಯಂಕರ್ ಜೊತೆಗೆ ನಟ-ನಟಿಯರ ವಿಚಾರಣೆಯಾಗಿದೆ.

ಇನ್ನೂ ಇಂದ್ರಜಿತ್ ಅವರಿಂದ ಮಾಹಿತಿ ಪಡೆದ ಸಿಸಿಬಿ ಕೋಟ್ಯಾಂತರ ರೂಪಾಯಿ ಟ್ರಗ್ಸ್ ವಶಕ್ಕೆ ಪಡೆದಿದೆ. ಅವಶ್ಯಕತೆ ಇದ್ದಾಗಲೆಲ್ಲಾ ಸಿಸಿಬಿ ಇಂದ್ರಜಿತ್ ಅವರನ್ನು ಕಚೇರಿಗೆ ಕರೆಯಿಸಿ ಮಾಹಿತಿ ಪಡೆದುಕೊಂಡಿದೆ. ಇಂದು ಕೂಡ ಸಿಸಿಬಿ ಕಚೇರಿಗೆ ಭೇಟಿ ನೀಡಿದ ನಿರ್ದೇಶಕ ಇಂದ್ರಜಿತ್, ‘ಈಗಾಗಲೇ ಡ್ರಗ್ಸ್ ಧಂದೆಯ ಬಗ್ಗೆ ತನಿಖೆ ಮಾಡಲಾಗುತ್ತಿದೆ. ಆದರೆ ತನಿಖೆ ಇನ್ನೂ ಚುರುಕಾಗಬೇಕು’ ಎಂದಿದ್ದಾರೆ.

ಸದ್ಯ ಇಂದ್ರಜಿತ್ ಹೇಳಿಕೆ ಮೇಲೆ ಸಿಸಿಬಿ ಚುರುಕಾಗಿ ತನಿಖೆ ಮಾಡಿದರೆ ಮಾದಕ ಲೋಕದಲ್ಲಿ ತಳುಕು ಹಾಕಿಕೊಂಡಿರುವವರ ನಿದ್ದೆಗೆಡುವುದು ಪಕ್ಕಾ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights