Categories
Breaking News District State

ಕೆಲವೇ ತಿಂಗಳಲ್ಲಿ ಇದಕ್ಕಿದ್ದಂತೆ ಹಲವರು ೧೧ ಜನ ಸಾವು : ಕಾರಣವೇನು ಗೊತ್ತಾ..?

ಅನಾರೋಗ್ಯ ಹಿನ್ನೆಲೆ ಕೆಲವೇ ತಿಂಗಳಲ್ಲಿ ಇದಕ್ಕಿದ್ದಂತೆ ಹಲವರು ಸಾವು ಸಂಭವಿಸಿರೋ ಘಟನೆ, ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಎನ್.ಚಮಕಲಹಳ್ಳಿಯಲ್ಲಿ ನಡೆದಿದೆ.

ಕಳೆದ ಕೆಲವು ತಿಂಗಳುಗಳಿಂದ ೧೧ ಜನ ಅಕಾಲಿಕ ಮರಣಕ್ಕೆ ತುತ್ತಾಗಿದ್ದು, ಗ್ರಾಮದ ಜನರಲ್ಲಿ ಆತಂಕ ಮನೆಮಾಡಿದೆ, ಮೃತಪಟ್ಟವರಲ್ಲಿ ವೃದ್ದರು, ಯುವಕರು ಹಾಗೂ ಗರ್ಭಿಣಿ ಸ್ತ್ರೀಯರಿದ್ದು, ಮತ್ತಷ್ಟು ಆತಂಕಕ್ಕೆ ಒಳಗಾದ ಗ್ರಾಮಸ್ಥರು ಆರೋಗ್ಯ ಇಲಾಖೆಗೆ ದೂರು ಸಲ್ಲಿಸಿದ್ದಾರೆ, ದೂರು ಬಂದ ಹಿನ್ನೆಲೆ, ಜಿಲ್ಲಾ ಆರೋಗ್ಯ ಅಧಿಕಾರಿ ವಿಜಯ್ ಕುಮಾರ್ ನೇತೃತ್ವದಲ್ಲಿ ವೈದ್ಯರ ತಂಡ ಗ್ರಾಮದಲ್ಲಿ ಬೇಟಿ ಕೊಟ್ಟಿದ್ದು ಗ್ರಾಮಸ್ಥರಿಂದ ಮಾಹಿತಿ ಕಲೆ ಹಾಕಿದ್ದಾರೆ.

ಮೇಲ್ನೋಟಕ್ಕೆ ಗ್ರಾಮದ ನೀರು ಹಾಗೂ ನೈರ್ಮಲ್ಯ ಕಾಪಾಡದ ಕಾರಣ ಸಾಂಕ್ರಾಮೊಕ ರೋಗಗಳಿಂದ ಸರಣಿ ಸಾವುಗಳು ಸಂಭವಿಸಿವೆ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ನಡೆದಿರೋ ಸರಣಿ ಸಾವುಗಳಿಗೆ ಕಾರಣ ತಿಳಿಯಲು ಗ್ರಾಮದ ಕುಡಿಯುವ ನೀರಿನ ಸ್ಯಾಂಪಲ್ ಸೇರಿದಂತೆ ಗ್ರಾಮದಲ್ಲಿ ಹಲವು ರೋಗಿಗಳ ರಕ್ತದ ಸ್ಯಾಪಂಲ್ ಅನ್ನು ವೈದ್ಯರು ಪಡೆದುಕೊಂಡಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಅಲ್ಲೇ ಬೀಡು ಬಿಟ್ಟಿರೋ ವೈದ್ಯರು, ಗ್ರಾಮದಲ್ಲಿನ ಎಲ್ಲಾ ಜನರನ್ನು ತಪಾಸಣೆಗೆ ಒಳಪಡಿಸಿ, ಉಳಿದ ರೋಗಿಗಳ ಮೇಲೆ ನಿಗಾ ವಹಿಸಿದ್ದಾರೆ.

Categories
Breaking News District State

ಒಂದು ಹುಲಿ ಹಿಡಿಯಲು ಹೋದವರಿಗೆ ಕಂಡಿದ್ದು ನಾಲ್ಕು ಹುಲಿಗಳು…!

ಬಂಡೀಪುರದ ಚೌಡಹಳ್ಳಿಯಲ್ಲಿ ಒಂದು ಹುಲಿ ಹಿಡಿಯಲು ಹೋದವರಿಗೆ ಆಶ್ಚರ್ಯವೊಂದು ಎದುರಾಗಿ ಇಡೀ ಗ್ರಾಮಸ್ಥರೇ ಬೆಚ್ಚಿ ಬಿದ್ದಿದ್ದಾರೆ.

ಹೌದು.. ಬಂಡೀಪುರ ಓಂಕಾರ ವಲಯಾರಣ್ಯದಂಚಿನ ಬಾಳೆತೋಟದಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ವೇಳೆ ತಾಯಿ ಹುಲಿ ಸೇರಿದಂತೆ ನಾಲ್ಕು ಹುಲಿಗಳ ಪ್ರತ್ಯಕ್ಷವಾಗಿವೆ. ಬಂಡೀಪುರ ಓಂಕಾರ ವಲಯಾರಣ್ಯದಂಚಿನ ನಂಜನಗೂಡು ತಾಲೂಕು ಕೊತ್ತನಹಳ್ಳಿ ಬಳಿ ಇರುವ ಕಾಳಪ್ಪ ಎಂಬುವರ ತೋಟದಲ್ಲಿ ನಾಲ್ಕು ಹುಲಿಗಳು ಕಂಡು ಬಂದಿದೆ.

ಈ ಹುಲಿಗಳು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದ್ದು, ಗ್ರಾಮಸ್ಥರು ಭಯಬೀತರಾಗಿದ್ದಾರೆ. ಸ್ಥಳಕ್ಕೆ ವನ್ಯಜೀವಿ ಪಿಸಿಸಿಎಫ್ ಸಂಜಯ್ ಮೋಹನ್, ಬಂಡೀಪುರ ಹುಲಿಯೋಜನೆ ನಿರ್ದೇಶಕ ಬಾಲಚಂದರ್ ಭೇಟಿ ನೀಡಿ ಹುಲಿಗಳನ್ನು ಕಾಡಿನತ್ತ ಅಟ್ಟಲು ಕಾರ್ಯಾಚರಣೆ ನಡೆಸಿದ್ದಾರೆ.

Categories
Breaking News District Political State

ನಮ್ಮಲ್ಲಿ ಯಾವುದೇ ಬಣ- ಗುಂಪುಗಾರಿಕೆ ಇಲ್ಲ – ಶೋಭಾ ಕರಂದ್ಲಾಜೆ

ಸಿದ್ದರಾಮಯ್ಯ ಅಂದ್ರೆ, ಟಿಪ್ಪು ಜಯಂತಿ ಮಾಡಿದ್ರು, ಸಮಾಜ-ಸಮಾಜ ಒಡೆದ್ರು, ಲಿಂಗಾಯುತ-ವೀರಶೈವರನ್ನ ಒಡೆದ್ರು ಅನ್ನೋದನ್ನ ಬಿಟ್ಟರೆ ಜನ ಬೇರ್ಯಾವುದನ್ನು ನೆನಪಿಟ್ಟುಕೊಂಡಿಲ್ಲ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವ್ರು, ಅಭಿವೃದ್ಧಿ ಕೆಲಸದಿಂದ ಜನ ಸಿದ್ದರಾಮಯ್ಯನನ್ನ ನೆನಪಿಟ್ಟುಕೊಂಡಿಲ್ಲ. ಇಂತಹಾ ಒಳ್ಳೆ ಅಭಿವೃದ್ಧಿ ಕೆಲಸವಾಯ್ತು, ಇಂತಹಾ ದೊಡ್ಡ ಪ್ರಾಜೆಕ್ಟ್ ಬಂತು ಎಂದು ಯಾರೂ ಸಿದ್ದರಾಮಯನನ್ನ ನೆನಪಿಟ್ಟುಕೊಂಡಿಲ್ಲ ಎಂದ್ರು. ಸಿದ್ದರಾಮಯ್ಯನವರು ಹತಾಶರಾಗಿದ್ದಾರೆ. ಅವರ ಪಕ್ಷದೊಳಗೆ ಅವರು ಅಸ್ತಿತ್ವ ಕಳೆದುಕೊಳ್ತಿದ್ದಾರೆ. ಮುನಿಯಪ್ಪ-ಸಿದ್ದರಾಮಯ್ಯ ಹೇಗೆ ಕಿತ್ತಾಡಿದ್ರು ಅನ್ನೋದನ್ನ ನಾವು ನೋಡಿದ್ದೇವೆ. ಈ ಒಂದು ಹತಾಶೆ ಮನೋಭಾವದಿಂದ ಅವರು ಮಾತನಾಡುತ್ತಿದ್ದಾರೆ. ಬಿಜೆಪಿಯಲ್ಲಿ ಯಾವುದೇ ಗುಂಪುಗಳಿಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡ್ತಿದ್ದೇವೆ ಎಂದ್ರು.

ಕಾಂಗ್ರೆಸ್ಸಿಗರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಯಾಕಂದ್ರೆ, ಕಾಂಗ್ರೆಸ್ಸೋರು ಎನ್.ಡಿ.ಆರ್.ಎಫ್, ಹಾಗೂ ಎಸ್.ಟಿ.ಆರ್.ಎಫ್‍ನಲ್ಲಿ ರಾಜ್ಯಕ್ಕೆ ಎಷ್ಟು ದುಡ್ ಕೊಟ್ರೋ ಅದರ ಎರಡರಷ್ಟು ಹಣವನ್ನ ಐದು ವರ್ಷದಲ್ಲಿ ಮೋದಿ ಸರ್ಕಾರ ರಾಜ್ಯಕ್ಕೆ ಕೊಟ್ಟಿದೆ. ಅಧಿಕಾರವಿದ್ದಾಗ ಕಾಂಗ್ರೆಸ್ ಏನ್ ಮಾಡಿದೆ ಅನ್ನೋದ್ನ ನಾವೇ ನೋಡಿದ್ದೇವೆ ಎಂದ್ರು. ನೆರೆ ಪರಿಹಾರಕ್ಕೆ ತಾತ್ಕಾಲಿಕವಾಗಿ ಹಣ ಬಿಡುಗಡೆಯಾಗಿದೆ. ಎನ್.ಡಿ.ಆರ್.ಎಫ್‍ನಿಂದಲೂ ಹಣ ಬಿಡುಗಡೆಯಾಗಿದೆ. ಶಾಶ್ವತ ಪರಿಹಾರಕ್ಕೆ ಶೀಘ್ರವೇ ಹಣ ಬಿಡುಗೊಡೆಯಾಗುತ್ತೆ ಎಂದ್ರು.

Categories
Breaking News District Political State

ಸಿದ್ಧರಾಮಯ್ಯರಿಗೆ ನಾನೇ ನಾಯಕ, ನಾನೇ ಪಕ್ಷ ಅಧಿಕಾರಕ್ಕೆ ತಂದಿದ್ದು ಎಂಬ ಸೊಕ್ಕು – ಈಶ್ವರಪ್ಪ

ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಮಾಜಿ ಸಿಎಂ ಸಿದ್ದರಾಮಯ್ಯರ ರಾಜಕೀಯ ಜೀವನ ಎಲ್ಲರಿಗೂ ಪಾಠ ಎಂದು ಕುಟುಕಿದ್ದಾರೆ.

ಬಳ್ಳಾರಿ ವಿಭಜನೆ ವಿಚಾರ ಪ್ರಸ್ತಾಪಿಸಿದ ಈಶ್ವರಪ್ಪ,  ಆನಂದ್ ಸಿಂಗ್ ನೇತೃತ್ವದಲ್ಲಿ ವಿಜಯನಗರ ಜಿಲ್ಲೆ ಬೇರೆ ಮಾಡಿ ಎಂದು ಕೇಳಿಕೊಂಡಿದ್ದಾರೆ. ಈ ವಿಚಾರ ಸಿ.ಎಂ. ಮುಂದೆ ಬಂದಾಗ, ಈ ಬಗ್ಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಯಾರಿಗೂ ಕೂಡ, ಅಧಿಕಾರ ಶಾಶ್ವತವಲ್ಲ.

ಅಧಿಕಾರದಲ್ಲಿದ್ದಾಗ ಅವರು ಮಾಡಿರುವ ಕೆಲಸ, ಜನರೊಂದಿಗಿನ ಸಂಪರ್ಕ ಅತಿ ಮುಖ್ಯವಾಗುತ್ತೆ. ನಾನೆ ಮುಖ್ಯಮಂತ್ರಿ ಎಂದು ಸರ್ವಾಧಿಕಾರಿ ಧೋರಣೆ ಮಾಡಿಕೊಂಡು ನಾನು ಏನು ಬೇಕಾದರೂ ಮಾಡಬಹುದು ಎಂಬುದು ಸರಿಯಲ್ಲ. ಸಿದ್ಧರಾಮಯ್ಯನವರ ಕುತಂತ್ರದಿಂದಾಗಿಯೇ, ಇಂದು ರಾಜ್ಯದಲ್ಲಿ ಕಾಂಗ್ರೆಸ್ ನಿರ್ನಾಮವಾಗಿದೆ. ಕಾಂಗ್ರೆಸ್ ನಿರ್ನಾಮವಾಯ್ತು, ಅವರು ಸೋತ್ರು, ಸರ್ಕಾರನೂ ಬಿದ್ದೊಯ್ತು. ಇದು ಎಲ್ಲರಿಗೂ ಪಾಠ.

ಸಿದ್ಧರಾಮಯ್ಯನವರು, ಕೆಟ್ಟ ಕೆಟ್ಟ ಪದಗಳನ್ನು ಬಳಸಿದ್ದಾರೆ. ಸಂಘಟನೆ ಮೀರಿ ಯಾರೇ ಹೊರ ಹೋದರು, ದೇಶದಲ್ಲಿ ಅವರು ಉದ್ಧಾರವಾಗಿರುವ ಉದಾಹರಣೆಗಳೇ ಇಲ್ಲ. ಸಿದ್ಧರಾಮಯ್ಯರಿಗೆ ನಾನೆ ನಾಯಕ, ನಾನೆ ಪಕ್ಷ ಅಧಿಕಾರಕ್ಕೆ ತಂದಿದ್ದು ಎಂಬ ಸೊಕ್ಕು ಇದೆ.

ಪಕ್ಷ ದ್ರೋಹಿಗಳಿಗೆ ಯಾವುದೇ ಪಕ್ಷದಲ್ಲಿ ಸ್ಥಾನ ಸಿಗಬಾರದು. ಪಕ್ಷದ ನಿಷ್ಠಾವಂತರಿಗೆ, ಎಂದಿಗೂ ಪಕ್ಷದಲ್ಲಿ ಬೆಲೆ ಇದೆ.ಯು.ಟಿ. ಖಾದರ್ ಆರ್.ಎಸ್.ಎಸ್. ಮಾದರಿಯಲ್ಲಿ ಸಂಘಟನೆ ಮಾಡಲು ಹೊರಟಿರುವ ವಿಚಾರ ಮಾತನಾಡಿದರು, ಅವರು ಆರ್.ಎಸ್.ಎಸ್. ತರಾನಾದರೂ ಮಾಡಲೀ, ಏಳ್.ಎಸ್.ಎಸ್. ತರನಾದರೂ ಮಾಡಲೀ. ಆದರೆ, ಆ ಸಂಘಟನೆ ರಾಷ್ಟ್ರಭಕ್ತಿಗೆ ಆದ್ಯತೆ ನೀಡುವಂತಾಗಬೇಕು ಎಂದರು.

ಇದೇ ವೇಳೆ ಮುಖ್ಯಮಂತ್ರಿಗಳ ಬಳಿ ಇದ್ದ ಯುವಜನ ಮತ್ತು ಕ್ರೀಡಾ ಇಲಾಖೆ ಸಚಿವ ಸ್ಥಾನ, ನಿನ್ನೆ ನನಗೆ ನೀಡಿದ್ದರು. ಆದರೆ, ಇದನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ, ತೆಗೆದುಕೊಳ್ಳಬೇಕೋ –ಬೇಡವೋ ಎಂಬದನ್ನು ನಿರ್ಧರಿಸುತ್ತೇನೆ.

ಸುಪ್ರೀಂ ಕೋರ್ಟ್ ಮೊರೆ ಹೋಗಿರುವ ಅನರ್ಹ ಶಾಸಕರ ವಿಚಾರದ ಬಗ್ಗೆ ಮಾತನಾಡಿದ ಈಶ್ವರಪ್ಪ, ಕೋರ್ಟ್ ತೀರ್ಮಾನ ಏನು ಆಗುತ್ತೆ ಎಂಬುದು ನಾನಲ್ಲ ದೇವರು ಕೂಡ ಹೇಳಲು ಸಾಧ್ಯವಿಲ್ಲ. ಸಭಾಧ್ಯಕ್ಷರಾದ ರಮೇಶ್ ಕುಮಾರ್ ಅವರು, ಸಿದ್ಧರಾಮಯ್ಯನವರ ಮಾತು ಕೇಳಿ ಶಾಸಕರನ್ನು ಅನರ್ಹರನ್ನಾಗಿಸಿದ್ದಾರೆ.

ಸುಪ್ರೀಂ ಕೋರ್ಟ್ ಹೇಳಿದ್ದು, ರಾಜೀನಾಮೆ ಅಂಗಿಕರಿಸುತ್ತಿರೋ ಅಥವಾ ಬಿಡುತ್ತಿರೋ ಎಂದು ಹೇಳಿತ್ತು. ಆದರೆ, ರಮೇಶ್ ಕುಮಾರ್ ಎರಡನ್ನೂ ಬಿಟ್ಟು, ಶಾಸಕರನ್ನು ಅನರ್ಹಗೊಳಿಸಿದ್ದರು. ಅ. 22 ರಂದು ತೀರ್ಪು ಇದ್ದು, ಅಂದು ನ್ಯಾಯ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.

ಗುಲ್ಬರ್ಗದಿಂದ ಸ್ಪರ್ಧೆ ಮಾಡಿದ್ದ ಶಾಸಕರ ರಾಜೀನಾಮೆ ಅಂಗಿಕರಿಸುತ್ತಾರೆ. ಆದರೆ, ಈ 17 ಜನ ಶಾಸಕರ ರಾಜೀನಾಮೆ ಅಂಗಿಕರಿಸಿಲ್ಲ. ಅವರಿಗೊಂದು ನ್ಯಾಯ, ಇವರಿಗೊಂದು ನ್ಯಾಯಾನಾ ಎಂದು ಪ್ರಶ್ನೆ ಮಾಡಿದರು.

ಶರಾವತಿ ಕಣಿವೆಯಲ್ಲಿ ಭೂಗರ್ಭ ವಿದ್ಯುತ್ ಯೋಜನೆ ಡಿಪಿಆರ್ ಸಿದ್ಧತೆ ವಿಚಾರವಾಗಿ ಮಾತನಾಡಿದ ಈಶ್ವರಪ್ಪ ಅವರು, ಕಾಡು ನಾಶವಾಗುತ್ತೆ ಅಂತಾ ವಿದ್ಯುತ್ ಉತ್ಪಾದನೆ ನಿಲ್ಲಿಸಲು ಆಗಲ್ಲ. ಹಾಗಂತಾ, ಕಾಡು ನಾಶ ಮಾಡಿ, ವಿದ್ಯುತ್ ಉತ್ಪಾದನೆ ಮಾಡುವುದು ಸರಿಯಲ್ಲ. ಕಾಡು ಉಳಿಯಬೇಕು, ವಿದ್ಯುತ್ ಕೂಡ ಉತ್ಪಾದನೆಯಾಗಬೇಕು. ಈ ಕುರಿತಂತೆ, ತಜ್ಞರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಅಂತಿಮವಾಗಿ ಕ್ಯಾಬಿನೆಟ್ ಮುಂದೆ ಬಂದಾಗ ತೀರ್ಮಾನ ಮಾಡುತ್ತೇವೆ. ವಿದ್ಯುತ್ ಇಲ್ಲದ ಕುಗ್ರಾಮಗಳು ರಾಜ್ಯದಲ್ಲಿ, ದೇಶದಲ್ಲಿ, ಸಾಕಷ್ಟಿವೆ. ಅಲ್ಲಿಗೆ ವಿದ್ಯುತ್ ನೀಡುವ ನಿಟ್ಟಿನಲ್ಲಿ, ಯೋಜನೆ ರೂಪಿಸಬೇಕಿದೆ.

 

 

 

Categories
Breaking News District Political State

‘ದೇವೇಗೌಡರಿಗೆ ಚಾಕು ಹಾಕಿ ಹೋಗಿದ್ದವರನ್ನೇಲ್ಲಾ ಜನ ಡಸ್ಟ್ ಬಿನ್ ಗೆ ಹಾಕಿದ್ದಾರೆ’ ರೇವಣ್ಣ

ಕೆಲವರು ದೇವೇಗೌಡರಿಗೆ ಚಾಕು ಹಾಕಿ ಹೋಗಿದ್ರು ಅವರನ್ನೇಲ್ಲಾ ಈಗ ಜನ ಡಸ್ಟ್ ಬಿನ್ ಗೆ ಹಾಕಿದ್ದಾರೆ ಎಂದು ಜೆಡಿಎಸ್ ಬಿಟ್ಟು ಹೋದ ಶಾಸಕರ ವಿರುದ್ಧ ರೇವಣ್ಣ ಗರಂ ಆಗಿದ್ದಾರೆ.

ಜೆಡಿಎಸ್ ಮುಗಿಸಲು ಯಾರಿಂದಲೂ ಸಾಧ್ಯವಿಲ್ಲಾ. ದೇವೇಗೌಡರು ಇದನ್ನೆಲ್ಲಾ ಸಾಕಷ್ಟು ನೋಡಿದ್ದಾರೆ. ಎಲಿವೆಟೆಡ್ ಕಾರಿಡಾರ್ ನ್ನ ನನ್ನ ಅಧಿಕಾರದ ಅವಧಿಯಲ್ಲಿ ಜಾರಿ ಮಾಡಿದೆ. 1 ದಿಂದ 24 ಕಿಮೀ, ಕಾಮಗಾರಿ ಇದು ಎಲಿವೆಟೆಡ್ ಕಾಮಗಾರಿ, ಎಲಿವೆಟೆಡ್ ಕಾಮಗಾರಿ ಸಂಭಂದ ಹೈಕೋರ್ಟ್ ನಲ್ಲಿ‌ ಸ್ಟೇ ಇದೆ. ಆದ್ರೆ ಈಗ ಈ ಎಲಿವೆಟೆಡ್ ಕಾಮಗಾರಿಯನ್ನ ತಡೆ ಹಿಡಿದಿದ್ದಾರೆ. ನಾನು ಮಾಡಿದ್ದು 5500 ಕೋಟಿ , ಆಧರೆ ಈಗ 30 ಸಾವಿರ ಕೋಟಿ ಎಂದರು. ಲೋಕಸಭಾ ಚುನಾವಣೆಯಲ್ಲಿ ಪಡುವಲಹಿಪ್ಪೆ ಮತಗಟ್ಟೆಯಲ್ಲಿ 26 ನಿಮಿಷ ಒಳಗಡೆ ಇದ್ದ ಕಾರಣ ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದರು.

 

Categories
Breaking News District State

ಮದ್ದೂರಿನಲ್ಲಿ ಕೇಳಿ ಬಂದ ಭಾರೀ ಸ್ಫೋಟದ ಸದ್ದು : ಬೆಚ್ಚಿ ಬಿದ್ದ ಜನತೆ….

ಮಂಡ್ಯದ ಮದ್ದೂರಿನಲ್ಲಿ ಭಾರೀ ಸ್ಫೋಟದ ಸದ್ದು ಕೇಳಿಬಂದ ಹಿನ್ನೆಲೆಯಲ್ಲಿ ಮದ್ದೂರಿನ ಮಂದಿ ಬೆಚ್ಚಿ ಬಿದ್ದದ್ದಾರೆ.

ಮಧ್ಯಾಹ್ನ ೩-೫೫ ರಲ್ಲಿ ಕೇಳಿ‌ ಬಂದ ಭಾರೀ ಸದ್ದು ಕೇಳಿ ಬಂದಿದ್ದು, ಸದ್ದಿ‌ಗೆ ಭೂಮಿ ಕೆಲಕಾಲ ಕಂಪಿಸಿದ ಅನುಭವವಾಗಿದೆ. ಜಿಲ್ಲೆಯಲ್ಲಿ ಪದೇ ಪದೇ ಕೇಳಿ ಬರ್ತಿರುವ ನಿಗೂಢ ಸದ್ದಿಗೆ ಜನ ಭಯಬೀತರಾಗಿದ್ದಾರೆ.

ಈ ಹಿಂದೆ ಕೂಡ ಮದ್ದೂರು ಹಾಗೂ ಕೆ.ಆರ್.ಎಸ್ . ಭಾಗದಲ್ಲಿ ಇದೇ ರೀತಿಯ ಶಬ್ದವಾಗಿತ್ತು. ಜಿಲ್ಲೆಯಲ್ಲಿ ಪದೇ ಪದೇ ಕೇಳಿ ಬರ್ತಿರೋ ನಿಗೂಢ ಸ್ಫೋಟದ ಸದ್ದು ಯಾವುದು ಅನ್ನೋದು ಸದ್ಯ ಪ್ರಶ್ನೆಯಾಗಿದೆ.

Categories
Breaking News State

ಹೊಸ ಸಂಚಾರಿ ನಿಯಮ ಕೇಳಿದ ಮಂದಿ ಸುಸ್ತೋ ಸುಸ್ತು : ದಿನವೊಂದಕ್ಕೆ 3 ಪಟ್ಟು ಹೆಚ್ಚು ದಂಡ ಸಂಗ್ರಹ

ವಾಹನ ಸವಾರರೇ ಎಚ್ಚರ… ಎಚ್ಚರ…. ನೀವೇನಾದ್ರು ಕಾರು, ದ್ವಿಚಕ್ರ ಅಥವಾ ಇನ್ನಿತರ ಯಾವುದೇ ವಾಹನಗಳನ್ನ ತೆಗೆದುಕೊಂಡು ರಸ್ತೆಗಿಳಿಯಬೇಕೇದ್ರಾ ಒಮ್ಮೆ ಹೆಲ್ಮೆಟ್, ವಾಹನ ಪರವಾನಿಗೆ, ಸೀಟ್ ಬೆಲ್ಟ್ ಹಾಕಿದ್ದೀರಾ, ದಾಖಲಾತಿಗಳೆಲ್ಲವೂ ಸರಿಯಾಗಿಯಾ ಅನ್ನೋದನ್ನ ಚೆಕ್ ಮಾಡ್ಕೊಂಡ್ ಬಿಡಿ. ಯಾಕೆಂದ್ರೆ ಇಷ್ಟು ದಿನ ನಮ್ಮನ್ನ ಯಾರು ಕೇಳೋರು ಅಂದುಕೊಳ್ಳುವ ವಾಹನ ಸವಾರರಿಗೆ ಟ್ರಾಫಿಕ್ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ.

ಅದ್ಯಾಕಪ್ಪಾ ಅಂತೀರಾ.. ಇದೀಗ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರ್ ವಾಹನ ಕಾಯ್ದೆಯ ತಿದ್ದು ಪಡಿಯ ಅನುಸಾರವಾಗಿ ಎಲ್ಲವೂ ದುಬಾರಿಯೋ ದುಬಾರಿಯಾಗಿದೆ.

ಹೌದು… ಸಂಚಾರಿ ನಿಯಮದ ಪ್ರಕಾರ ನಿಯಮ ಪಾಲಿಸದೇ ರಸ್ತೆಗಿಳಿದರೆ ನಿಮ್ಮ ಜೇಬಿಗೆ ಕತ್ತರಿ ಗ್ಯಾರೆಂಟಿ. ವೀಕೆಂಡ್ ಮೋಜು ಮಸ್ತಿಗೆ ಮದ್ಯಪಾನ ಮಾಡಿ ರಸ್ತೆಗಿಳಿದರೆ, ಹೆಲ್ಮೆಟ್ ಧರಿಸಿದೇ ಹೋದರೆ, ಪರವಾನಿಗೆ ಇಲ್ಲದೇ ಇದ್ದರೇ, ಟ್ರಾಫಿಕ್  ಪೊಲೀಸರು ಸರಿಯಾಗೇ ಶಾಸ್ತಿ ಮಾಡ್ತಾರೆ.

ಟ್ರಾಫಿಕ್ ಫೈನ್ ಹೆಚ್ಚಿಗೆ ಮಾಡಿ ಆದೇಶ ಹೊರಡಿಸಿದ್ದ ಮೊದಲ ದಿನವೇ ಸರ್ಕಾರದ ಖಜಾನೆ ಬೋಂಬಾಟ್ ಭರ್ತಿಯಾಗಿದೆ. ಹೊಸ ನಿಯಮ ಬಂದ್ಮೇಲೆ ದಿನವೊಂದಕ್ಕೆ 3 ಪಟ್ಟು ಹೆಚ್ಚು ದಂಡ ಸಂಗ್ರಹವಾಗಿದ್ದು, ದಾಖಲೆ ಮಟ್ಟದಲ್ಲಿ ಕೇಸ್ ಗಳ ಸಂಖ್ಯೆ ಕೂಡ ಹೆಚ್ಚಾಗಿದೆ. ಇದೇ ವೇಳೆ  ಹೊಸ ರೂಲ್ಸ್ ಹಾಗೂ ಫೈನ್ ಅಮೌಂಟ್  ಕೇಳಿದ ಬೆಂಗಳೂರಿನ ಜನ ಅಕ್ಷರಷ: ಸುಸ್ತಾಗಿದ್ದಾರೆ.

ಹೌದು… ಹೊಸ ನಿಯಮ ಜಾರಿಯಾದ ಒಂದೇ ದಿನದಲ್ಲಿ ಹೆಲ್ಮೆಟ್ ರಹಿತ ಚಾಲನೆ ಪ್ರಕರಣ – 1518 ದಾಖಲಾಗಿದ್ದು, 15 ಲಕ್ಷ 18 ಸಾವಿರ ದಂಡ ವಸೂಲಾಗಿದೆ. ಇನ್ನೂ ಸೀಟ್  ಬೆಲ್ಟ್ ಹಾಕದೇ ಇರುವ ಪ್ರಕರಣಗಳ ಸಂಖ್ಯೆ 1141 ದಾಖಲಾಗಿದ್ದು, ಇದಕ್ಕೆ 41 ಸಾವಿರ ರೂಪಾಯಿ ದಂಡ ವಸೂಲಿಯಾಗಿದೆ. ನೋ ಪಾರ್ಕಿಂಗ್ ಗೆ 13 ಸಾವಿರ ದಂಡ ವಸೂಲಿಯಾದರೆ, ವಾಹನ ಚಲಾವಣೆ ವೇಳೆ ಮೊಬೈಲ್ ಬಳಕೆಗೆ 23 ಸಾವಿರ ರೂಪಾಯಿ ದಂಡ ವಸೂಲಿಯಾಗಿದೆ. ಇನ್ಸುರೆನ್ಸ್ ರಹಿತ ವಾಹನ ಚಾಲನೆಗೆ 26 ಸಾವಿರ, ಡ್ರಂಕ್ ಆಂಡ್ ಡ್ರೈವ್ ಗೆ 1 ಲಕ್ಷ 80 ಸಾವಿರ ದಂಡ ಸಂಗ್ರಹವಾಗಿದೆ. ಇದು ಕೇವಲ ಒಂದೇದಿನದಲ್ಲಿ ಸಂಗ್ರಹವಾದ ಹಣ. ಇದರ ಸಂಗ್ರಹ ದಿನದಿಂದ ದಿನಕ್ಕೆ ಇನ್ನೂ ಹೆಚ್ಚಾಗಲಿದೆ.

ಇಷ್ಟೇಲ್ಲಾ ದಂಡ ವಿಧಿಸುವಂತಹ ಸರ್ಕಾರ ಸಂಪೂರ್ಣವಾಗಿ ರಸ್ತೆಗಳನ್ನ ಸರಿಪಡಿಸುವಂತಹ ಗೋಜಿಗೆ ಮಾತ್ರ ಕೈ ಹಾಕಿಲ್ಲ. ನಗರದಲ್ಲಿ ಪಾತಳಕ್ಕೆ ಇಳಿದಂತೆ ಭಾಸವಾಗುವ ಗುಂಡಿಗಳು, ಚರಂಡಿಗಳು, ಹಳ್ಳ, ಅಂಕು-ಡೊಂಕುಗಳು ಬಾಯಿ ಬಿಟ್ಟುಕೊಂಡು ಯಮನಂತೆ ಕಾಯುದು ಮಾತ್ರ ಸರ್ಕಾರದ ಕಣ್ಣಿಗೆ ಬೀಳುತ್ತಲೇ ಇಲ್ಲ. ಅದೆಷ್ಟೋ ಜನ ವಾಹನ ಸವಾರರು ರಸ್ತೆ ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡ ಉದಾಹರಣೆಗಳು ನಮ್ಮ ಕಣ್ಣಿಗೆ ಈಗಲೂ ಕಟ್ಟಿದಂತಿವೆ.

ಹೀಗಿರುವಾಗ ಸಂಚಾರಿ ನಿಯಮದಂತೆ ರಸ್ತೆ ಸರಿಪಡಿಸುವಂತಹ ಕಾರ್ಯವನ್ನು ಅಷ್ಟೇ ತ್ವರಿತವಾಗಿ ಮಾಡಿ ಆನಂತರ ಹೊಸ ಹೊಸ ಸಂಚಾರ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವುದರಲ್ಲಿ ಅರ್ಥವಿದೆ ಅಲ್ವಾ..? ಹಾಗಂತ ಸಂಚಾರಿ ನಿಯಮವನ್ನ ಪಾಲಿಸಬೇಡಿ ಎಂದು ನಾವು ಹೇಳುತ್ತಿಲ್ಲ. ವಾಹನ ಸವಾರರು ಸಂಚಾರಿ ನಿಯಮ ಪಾಲಿಸಲು ಹೇಳುವ ಸರ್ಕಾರ , ರಸ್ತೆ ಕಾಮಗಾರಿ ವಿಚಾರದಲ್ಲೂ ಅಷ್ಟೇ ಫಾಸ್ಟ್ ಆಗ್ಬೇಕಾಗಿದೆ.

ಸಂಚಾರಿ ನಿಯಮವನ್ನು ಪಾಲಿಸುವುದು ಎಷ್ಟು ಕಡ್ಡಾಯವೋ ರಸ್ತೆ ಸರಿಪಡಿಸುವುದು ಕೂಡ ಅಷ್ಟೇ ಕಡ್ಡಾಯವಾಗಬೇಕು ಅಲ್ವಾ.. ಅದನ್ನ ಬಿಟ್ಟು ಸಂಚಾರಿ ನಿಯಮ ಪಾಲಿಸದೇ ಇದ್ದಲ್ಲಿ ದಂಡ ವಸೂಲಿ ಮಾಡದರೆ ಅದು ಎಷ್ಟರ ಮಟ್ಟಿಗೆ ನ್ಯಾಯ ಅನ್ನೋದು ಪ್ರಶ್ನೆ..

ರೋಡ್ ಟ್ಯಾಕ್ಸ್, ಇನ್ ಕಂ ಟ್ಯಾಕ್ಸ್ ಪಾವತಿಸೋದಲ್ಲದೇ ಸಂಚಾರಿ ನಿಯಮ ಕೂಡ ಪಾಲನೆ ಮಾಡ್ತಾರೆ ಸವಾರರು. ಇದರಿಂದ ಸರ್ಕಾರಕ್ಕೆ ಆದಾಯ ಇದ್ದರೂ ರಸ್ತೆ ಕಾಮಗಾರಿ ವಿಚಾರದಲ್ಲಿ ಮಾತ್ರ ಸರ್ಕಾರ ಅಸಡ್ಡೆ ತೋರಿಸುತ್ತೇ ಅನ್ನೋದಕ್ಕೆ ರಸ್ತೆ ಮೇಲೆ ಇರುವ ಗುಂಡಿ, ಹಳ್ಳಗಳೇ ಸಾಕ್ಷಿ.

ಹೀಗಾಗಿ ಹೊಸ ಹೊಸ ಸಂಚಾರಿ ನಿಯಮಗಳು ಜಾರಿಗೆ ತರುವುದರ ಜೊತೆಜೊತೆಗೆ ರಸ್ತೆ ದುರಸ್ಥಿ ಕಾರ್ಯಗಳು, ರಸ್ತೆ ಅಗಲಿಕರಣ ಕೂಡ ತುರ್ತಾಗಿ ಆಗಬೇಕಿದೆ.

ಯಾವುದಕ್ಕೂ ನೀವು ದಾಖಲಾತಿಗಳಿಲ್ಲದೇ ಹೋದರೆ ಎಷ್ಟು ದಂಡ ವಿಧಿಸಬೇಕಾಗುತ್ತದೆ ಅನ್ನೋದರ ಬಗ್ಗೆ ಕೊಂಚ ಗಮನ ಹರಿಸಿ. ಆದಷ್ಟು ದಾಖಲಾತಿಗಳನ್ನಿಟ್ಟುಕೊಂಡು ಸಂಚಾರ ನಿಯಮವನ್ನು ಪಾಲಿಸಿದರೆ ಒಳಿತು.

Categories
Breaking News National

ಇದು ಮಣ್ಣಿನ ಗಣೇಶ ಅಲ್ಲ, ಪಿಒಪಿ ಗಣೇಶನೂ ಅಲ್ಲ, ತಿನ್ನುವ ಟೇಸ್ಟಿ ಟೇಸ್ಟಿ ಗಣೇಶ….

ಇಕೋ ಫ್ರಂಡ್ಲಿ ಗಣೇಶ ತಯಾರಿಸಬೇಕು, ಅದನ್ನೇ ಪೂಜೆ ಮಾಡಬೇಕು ಇದರಿಂದ ಪರಿಸರಕ್ಕೆ ಕಡಿಮೆ ಪ್ರಮಾಣದ ಹಾನಿಯುಂಟಾಗುತ್ತದೆ. ಆದರೆ ಕಡಿಮೆ ಪ್ರಮಾಣದ  ಹಾನಿ ಕೂಡ ಪರಿಸರಕ್ಕೆ ಆಗಬಾರದು. ಅಂಥಹ ಗಣೇಶ ತಯಾರಿ ಮಾಡಬೇಕು ಅಂದ್ರೆ ಹೇಗೆ..?

ಅದಕ್ಕೆ ರೆಸ್ಟೋರೆಂಟ್ ಮಾಲೀಕರೊಬ್ಬರು ಒಂದು ಪ್ಲಾನ್ ಮಾಡಿ ಗಣೇಶ ತಯಾರಿಸಿದ್ದಾರೆ. ಅದು ಯಾವುದರಿಂದ ಗೊತ್ತಾ..? ಚಾಕಲೇಟ್ ನಿಂದ..

ಹೌದು..  ಬರೋಬ್ಬರಿ 100 ಕೆಜಿ ಬೆಲ್ಜಿಯನ್ ಚಾಕ್ಲೇಟ್ ನಿಂದ ತಯಾರಿಸಿದ ಗಣೇಶ ಮೂರ್ತಿ ಇದು…! ರೆಸ್ಟೋರೆಂಟ್ ಮಾಲೀಕ ಹಾಗೂ ಚಾಕ್ಲೇಟ್ ತಯಾರಕರಾದ ಹರ್ಜಿಂದರ್ ಸಿಂಗ್ ಕುಕ್ರೇಜಾ ಅವರು ಟ್ವಿಟರ್ ನಲ್ಲಿ ಈ ಚಾಕ್ಲೇಟ್ ಗಣೇಶ ಮೂರ್ತಿಯ ಫೋಟೋವನ್ನು ಶೇರ್ ಮಾಡಿದ್ದು, ನೆಟ್ಟಿಗರಿಂದ ಸಾಕಷ್ಟು ಮೆಚ್ಚುಗೆ ಪಡೆದಿದೆ.

ಈ ವಿಶೇಷ ಚಾಕ್ಲೇಟ್ ಅನ್ನು ತಯಾರಿಸಲು 20 ಚೆಫ್ ಗಳು ಸತತ 10 ದಿನಗಳನ್ನು ತೆಗೆದುಕೊಂಡಿದ್ದಾರೆ. ಇದಕ್ಕಾಗಿ 100 ಕೆಜಿಯಷ್ಟು ಬೆಲ್ಜಿಯನ್ ಚಾಕ್ಲೇಟ್ ಅನ್ನು ಬಳಸಲಾಗಿದೆ ಎಂಬ ಮಾಹಿತಿಯನ್ನು ಸಿಂಗ್ ನೀಡಿದ್ದಾರೆ.

ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಉದ್ದೇಶದಿಂದ ಈ ಚಾಕ್ಲೇಟ್ ಗಣಪನನ್ನು ತಯಾರಿಸಿದ್ದೇವೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಸಾಕಷ್ಟು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಿಂಗ್ ಅವರ ಈ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Categories
Breaking News National Political State

‘ಇವತ್ತು ನಾನು ನನ್ನ ತಂದೆ ಹಾಗೂ ಹಿರಿಯರಿಗೆ ಪೂಜೆ ಮಾಡಬೇಕಿತ್ತು’ ಡಿ.ಕೆ ಶಿವಕುಮಾರ್ ಕಣ್ಣೀರು

ಹಬ್ಬದ ದಿನವೇ ಮಾಜಿ ಸಚಿವ ಡಿಕೆ ಶಿವಕುಮಾರ್ ಕಣ್ಣೀರು ಹಾಕಿದ್ದಾರೆ. ಹೌದು.. ಮೂರನೇ ದಿನವಾದ ಇಂದು ಜಾರಿ ನಿರ್ದೇಶನಾಲಯ(ಇಡಿ) ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವ ಮುನ್ನ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು ಕಣ್ಣೀರು ಹಾಕಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಕಣ್ಣಲ್ಲಿ ನೀರು ಹಾಕುತ್ತಿರೋದು ನಮ್ಮ ತಂದೆಗೆ ಪೂಜೆ ಮಾಡುವ ಅವಕಾಶವನ್ನು ನನ್ನ ಬಿಜೆಪಿ ಸ್ನೇಹಿತರು ಅಧಿಕಾರದ ಮುಖಾಂತರ ಕೊಟ್ಟಿಲ್ಲ. ನನಗೆ ದುಃಖ ಯಾಕೆ ಆಗುತ್ತಿದೆ ಎಂದರೆ ಇವತ್ತು ತಂದೆ ಹಾಗೂ ಹಿರಿಯರಿಗೆ ನಾನು, ನನ್ನ ತಮ್ಮ ಪೂಜೆ ಮಾಡಬೇಕಿತ್ತು. ಆದರೆ ಅವರಿಗೆ ಎಡೆ ಇಡಲು ಕೂಡ ಇವರು ನನಗೆ ಕೊಟ್ಟಿಲ್ಲ. ಪರವಾಗಿಲ್ಲ, ಇಡಿ ಕಚೇರಿಯಲ್ಲೇ ಎಲ್ಲರನ್ನೂ ಸ್ಮರಿಸಿಕೊಳ್ಳುತ್ತೇನೆ.

ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪಾರ್ಥಿಸುತ್ತೇನೆ ಎಂದು ಡಿಕೆಶಿ ಕಣ್ಣೀರಿಟ್ಟಿದ್ದಾರೆ.ಉಪ್ಪು ತಿಂದವರು ನೀರು ಕುಡಿಬೇಕು ಎಂದು ನನ್ನ ಸ್ನೇಹಿತರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೋಸ್ಕರ, ನಮ್ಮ ನಾಯಕರಿಗೋಸ್ಕರ, ನನ್ನನ್ನು ನಂಬಿದ ಜನಕ್ಕೋಸ್ಕರ ಹೋರಾಟ ಮಾಡಿಕೊಂಡು ನಾನು ಬಂದಿದ್ದೇನೆ. ಇಂದು ನಮ್ಮ ಅನೇಕ ಸ್ನೇಹಿತರು, ಕಾರ್ಯಕರ್ತರು, ನಾಯಕರು ಪಕ್ಷ ಬೆಳೆಸಿರುವುದರಿಂದ ಇಲ್ಲಿಯವರೆಗೆ ಬಂದಿದ್ದೇನೆ. ಇದನ್ನೆಲ್ಲಾ ಎದುರಿಸುವಂತಹ ಶಕ್ತಿ ದೇವರು ನನಗೆ ಕೊಟ್ಟಿದ್ದಾನೆ. ನಾನು ಯಾರಿಗೂ ಮೋಸ ಮಾಡಿಲ್ಲ, ಕಳ್ಳತನ ಮಾಡಿಲ್ಲ, ಜಮೀನನ್ನು ಒತ್ತುವರಿ ಮಾಡಿಕೊಂಡಿಲ್ಲ, ಲಂಚದ ಆರೋಪವಿಲ್ಲ, ಅಧಿಕಾರ, ಸರ್ಕಾರದ ಹಣ ದುರುಪಯೋಗ ಮಾಡಿಕೊಂಡಿಲ್ಲ. ನೇರವಾಗಿ ನುಡಿದಂತೆ ನಡೆದಿದ್ದೇನೆ.

 

Categories
Breaking News District Political State

ಸಿದ್ದರಾಮಯ್ಯಗೆ ನಾನು ಟಾಂಗ್ ಕೊಟ್ಟಿಲ್ಲ: ಡಿಕೆ ಶಿವಕುಮಾರ್ ಸ್ಪಷ್ಟನೆ

ಪಕ್ಷದ ಹುದ್ದೆ ವಿಚಾರವಾಗಿ ನಾನು ಕೊಟ್ಟ ಹೇಳಿಕೆಯನ್ನು ತಿರುಚಲಾಗಿದೆ. ಸಿದ್ದರಾಮಯ್ಯನವರ ಕೈಕೆಳಗೆ ಕೆಲಸ ಮಾಡಿದ್ದು ಅವರಿಗೆ ಟಾಂಗ್ ಕೊಡುವ ಅಗತ್ಯ ನನಗೆ ಇಲ್ಲ ಎಂದು ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಬುಧವಾರ ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರ ಜತೆ ಮಾತನಾಡಿದ ಅವರು ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದು ಹೀಗೆ…

‘ಮೊನ್ನೆ ನಾನು ಪಕ್ಷದ ಹುದ್ದೆ ವಿಚಾರವಾಗಿ ಕೊಟ್ಟ ಹೇಳಿಕೆಯನ್ನು ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿರುವುದಾಗಿ ತಿರುಚಿ ಗೊಂದಲ ಮೂಡಿಸಲಾಗಿದೆ. ನಮ್ಮ ಪಕ್ಷದ ನಾಯಕರಿಗೆ ಟಾಂಗ್ ಕೊಡುವ ಅಗತ್ಯ ನನಗಿಲ್ಲ. ನನಗೆ ಅಷ್ಟೂ ಸಾಮಾನ್ಯ ಪ್ರಜ್ಞೆ ಇಲ್ಲವೇ? ನಾನು ಒಬ್ಬ ನಾಯಕರ ಕೈಕೆಳಗೆ ಕೆಲಸ ಮಾಡಿದರೆ ಅವರನ್ನು ಗೌರವಿಸುತ್ತೇನೆ. ಬಂಗಾರಪ್ಪ, ಎಸ್.ಎಂ ಕೃಷ್ಣ, ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಯಾರೇ ಆದರೂ ಅವರ ಬಗ್ಗೆ ನನಗೆ ಉಪಕಾರ ಸ್ಮರಣೆ ಇದೆ. ನನಗೆ ಯಾರು ಸಹಾಯ ಮಾಡಿರುತ್ತಾರೋ ಅವರಿಗೆ ದ್ರೋಹ ಮಾಡುವುದು ಟಾಂಗ್ ಕೊಡುವುದು ಮಾಡುವುದಿಲ್ಲ.

ನನ್ನ ರಾಜಕೀಯ ಏನೇ ಇದ್ದರು ವಿರೋಧ ಪಕ್ಷದವರ ಮೇಲೆ ಮಾಡ್ತೀನಿ. ನಮ್ಮ ಪಕ್ಷದ ನಾಯಕರ ಕೆಳಗೆ ಕೆಲಸ ಮಾಡಿ ಅವರಿಗೆ ಟಾಂಗ್ ಕೊಡುವ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯನವರಿಗೆ ಕಾರು, ಮನೆ, ರಾಜಕೀಯ ಇಲ್ಲವೇ? 10 ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿ, ಮುಖ್ಯಮಂತ್ರಿಗಳಾಗಿ, ಶಾಸಕಾಂಗ ಪಕ್ಷದ ನಾಯಕರಾಗಿ ನಮ್ಮ ಜತೆ ಕೆಲಸ ಮಾಡಿದ್ದಾರೆ. ಅವರಿಗೆ ನಾನೇಕೆ ಟಾಂಗ್ ನೀಡಲಿ? ವಿರೋಧ ಪಕ್ಷದಲ್ಲಿ ನಾನು ಯಾರಿಗೆ ಟಾಂಗ್ ಕೊಡಬೇಕೋ ಅವರಿಗೆ ಕೊಟ್ಟಿದ್ದೇನೆ. ಕುಮಾರಸ್ವಾಮಿ ಮತ್ತು ದೇವೇಗೌಡರ ವಿರುದ್ಧ ನಮಗೆ ಭಿನ್ನಾಭಿಪ್ರಾಯ ಇತ್ತು. ಆಗ ಹೋರಾಟ ಮಾಡಿದ್ದೇವೆ. ಈಗ ಅವರ ಜತೆ ಕೆಲಸ ಮಾಡಿದ ಮೇಲೆ ಅವರ ಬಗ್ಗೆ ಮಾತನಾಡಲು ತಲೆ ಕೆಟ್ಟಿದೆಯಾ? ನಮ್ಮ ನಡುವೆ ಏನೇ ರಾಜಕೀಯ ವ್ಯತ್ಯಾಸ ಬಂದರೂ ನಮ್ಮ ಪಕ್ಷದ ನಾಯಕರ ಬಗ್ಗೆ ನಾನು ಆ ರೀತಿ ಮಾತನಾಡುವುದಿಲ್ಲ.’