‘ಸಿದ್ದರಾಮಯ್ಯಗೆ ಜನರೇ ಉತ್ತರ ಕೊಟ್ಟಿದ್ದಾರೆ’- ಸಿಎಂ ಯಡಿಯೂರಪ್ಪ

ರಾಜ್ಯದ ಜನರು ಬಹಳ ನಿರೀಕ್ಷೆಯಿಂದ ಕಾಯುತ್ತಿದ್ದ ಆರ್ ಆರ್ ನಗರ ಹಾಗೂ ಶಿರಾ ಉಪಚುನಾವಣೆ ಮತ ಎಣಿಕೆ ಪೂರ್ಣಗೊಂಡಿದ್ದು ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ. ಈ ಸಂತಸದ ಕ್ಷಣದಲ್ಲಿ ಮಾಧ್ಯಮದ ಮುಂದೆ ಮಾತನಾಡಿದ ಸಿಎಂ ಯಡಿಯೂರಪ್ಪ ಗೆಲುವಿಗೆ ಕಾರಣರಾದ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ, ಜನರಿಗೆ ಧನ್ಯವಾದ ತಿಳಿಸಿದ್ದಾರೆ.

ಸಿಎಂ ಯಡಿಯೂರಪ್ಪ , ” ಇದು ಜನತೆಗೆ ಸೇರಿದ ವಿಜಯವಾಗಿದೆ. ರಾಜ್ಯದ ಜನರಲ್ಲಿ ಬಿಜೆಪಿ ಪರ ಬೆಂಬಲ ವ್ಯಕ್ತಪಡಿಸಿದ್ದಾರೆ. ಕೊರೊನಾ, ಭೀಕರ ಸಂಕಷ್ಟದಲ್ಲೂ ಕಾರ್ಯನಿರ್ವಹಿಸಿಕೊಂಡು ಹೋಗುತ್ತಿದ್ದೇವೆ. ಇದಕ್ಕೆ ಜನ ಸ್ಪಂದಿಸಿದ್ದಾರೆ ಎನ್ನುವುದಕ್ಕೆ ಜನ ಮತ ಚಲಾಯಿಸಿದ್ದಾರೆ. ನಾನು ಕೊಟ್ಟ ಭರವಸೆಗಳನ್ನು ಆದಷ್ಟು ಬೇಗ ಈಡೇರಿಸುತ್ತೇನೆ ” ಎಂದಿದ್ದಾರೆ.

ಇನ್ನೂ ಬಿಹಾರದಲ್ಲಿ ನಾನು ನೀವು ನಿರೀಕ್ಷೆ ಮಾಡದ ರೀತಿಯಲ್ಲಿ ಬಿಜೆಪಿ ಜಯ ಸಾಧಿಸಿದೆ. ಬಿಹಾರ ದಲ್ಲೂ ಕೂಡ ಜನ ಬಿಜೆಪಿ ಪರ ಮತ ನೀಡಿದ್ದಾರೆ.  ಇದು ಹೆಮ್ಮೆಯ ವಿಚಾರ ಎಂದು ಅಮಿತಾ ಶಾ , ನಳೀನ್ ಕುಮಾರ್ ಕಟೀಲ್, ಪ್ರಧಾನಿ ನರೇಂದ್ರ ಮೋದಿಗೆ ಅಭಿನಂದನೆ ಸಲ್ಲಿಸಿದರು. ಇದು ಬಹಳ ದೊಡ್ಡ ಗೆಲುವಾಗಿದೆ ಎಂದರು

ಈ ಸರ್ಕಾರ ಜನಪರ ಸರ್ಕಾರ. ರೈತರ ಪರ ಸರ್ಕಾರವಾಗಿದೆ. ಕೊಟ್ಟ ಮಾತನ್ನು ಉಳಿಸಿಕೊಳ್ಳವಂತಹ ಸರ್ಕಾರ. ನಾನು ಭರವಸೆಗಳನ್ನು ಈಡೇರಿಸುವಲ್ಲಿ ಕೆಲಸ ಮಾಡುತ್ತೇನೆ. ಇನ್ನೂ ಸಿದ್ದರಾಮಯ್ಯ ಅವರಿಗೆ ನಾನು ಉತ್ತರ ಕೊಡುವುದಕ್ಕಿಂತ ಜನರೇ ಉತ್ತರ ಕೊಟ್ಟಿದ್ದಾರೆ. ಹೀಗಾಗಿ ಅವರ ಬಗ್ಗೆ ಟೀಕೆ ಟಿಪ್ಪಣಿ ಮಾಡುವುದಿಲ್ಲ. ಇನ್ನು ಮುಂದೆ ಮಾತನಾಡುವ ಮುನ್ನ ಅವರು ಯೋಚನೆ ಮಾಡಬೇಕು ಎಂದಿದ್ದಾರೆ.

Spread the love

Leave a Reply

Your email address will not be published. Required fields are marked *