ರಾಯಲ್ ಎನ್‌ಫೀಲ್ಡ್ ಗೆಲ್ಲುವ ಅವಕಾಶ: ಒಂದು ಗಂಟೆಯಲ್ಲಿ 4 ಕೆಜಿ ‘ಬುಲೆಟ್ ಥಾಲಿ’ ಮುಗಿಸಬೇಕು!

ಆಹಾರವನ್ನು ಇಷ್ಟಪಡುವವರಿಗೆ ದೊಡ್ಡ ಕೊಡುಗೆಯನ್ನು ಪಡೆಯುವ ಅವಕಾಶ ಪುಣೆಯ ಜನರ ಮನ ಗೆದ್ದಿದೆ. ಈ ಅವಕಾಶ ಪುಣೆಯ ಹೊರವಲಯದಲ್ಲಿರುವ ವಾಡ್ಗಾಂವ್ ಮಾವಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಶಿವರಾಜ್ ಹೋಟೆಲ್ ನೀಡುತ್ತಿದೆ. ಈ ಕೊಡುಗೆಯ ಲಾಭವನ್ನು ಪಡೆದರೆ ರಾಯಲ್ ಎನ್‌ಫೀಲ್ಡ್ ಅನ್ನು ಗೆಲ್ಲಬಹುದು. ಅಷ್ಟಕ್ಕೂ ಈ ರಾಯಲ್ ಎನ್‌ಫೀಲ್ಡ್ ಪಡೆಯಲು ಏನು ಮಾಡಬೇಕೆಂದು ತಿಳಿಯಲು ಬಯಸುತ್ತೀರಾ ..?

ಸಿಂಪಲ್ ಈ ಹೋಟೆಲ್‌ನಲ್ಲಿ ಸಿಗುವ ಬುಲೆಟ್ ಪ್ಲೇಟ್ ಅನ್ನು ಕೇವಲ ಒಂದು ಗಂಟೆಯಲ್ಲಿ ಖಾಲಿ ಮಾಡಿದರೆ ರಾಯಲ್ ಎನ್‌ಫೀಲ್ಡ್ ನಿಮ್ಮದಾಗುತ್ತದೆ. ಹೌದು ಈ ಹೋಟೆಲ್‌ಗೆ ಗ್ರಾಹಕರನ್ನು ಆಕರ್ಷಿಸಲು ‘ವಿನ್ ಬುಲೆಟ್ ಬೈಕ್’ ಸ್ಪರ್ಧೆಯು ಪ್ರಾರಂಭವಾಗಿದೆ.

ಸ್ಪರ್ಧೆಯಲ್ಲಿ ಯಾರು ಭಾಗವಹಿಸುತ್ತಾರೋ ಅವರು 60 ನಿಮಿಷಗಳಲ್ಲಿ ನಾನ್-ವೆಜ್ ಪ್ಲೇಟ್ ಅನ್ನು ಮಾತ್ರ ಮುಗಿಸಬೇಕಾಗುತ್ತದೆ. ಈ ತಟ್ಟೆಯಲ್ಲಿ 4 ಕಿಲೋಗ್ರಾಂಗಳಷ್ಟು ಮಟನ್ ಮತ್ತು ಮೀನುಗಳೊಂದಿಗೆ ಸುಮಾರು 12 ಭಕ್ಷ್ಯಗಳು ಇರುತ್ತವೆ. ಈ 12 ಭಕ್ಷ್ಯಗಳಲ್ಲಿ ಫ್ರೈಡ್ ಸುರ್ಮೈ, ಪೊಮ್‌ಫ್ರೆಟ್ ಫ್ರೈಡ್ ಫಿಶ್, ಚಿಕನ್ ತಂದೂರಿ, ಡ್ರೈ ಮಟನ್, ಗ್ರೇ ಮಟನ್, ಚಿಕನ್ ಮಸಾಲ, ಮತ್ತು ಕೊಲಂಬಿ (ಸೀಗಡಿ) ಬಿರಿಯಾನಿ ಸೇರಿವೆ.   ಈ ಸಿಂಗಲ್ ಥಾಲಿ ಬೆಲೆ 2,500 ರೂ. ಆದಾಗ್ಯೂ, ಶಿವರಾಜ್ ಹೋಟೆಲ್ ಮಾಲೀಕ ಅತುಲ್ ವೇಟಾಕ್ಸ್ ಅವರ ಈ ಯೋಜನೆಗೆ ಮಾರು ಹೋದ ಪುಣೆಯ ಜನರು ಬುಲೆಟ್ ಥಾಲಿಗೆ ಫುಲ್ ಫಿದಾ ಆಗಿದ್ದಾರೆ.ಇದರ ಜೊತೆಗೆ ವೆಜ್ ಬುಲೆಟ್ ಕೂಡ ಇಲ್ಲ ಲಭ್ಯವಿರುತ್ತದೆ.

ನಾನಾ ಭಕ್ಷ್ಯಗಳನ್ನು ಹೊಂದಿರುವ ಈ ಬುಲೆಟ್ ಥಾಲಿಯಲ್ಲಿ ಎನಿಲ್ಲಾ ಅಂದರೂ 10 ಜನ ಉಟ ಮಾಡಬಹುದು. ಇದನ್ನು 4 ಡಜನ್ಗಿಂತ ಹೆಚ್ಚು ಜನರು ತಯಾರಿಸುತ್ತಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.