ಬ್ರಿಟನ್ ಕೊರೊನಾ ಸೋಂಕಿತರಿದ್ದ ಅಪಾರ್ಟ್ಮೆಂಟ್ ಸೀಲ್ಡೌನ್ : ಆತಂಕದಲ್ಲಿ ಅಕ್ಕಪಕ್ಕದ ನಿವಾಸಿಗಳು!

ರೂಪಾಂತರಿ ಕೊರೊನಾ ರಾಜ್ಯಕ್ಕೆ ಎಂಟ್ರಿ ಕೊಟ್ಟು ಮತ್ತೆ ಜನರ ನಿದ್ದೆಗೆಡಿಸಿದೆ. ಹಳೆ ಕೊರೊನಾದಿಂದ ಚೇತರಿಸಿಕೊಳ್ಳುವ ಹೊತ್ತಿಗೆ ಬ್ರಿಟನ್ ಭೂತ ರಾಜ್ಯಕ್ಕೆ ಕಾಲಿಟ್ಟಿದೆ. ಬ್ರಿಟನ್ ನಿಂದ ಭಾರತಕ್ಕೆ ಬಂದ ಸಾವಿರಾರು ಪ್ರಯಾಣಿಕರ ಪೈಕಿ 6 ಜನರಿಗೆ ಹೊಸ ಪ್ರಬೇಧದ ಸೋಂಕು ದೃಢಪಟ್ಟಿದೆ. ಇದರಲ್ಲಿ ಮೂರು ಜನ ಬೆಂಗಳೂರಿಗೆ ಆಗಮಿಸಿದ್ದಾರೆ. ಮೂರಲ್ಲಿ ಇಬ್ಬರು ವಾಸವಿದ್ದ ಅಪಾರ್ಟ್ ಮೆಂಟ್ ಸದ್ಯ ಸೀಲ್ ಡೌನ್ ಮಾಡಲಾಗಿದೆ.

ಹೌದು… ವಸಂತಪುರದ ಇಬ್ಬರು ಸೋಂಕಿತರಲ್ಲಿ ಬ್ರಿಟನ್ ಕೊರೊನಾ ಕಾಣಿಸಿಕೊಂಡಿದ್ದು ಅಪಾರ್ಟ್ ಮೆಂಟ್ ಜನರಲ್ಲಿ ಭೀತಿ ಸೃಷ್ಟಿಸಿದ್ದು 14 ದಿನಗಳ ಕಾಲ ಸೀಲ್ಡ್ ಡೌನ್ ಮಾಡಲಾಗಿದೆ.

ಅಪಾರ್ಟ್ ಮೆಂಟ್ ನಲ್ಲಿ ಒಟ್ಟು 39 ನಿವಾಸಿಗಳು ಇದ್ದು ಮೂವರಿಗೆ ಪಾಸಿಟಿವ್ ಬಂದಿದೆ. ಈ ಪೈಕಿ ಇಬ್ಬರಲ್ಲಿ ಬ್ರಿಟನ್ ಕೊರೊನಾ ಕಾಣಿಸಿಕೊಂಡಿದೆ. ಅಪಾರ್ಟ್ ಮೆಂಟ್ ನ ುಳಿದ ನಿಚಾಸಿಗಳು ಪರೀಕ್ಷೆಗೆ ಒಳಪಡಬೇಕಾದ ಕಾರಣ ಸೀಲ್ ಡೌನ್ ಮಾಡುವುದು ಅನಿವಾರ್ಯವಾಗಿದೆ.

ಅಪಾರ್ಟ್ ಮೆಂಟ್ ಸುತ್ತಲು ಬಿಬಿಎಂಪಿ ಈಗಾಗಲೇ ರಸ್ತೆಯನ್ನು ಸ್ಯಾನಿಟೈಸ್ ಮಾಡಿದೆ. ಪಟ್ಟಿ ಕಟ್ಟಿ ಸಂಚಾರವನ್ನು ಬಂದ್ ಮಾಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights