FACT CHECK | ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಅಂಬೇಡ್ಕರ್ ಚಿತ್ರ ಪ್ರದರ್ಶಿಸಲಾಗಿದೆಯೇ?
ಏಪ್ರಿಲ್ 14 ರಂದು ಸಂವಿಧಾನ ಶಿಲ್ಪಿ, ಮಹಾ ಮಾನವತಾವಾದಿ, ಭಾರತ ರತ್ನ ಡಾ ಬಿ.ಆರ್.ಅಂಬೇಡ್ಕರ್ ರವರ 134ನೇ ಜನ್ಮದಿನಾಚರಣೆಯನ್ನು ಆಚರಿಸಲಾಗಿದೆ. ಅಂಬೇಡ್ಕರ್ ಜಯಂತಿಯಂದು ವಿವಿಧ ಸಂಘ ಸಂಸ್ಥೆಗಳು ಅವರ ಫೋಟೊ ಅಥವಾ ಪ್ರತಿಮೆಗಳನ್ನಿಟ್ಟು ಮೆರವಣಿಗೆ ಮತ್ತು ರ್ಯಾಲಿಯನ್ನು ಸಂಘಟಿಸಿ ಸಮಾನತೆಯ ಹರಿಕಾರನಿಗೆ ಗೌರವ ಸಮರ್ಪಿಸುತ್ತವೆ. ಈ ವರ್ಷ ಕೇಂದ್ರ ಸರಕಾರ ಅಂಬೇಡ್ಕರ್ ಜಯಂತಿಗೆ ಸಾರ್ವತ್ರಿಕ ರಜೆಯನ್ನೂ ಘೋಷಿಸಿತ್ತು. ಇದೇ ಸಂದರ್ಭದಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡ ಬುರ್ಜ್ ಖಲೀಫಾದಲ್ಲಿ ಅಂಬೇಡ್ಕರ್ ಜಯಂತಿ ಆಚರಿಸಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋವನ್ನು ಪ್ರಸಾರ ಮಾಡಲಾಗುತ್ತಿದೆ.
दुबई में बुर्ज खलीफा पर बाबा साहेब डॉ. भीम राव अम्बेडकर जी की जयंती पर भीम जी की फोटो लगाई गई
#जय_भीम #आशीष_कालयान pic.twitter.com/xFzgDX7TyA— Ashish kaliyan (@KaliyanShubham) April 16, 2024
ಆಶಿಷ್ ಕಲಿಯನ್ ಎಂಬ ಎಕ್ಸ್ ಬಳಕೆದಾರರು ಬುರ್ಜ್ ಖಲಿಫಾದ ಮೇಲೆ ಲೇಸರ್ ಮೂಲಕ ಅಂಬೇಡ್ಕರ್ ಚಿತ್ರ ಪ್ರದರ್ಶಿಸಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದರ ಜೊತೆಗೆ ‘ದುಬೈನಲ್ಲಿ ಬುರ್ಜ್ ಖಲೀಫಾ ಮೇಲೆ ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಜೀ ಅವರ ಜನ್ಮದಿನದಂದು ಭೀಮ್ ಜೀ ಅವರ ಫೋಟೋ ಹಾಕಲಾಗಿದೆ,’ ಎಂದು ಬರೆದುಕೊಂಡಿದ್ದಾರೆ.
राम पुष्यमित्र शुंग जै श्री राम का नाम पूरे भारत में ही कुछ को छोड़कर सभी लोग लेना नही चाहते या नही लेते वही पूरी दुनिया में सभी धर्मों के लोग बाबा साहेब को अपना आदर्श मानते हैं।#बुर्ज_खलीफा_पर_बाबा_साहेब_अम्बेडकर
जय भीम जय भारत।
pic.twitter.com/RQuH15cnVT— Kanhaiya Lal Prasad (@KanhaiyaLa56201) April 16, 2025
ಇನ್ನೋರ್ವ ಬಳಕೆದಾರರಾದ ಕನ್ಹಯ್ಯ ಲಾಲ್ ಪ್ರಸಾದ್ ಅವರು, “ರಾಮ್ ಪುಷ್ಯಮಿತ್ರ ಶುಂಗ್ ಜೈ ಶ್ರೀ ರಾಮ್ ಅವರ ಹೆಸರನ್ನು ಇಡೀ ಭಾರತದಲ್ಲಿ ಕೆಲವರನ್ನು ಹೊರತುಪಡಿಸಿ ಯಾರೂ ತೆಗೆದುಕೊಳ್ಳಲು ಬಯಸುವುದಿಲ್ಲ. ಆದರೆ ಪ್ರಪಂಚದ ಎಲ್ಲಾ ಧರ್ಮದ ಜನರು ಬಾಬಾ ಸಾಹೇಬರನ್ನು ತಮ್ಮ ಆದರ್ಶವೆಂದು ಪರಿಗಣಿಸುತ್ತಾರೆ. ಬುರ್ಜ್ ಖಲೀಫಾ ಮೇಲೆ ಬಾಬಾ ಸಾಹೇಬ್ ಅಂಬೇಡ್ಕರ್, ಜೈ ಭೀಮ್, ಜೈ ಭಾರತ್” ಎಂದು ಬರೆದಿದ್ದಾರೆ.
ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು ನಿಜವಾಗಿಯೋ ಅಂಬೇಡ್ಕರ್ ಜಯಂತಿಯಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯಂದು ದುಬೈನಲ್ಲಿ ಬುರ್ಜ್ ಖಲೀಫಾ ಮೇಲೆ ಬಾಬಾ ಸಾಹೇಬ್ ಡಾ. ಭೀಮರಾವ್ ಅಂಬೇಡ್ಕರ್ ಅವರ ಚಿತ್ರವನ್ನು ಪ್ರದರ್ಶೀಸಲಾಗಿದೆಯೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಲಲಾಗುತ್ತಿರುವ ಪೋಸ್ಟ್ಗಳಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಕೀ ವರ್ಡ್ಗಳ ಸಹಾಯದಿಂದ ಗೂಗಲ್ ಸರ್ಚ್ ಮಾಡಿದಾಗ, ಹಲವು ಎಕ್ಸ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಪೋಸ್ಟ್ಗಳು ಕಾಣಿಸಿಕೊಂಡವು. ಆದರೆ ಬುರ್ಜ್ ಖಲೀಫಾ ಮೇಲೆ ಡಾ. ಭೀಮರಾವ್ ಅಂಬೇಡ್ಕರ್ ಅವರ ಚಿತ್ರ ಹಾಕಿದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.
ಮತ್ತಷ್ಟು ಮಾಹಿತಿಗಾಗಿ ಬುರ್ಜ್ ಖಲೀಫಾದ ಅಧಿಕೃತ ಸೋಶಿಯಲ್ ಮೀಡಿಯಾ ಅಕೌಂಟ್ಗಳನ್ನು ಚೆಕ್ ಮಾಡಿದಾಗ, ಅಲ್ಲಿಯೂ ಈ ವಿಡಿಯೋಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನುಲಭ್ಯವಾಗಿಲ್ಲ. ಬುರ್ಜ್ ಖಲೀಫಾದ ಇನ್ಸ್ಟಾಗ್ರಾಮ್ ಖಾತೆಯಲ್ಲಿಯೂ ಕೊನೆಯದಾಗಿ ಪ್ರಕಟವಾದ ಪೋಸ್ಟ್ನಲ್ಲಿ “ವರ್ಲ್ಡ್ ಆಸ್ಟಿಮ್ ಡೇ” ಎಂದು ಬರೆಯಲಾಗಿತ್ತು. ಅಂದರೆ, ವಿಶ್ವ ಆಟಿಸಂ ದಿನದ ಬಗ್ಗೆ ಮಾಹಿತಿ ಇತ್ತು.
![]()
ಇದನ್ನು ಮತ್ತಷ್ಟು ಖಚಿತಪಡಿಸಿಕೊಳ್ಳಲು ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿ ತಯಾರಿಸಿದ ವಿಡಿಯೋ, ಫೋಟೋಗಳನ್ನು ಪತ್ತೆ ಹಚ್ಚವು ಸೈಟ್ ಇಂಜಿನ್ ಎಂಬ ಟೂಲ್ನಲ್ಲಿ ಪರಿಶೀಲಿಸಲಾಯಿತು. ಆಗ ಇದು ಶೇ. 95ರಷ್ಟು ನಕಲಿ ಎಂಬ ಫಲಿತಾಂಶವನ್ನು ಅದು ನೀಡಿದೆ. ಬುರ್ಜ್ ಖಲಿಫಾದ ಮೇಲಿನ ಅಂಬೇಡ್ಕರ್ ಚಿತ್ರದ ಬಗ್ಗೆ ಸೈಟ್ ಇಂಜಿನ್ ನೀಡಿರುವ ಫಲಿತಾಂಶದ ಪ್ರಕರ ಇದು AI ರಚಿತ ವಿಡಿಯೋ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಬುರ್ಜ್ ಖಲೀಫಾ ಮೇಲೆ ಭೀಮರಾವ್ ಅಂಬೇಡ್ಕರ್ ಅವರ ಜಯಂತಿ ಆಚರಿಸಿದ ವಿಡಿಯೋ ನಕಲಿ ಎಂದು ತಿಳಿದುಬಂದಿದೆ. ಬುರ್ಜ್ ಖಲೀಫಾ ಮೇಲೆ ಕಾಣುವ ಭೀಮರಾವ್ ಅಂಬೇಡ್ಕರ್ ಅವರ ಚಿತ್ರವನ್ನು AI ಟೂಲ್ ಬಳಸಿ ಎಡಿಟ್ ಮಾಡಿ ಸೇರಿಸಲಾಗಿದ್ದು, ಇದನ್ನೇ ಹಂಚಿಕೊಳ್ಳಲಾಗುತ್ತಿದೆ ಎಂದು ದೃಢಪಟ್ಟಿದೆ. ಹಾಗಾಘಿ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ 150 ಎಕರೆ ಜಮೀನು ಕಸಿದುಕೊಂಡ್ರಾ ಮುಸ್ಲಿಮರು?

