ಚುನಾವಣೆ ಗೆಲ್ಲಲು BJP 40 ಯೋಧರನ್ನು ಬಲಿ ಕೊಟ್ಟಿದೆ: ಶಿವಸೇನೆ ಆರೋಪ

2019ರ ಲೋಕಸಭಾ ಚುನಾವಣೆಯನ್ನು ಗೆಲ್ಲುವುದಕ್ಕಾಗಿ ಬಿಜೆಪಿ 40 ಯೋಧರನ್ನು ಬಲಿಕೊಟ್ಟಿದೆ ಎಂದು ಶಿವಸೇನೆ ಆರೋಪಿಸಿದೆ.

ರಿಪಬ್ಲಿಕ್‌ ಟಿವಿ ಮುಖ್ಯಸ್ಥ ಅರ್ನಬ್‌ ಗೋಸ್ವಾಮಿ ಮತ್ತು ಬಾರ್ಕ್‌ನ ಮುಖ್ಯ ಕಾರ್ಯನಿರ್ವಾಹಕ ಪಾರ್ಥೋ ದಾಸ್‌ಗುಪ್ತಾ ಅವರ ವಾಟ್ಸಾಪ್‌ ಚಾಟ್‌ ಸೋರಿಕೆಯಾಗಿದ್ದು, ಸಾಕಷ್ಟು ವಿಚಾರಗಳು ಬೆಳಕಿಗೆ ಬಂದಿವೆ. ಅದರಲ್ಲಿ, ಅರ್ನಾಬ್ 23 ಫೆಬ್ರವರಿ 2019 ರಂದು, ದಾಸ್‌ಗುಪ್ತಾ ಅವರಿಗೆ “ಏನಾದರೂ ದೊಡ್ಡದೊಂದು ಸಂಭವಿಸುತ್ತದೆ. ಇದರಿಂದ ದೊಡ್ಡ ಮನುಷ್ಯನಿಗೆ ತುಂಬಾ ಒಳ್ಳೆಯದಾಗುತ್ತದೆ” ಎಂದು ಹೇಳಿದ್ದಾರೆ. “ದಾವೂದ್” ಬಗ್ಗೆ ಏನಾದರೂ ಇದೆಯೇ ಎಂದು ದಾಸ್‌ಗುಪ್ತಾ ಕೇಳಿದಾಗ ಅರ್ನಾಬ್, ಇಲ್ಲ ಸರ್ ಪಾಕಿಸ್ತಾನ ಎಂದು ಹೇಳುತ್ತಾರೆ. ಈ ಸಮಯದಲ್ಲಿ ಪ್ರಮುಖವಾದದ್ದನ್ನು ಮಾಡಲಾಗುವುದು ”. ಇದು “ಮಾಮೂಲಿ ಸರ್ಜಿಕ್‌ ಸ್ಟ್ರೈಕ್ ಥರ ಅಲ್ಲ, ಅದಕ್ಕಿಂತ ದೊಡ್ಡದು. ಇದರಿಂದ  ದೊಡ್ಡದಾಗಿದೆ. ಅಷ್ಟೇ ಅಲ್ಲ, ಕಾಶ್ಮೀರದಲ್ಲಿ ಸಧ್ಯದಲ್ಲೆ ದೊಡ್ಡದೇನೋ ನಡೆಯಲಿದೆ. ಇದರಿಂದ ಜನರು ನಿಜಕ್ಕೂ ಖುಷಿ ಪಡುತ್ತಾರೆ” ಎಂದು ಅರ್ನಾಬ್‌ ಹೇಳಿದ್ದಾರೆ ಎಂದು ಸೋರಿಕೆಯಾಗಿರುವ ಚಾಟ್‌ಗಳಲ್ಲಿ ತಿಳಿದು ಬಂದಿದೆ.

ಈ ಬಗ್ಗೆ ತನ್ನ ಮುಖವಾಣಿ ಸಾಮ್ನಾದಲ್ಲಿ ಪ್ರಶ್ನಿಸಿರುವ ಶಿವಸೇನೆ, “ಹಾಗಾದ್ರೆ ಪುಲ್ವಾಮಾದಲ್ಲಿ ನಮ್ಮ ಸೈನಿಕರ ಹತ್ಯೆ ನಮ್ಮ ದೇಶದ ರಾಜಕೀಯ ಷಡ್ಯಂತ್ರ. ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲು ನಲ್ವತ್ತು ಯೋಧರ ನೆತ್ತರು ಹರಿಸಿದರು. ಈ ಆರೋಪಗಳು ಅಂದು ಕೇಳಿ ಬಂದಿದ್ದವು. ಆದರೆ ಅರ್ನಬ್‌ ಗೊಸ್ವಾಮಿಯ ವಾಟ್ಸಾಪ್‌ ಸಂದೇಶಗಳು ಆ ಅನುಮಾನಗಳಿಗೆ ಮತ್ತಷ್ಟು ಬಲ ತುಂಬುತ್ತವೆ’ ಎಂದು ಬರೆದಿದೆ.

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಗೌಪ್ಯ ವಿಚಾರಗಳನ್ನು ಅರ್ನಬ್‌ ಗೋಸ್ವಾಮಿ ಬಹಿರಂಗಗೊಳಿಸಿದ್ದಾರೆ. ಈ ವಿಚಾರವಾಗಿ ಬಿಜೆಪಿ ಯಾಕೆ ಮಾತನಾಡುತ್ತಿಲ್ಲ? ಗೋಸ್ವಾಮಿಗೆ ಮಾಹಿತಿ ರವಾನಿಸಿ ರಾಷ್ಟ್ರೀಯ ಸುರಕ್ಷತೆಯ ವಿಚಾರದಲ್ಲಿ ಅವಮಾನವಾಗುವಂತೆ ಮಾಡಿದ ಅಸಲಿ ಮುಖ ಯಾರದ್ದು? ನಮಗೂ ತಿಳಿಸಿ. ಗೊಸ್ವಾಮಿಗೆ ನಲ್ವತ್ತು ಯೋಧರ ಹತ್ಯೆ ಬಗ್ಗೆ ಹೇಗೆ ತಿಳಿಯಿತು? ಇದು ಬಿಜೆಪಿಯ ಸಂಚು ಎಂದು ಶಿವಸೇನಾ ಅನುಮಾನ ವ್ಯಕ್ತಪಡಿಸಿದೆ.

ಇದನ್ನೂ ಓದಿ: ಪುಲ್ವಾಮ ದಾಳಿಯ ಬಗ್ಗೆ ಅರ್ನಾಬ್‌ಗೆ ಮೊದಲೇ ತಿಳಿದಿತ್ತು; ಸೈನಿಕರ ಸಾವನ್ನು ಸಂಭ್ರಮಿಸಿದ್ದ ಗೋಸ್ವಾಮಿ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights