Fact Check: ಮುಳ್ಳು ತಂತಿ ಬೇಲಿಯನ್ನು ಭೇದಿಸಲು ಉಕ್ಕಿನ ಚಕ್ರಗಳ ಟ್ರ್ಯಾಕ್ಟರುಗಳು ರೆಡಿ?
ದೆಹಲಿಯಲ್ಲಿ ಜನವರಿ 26ರಂದು ನಡೆದ ಹಿಂಸಾಚಾರದಿಂದಾಗಿ ಗಡಿ ಭಾಗಗಳಲ್ಲಿ ಫೋಲೀಸರು ಕಬ್ಬಿಣದ ಸ್ಪೈಕ್, ಮುಳ್ಳು ತಂತಿ, ತಡೆ ಗೋಡೆ ಹಾಗೂ ಬ್ಯಾರಿಕೇಡ್ ಗಳಿಂದ ರಸ್ತೆಗಳನ್ನು ಬಂದ್ ಮಾಡಿದ್ದಾರೆ.
ಈ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಪೋಸ್ಟ್, ರೈತರು ಸ್ಟೀಲ್ ಚಕ್ರಗಳೊಂದಿಗೆ ಟ್ರಾಕ್ಟರುಗಳನ್ನು ಸಿದ್ಧಪಡಿಸುತ್ತಿದ್ದಾರೆ. ಪೋಲೀಸ್ ಅಡೆತಡೆಗಳನ್ನು ನಿವಾರಿಸಲೆಂದು ಈ ಟ್ರ್ಯಾಕ್ಟರ್ ಗಳಿಗೆ ಟೈರ್ ಅಥವಾ ಟ್ಯೂಬ್ಗಳನ್ನು ಇಡಲಾಗಿಲ್ಲ ಎಂದು ಕೆಲವು ವಿಭಿನ್ನ ಟ್ರಾಕ್ಟರುಗಳ ಚಿತ್ರಗಳೊಂದಿಗೆ ಪೋಸ್ಟ್ಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಆದರೆ ಈ ಚಿತ್ರಗಳೆಲ್ಲವೂ ಹಳೆಯದಾಗಿದ್ದು ರೈತರ ಪ್ರತಿಭಟನೆಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ವೈರಲ್ ಫೋಟೋಗಳಲ್ಲಿ ಹೆಚ್ಚಿನವು ವೆಬ್ಸೈಟ್ಗಳಿಂದ ಆರಿಸಲಾಗಿದೆ.
ಮೊದಲ ಚಿತ್ರ
ಲೋಹದ ಚಕ್ರಗಳನ್ನು ಹೊಂದಿರುವ ಟ್ರಾಕ್ಟರ್ನ ಈ ಚಿತ್ರ 2015 ರಿಂದ ಅಂತರ್ಜಾಲದಲ್ಲಿ ಲಭ್ಯವಿದೆ.
ಎರಡನೇ ಚಿತ್ರ
ಈ ಚಿತ್ರವು ಜುಲೈ 18, 2019 ರಂದು “ಸ್ಮಾಲ್ ಸ್ಕೇಲ್ ಇಂಡಸ್ಟ್ರಿ ವೈ ಐಡಿಯಾಸ್” ಪೋಸ್ಟ್ ಮಾಡಿದ ಯೂಟ್ಯೂಬ್ ವೀಡಿಯೋದಿಂದ ತೆಗೆದ ಸ್ಕ್ರೀನ್ ಶಾಟ್ ಆಗಿದೆ. ಈ ವೀಡಿಯೊವನ್ನು “ಮೆಷಿನರಿ ಎಕ್ಸ್ಟ್ರೀಮ್” ವೆಬ್ಸೈಟ್ನಲ್ಲಿಯೂ ಕಾಣಬಹುದು.
ಮೂರನೇ ಚಿತ್ರ
ಇದು “ಡ್ರೀಮ್ಸ್ಟೈಮ್” ವೆಬ್ಸೈಟ್ನ ಸ್ಟಾಕ್ ಶಾಟ್ಗಳಲ್ಲಿ ಕಂಡುಬರುವ ಪುರಾತನ ಮಾಸ್ಸಿ-ಹ್ಯಾರಿಸ್ ಮಾಡೆಲ್ 55 ಫಾರ್ಮ್ ಟ್ರಾಕ್ಟರ್ ಆಗಿದೆ.
ನಾಲ್ಕನೇ ಚಿತ್ರ
ಉಕ್ಕಿನ ಚಕ್ರಗಳನ್ನು ಹೊಂದಿರುವ ನೀಲಿ ಟ್ರಾಕ್ಟರ್ನ ಈ ಚಿತ್ರ 2013 ರಿಂದಲೂ ಅಂತರ್ಜಾಲದಲ್ಲಿ ಲಭ್ಯವಿದೆ. ಈ ಟ್ರಾಕ್ಟರ್ನ ವೀಡಿಯೊವನ್ನು ಯೂಟ್ಯೂಬ್ ಚಾನೆಲ್ “ಬೊಂಟ್ರೇಗರ್ ಎಂಟರ್ಟೈನ್ಮೆಂಟ್” ನಲ್ಲಿ ಕಾಣಬಹುದು.
ಐದನೇ ಚಿತ್ರ
ಈ ಹಸಿರು-ಬಣ್ಣದ ಉಕ್ಕಿನ-ಚಕ್ರದ ಟ್ರಾಕ್ಟರ್ ಒಂದು ಪುರಾತನ ತುಣುಕು, ಇದರ ವಾಲ್ಪೇಪರ್ ಚಿತ್ರಗಳು “ಅಮೆಜಾನ್” ನಂತಹ ವೆಬ್ಸೈಟ್ಗಳಲ್ಲಿ ಸಹ ಮಾರಾಟಕ್ಕೆ ಇರುತ್ತವೆ. 1930 ರ ಜಾನ್ ಡೀರೆ ಟ್ರಾಕ್ಟರುಗಳ ಬಗ್ಗೆ ಉಲ್ಲೇಖಿಸಿರುವ ಅಮೆರಿಕನ್ ಬ್ಲಾಗ್ನಲ್ಲಿ ಈ ಟ್ರಾಕ್ಟರ್ನ ಪರಂಪರೆಯ ಬಗ್ಗೆ ಕಾಣಬಹುದು.
ಆದ್ದರಿಂದ ಉಕ್ಕಿನ ಚಕ್ರದ ಟ್ರಾಕ್ಟರುಗಳೆಂದು ಹೇಳಿಕೊಳ್ಳುವ ಫೇಸ್ಬುಕ್ ಪೋಸ್ಟ್ನಲ್ಲಿ ಬಳಸಲಾದ ವೈರಲ್ ಚಿತ್ರಗಳು ರೈತರ ಪ್ರತಿಭಟನೆಗೆ ಸಂಬಂಧಿಸಿಲ್ಲ. ಈ ಎಲ್ಲಾ ಚಿತ್ರಗಳು ಹಳೆಯವು ಮತ್ತು ನಡೆಯುತ್ತಿರುವ ರೈತರ ಆಂದೋಲನಕ್ಕೆ ಸಂಬಂಧಿಸಿಲ್ಲ.