ಹೃದಯ ವಿದ್ರಾವಕ ಘಟನೆ : 8 ತಿಂಗಳ ಮಗುವನ್ನು ಕತ್ತರಿಸಿ ಕೊಂದ ತಾಯಿ..!

ದೇವರಿಗೆ ಹರಕೆ ಹೊತ್ತ ಭಕ್ತರು ಪ್ರತಿ ವರ್ಷ ಕುರಿ-ಮೇಕೆಗಳನ್ನು ಬಲಿಕೊಡುವ ಸಂಪ್ರದಾಯ ಹಲವಾರು ದಶಕಗಳಿಂದ ಚಾಲ್ತಿಯಲ್ಲಿದೆ. ಆದರೆ ಇಂಥಹ ಘಟನೆಯೇ ಮಾನಸಿಕ ತಾಯಿಯ ಮೇಲೆ ಪರಿಣಾಮ ಬೀರಿ ತನ್ನ 8 ತಿಂಗಳ ಮಗುವನ್ನು ಬಲಿ ಕೊಡಲು ಪ್ರೇರಿಪಿಸಿತಾ ಎನ್ನುವ ಅನುಮಾನ ಶುರುವಾಗಿದೆ.

ಹೌದು.. ತಾಯಿಯೊಬ್ಬಳು ತನ್ನ 8 ತಿಂಗಳ ಮಗುವನ್ನು ಕತ್ತರಿಸಿ ಕೊಂದ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶ ಭೋಪಾಲ್‌ನ ಅಶೋಕ್ ನಗರದಲ್ಲಿ ನಡೆದಿದೆ.

“ಈ ಮಗು ಮೇಕೆಯಂತೆ ಮತ್ತು ಅವನು ಸೇರಬೇಕಾದ ಸ್ಥಳಕ್ಕೆ ಕಳುಹಿಸುತ್ತೇನೆ” ಎಂದು ಹೇಳುತ್ತಿದ್ದ ತಾಯಿ ತನ್ನ 8 ತಿಂಗಳ ವಯಸ್ಸಿನ ಮಗುವನ್ನು ಕೊಂದಿದ್ದಾಳೆ. ಘಟನೆಯ ಬಗ್ಗೆ ತಂದೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ ತಾಯಿ ರಶ್ಮಿ ಲೋಧಿಯನ್ನು ಬಂಧಿಸಲಾಗಿದೆ. ರಶ್ಮಿ ಚುರುರು ಗ್ರಾಮದ ನಿವಾಸಿ. ಶನಿವಾರ ಮಧ್ಯಾಹ್ನ ತನ್ನ ಮಗುವಿನೊಂದಿಗೆ ಮನೆಯಿಂದ ಹೊರಟ ರಶ್ಮಿ ಗಂಟೆಗಳ ನಂತರ ಮರಳಿದ್ದಾಳೆ. ಈ ವೇಳೆ ಮಗುವಿಗೆ ಅಪಾರ ರಕ್ತಸ್ರಾವವಾಗುತ್ತಿತ್ತು ಎಂದು ರಶ್ಮಿಯ ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ.

ಮಗುವನ್ನು ಹೊತ್ತೊಯ್ಯುವಾಗ ರಶ್ಮಿ “ಅವನು ಮೇಕೆ ಮತ್ತು ಅವನು ಎಲ್ಲಿದ್ದಾನೋ ನಾನು ಅಲ್ಲಿಗೇ ಕಳುಹಿಸುತ್ತೇನೆ” ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ರಶ್ಮಿಯ ಕುಟುಂಬ ಆರಂಭದಲ್ಲಿ ಅಪರಾಧವನ್ನು ಮುಚ್ಚಿಡಲು ಬಯಸಿತು. ಘಟನೆಯ ನಂತರ ರಶ್ಮಿಯ ತಂದೆ ಭಾನುವಾರ ಬೆಳಿಗ್ಗೆ ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.

ತನಿಖೆಯನ್ನು ಪ್ರಾರಂಭಿಸಲಾಗಿದ್ದು ಅಪರಾಧ ಮಾಡಲು ಬಳಸಿದ ಕೊಡಲಿಯನ್ನು ವಶಪಡಿಸಿಕೊಳ್ಳಲಾಗಿದೆ. ಮಗುವಿನ ಶವವನ್ನು ಶವಪರೀಕ್ಷೆಗೆ ಕಳುಹಿಸಲಾಗಿದೆ. ಮಹಿಳೆ ಮೊದಲು ಮಗುವನ್ನು ಹೆದ್ದಾರಿ ರಸ್ತೆಯಲ್ಲಿ ಇರಿಸಿ ನಂತರ ಕೊಡಲಿಯಿಂದ ಕತ್ತರಿಸಿ ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಮಗುವಿನ ಕುತ್ತಿಗೆಗೆ ಅನೇಕ ಗಾಯಗಳಾಗಿವೆ. ಘಟನೆಯಿಂದ ರಶ್ಮಿ ಮಾನಸಿಕವಾಗಿ ಅಸ್ಥಿರ ಎಂದು ಶಂಕಿಸಲಾಗಿದೆ. ಮಾನಸಿಕ ಮೌಲ್ಯಮಾಪನಕ್ಕಾಗಿ ಆಕೆಯನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights