ಪಟಾಕಿ ನಿಷೇಧಕ್ಕೆ ಬಿಜೆಪಿಯಲ್ಲೇ ವಿರೋಧ : ಪಟಾಕಿ ಹಚ್ಚೇಹಚ್ಚುತ್ತೇವೆಂದು ಶಾಸಕರ ಪಟ್ಟು! 

ರಾಜ್ಯ ಸರ್ಕಾರದ ಪಟಾಕಿ ನಿಷೇಧ ಆದೇಶಕ್ಕೆ ಬಿಜೆಪಿ ಶಾಸಕರಿಂದ ವಿರೋಧ ವ್ಯಕ್ತವಾಗಿದೆ. ಪಟಾಕಿ ಹಚ್ಚದೇ ದೀಪಾವಳಿ ಹಚ್ಚಲು ಸಾಧ್ಯವೇ ಎಂದು ಬಿಜೆಪಿ ಶಾಸಕರು ಪ್ರಶ್ನಿ ಎತ್ತಿದ್ದಾರೆ.

ಕೊರೊನಾ ರೋಗಿಗಳಿಗೆ ಹಾಗೂ ಶ್ವಾಸಕೋಸದ ಸಮಸ್ಯೆಗೆ ಕಾರಣವಾಗಬಹುದು ಎಂದು ರಾಜ್ಯ ಸರ್ಕಾರ ಪಟಾಕಿ ಮೇಲೆ ಸರ್ಕಾರ ನಿಷೇಧ ಹೇರಿತ್ತು. ಆದರೆ ಈ ಬಗ್ಗೆ ಚರ್ಚೆಯಲ್ಲಿ ಸಿಎಂ ಯಡಿಯೂರಪ್ಪನವರ ಮುಂದೆಯೇ ಶಾಸಕರು ಪಟಾಕಿ ನಿಷೇಧಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಹಿಂದೂಗಳ ಹಬ್ಬಕ್ಕೆ ಇದ್ಯಾಕೆ ನಿಷೇಧ? ಪಟಾಕಿ ಹಚ್ಚದೇ ದೀಪಾವಳಿ ಹಬ್ಬ ಆಚರಿಸಲು ಸಾಧ್ಯವೇ? ನಾವು ಪಟಾಕಿ ಹಚ್ಚೇ ಹಚ್ಚುತ್ತೇವೆ. ಯಾರ್ ಏನೇ ಹೇಳಲಿ ಪಟಾಕಿ ಹಚ್ಚುತ್ತೇವೆ ಎಂದು ಶಾಸಕರು ಹೇಳುತ್ತಿದ್ದಾರೆ.

ಚರ್ಚೆಯ ಸಂದರ್ಭದಲ್ಲಿ ಆಡಳಿತ ಪಕ್ಷದಲ್ಲಿ ವಿರೋಧ ವ್ಯಕ್ತವಾದ ಹಿನ್ನೆಯಲ್ಲಿ ಹಸಿರು ಪಟಾಕಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಆದರೆ ಖುದ್ದು ಪಟಾಕಿ ಹಚ್ಚುತ್ತೇವೆ ಎಂದು ಶಾಸಕರು ಹೇಳಿರಬೇಕಾದರೆ, ಸರ್ಕಾರದ ಆದೇಶ ಕೇವಲ ಜನಸಾಮಾನ್ಯರ ಮೇಲೆ ಬೀಳುತ್ತಾ ಎನ್ನುವುದನ್ನ ಅನುಮಾನ ಮೂಡಿದೆ.

ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಕೂಡ ಪಟಾಕಿ ಸಿಡಿಸಿ ಪ್ರತಿಭಟನೆ ಮಾಡಿದ್ದರು.

ಆದರೆ ಸ್ವಪಕ್ಷನಾಯಕರಿಂದಲೇ ವಿರೋಧ ವ್ಯಕ್ತವಾದ ಹಿನ್ನೆಲ್ ಇಕೋ ಫ್ರೆಂಡ್ಲಿ ಪಟಾಕಿಗಳಿಗೆ ಮಾತ್ರ ಅವಕಾಶ ನೀಡಿದೆ. ಆದರೆ ಈಗಾಗಲೇ ಸರ್ಕಾರದ ಆದೇಶ ಏಕಾಏಕಿ ಆಗಿರುವುದರಿಂದ ಪಟಾಕಿ ತಯಾರಿಕರಿಗೆ ಲಾಸ್ ಆಗಿದೆ.ಕೇವಲ ಹಸಿರು ಪಟಾಕಿ ಗೆ ಮಾತ್ರ ಅವಕಾಶ ನೀಡಿದರೆ ತಕ್ಷಣಕ್ಕೆ ಬೇಕಾಗಿರುವ ಹಸಿರು ಪಟಾಕಿ ಲಭ್ಯವಿದಿಯಾ ಅನ್ನೋದಕ್ಕೆ ಸರ್ಕಾರದ ಬಳಿ ಉತ್ತರವಿಲ್ಲ. ಪಟಾಕಿ ನಿಷೇಧ ಮಾಡಿದ ಸರ್ಕಾರ ಮಾರಾಟಗಾರರ ನಷ್ಟ ಭರಿಸುವ ಮಾತನ್ನೂ ಆಡಿಲ್ಲ.

ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವುದರಿಂದ ಸರ್ಕಾರ ಇನ್ನೂ ಈ ಬಗ್ಗೆ ಕಟು ನಿರ್ಧಾರತೆಗೆದುಕೊಳ್ಳದೇ ಇರುವುದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ.

Spread the love

Leave a Reply

Your email address will not be published. Required fields are marked *