‘ಕೈ’ಗೆ  ಹೊನ್ನಾದೇವಿ ಗೆಲುವಿನ ಪ್ರಸಾದ..? : ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೆಚ್ಚಾದ ಉತ್ಸಾಹ!

ತುಮಕೂರು ಜಿಲ್ಲಾ ಶಿರಾ ವಿಧಾನಸಭಾ ಚುನಾವಣೆ ಫಲಿತಾಂಶ ನಾಳೆ (ನ10) ಪ್ರಕಟಗೊಳ್ಳಲ್ಲಿದ್ದು, ನೆಚ್ಚಿನ ಅಭ್ಯರ್ಥಿಗಳ ಗೆಲುವಿಗಾಗಿ ಜನ ಹಾಗೂ ಕಾರ್ಯಕರ್ತರು ದೇವರ ಮೊರೆ ಹೋಗಿದ್ದಾರೆ. ಈ ವೇಳೆ ಶಿರಾದ ಹೆಬ್ಬೂರಿನ ಹೊನ್ನಾದೇವಿಯ ಸೂಚನೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಭಾರೀ ಉತ್ಸಾಹ ಮೂಡಿಸಿದೆ.

ಹೌದು… ಶಿರಾ ಕ್ಷೇತ್ರದಲ್ಲಿ  ಬಿಜೆಪಿಯಿಂದ ಅಭ್ಯರ್ಥಿ ರಾಜೇಶ್ ಗೌಡ, ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಸ್ಪರ್ಧಿಸಿದ್ದು, ಇವರಲ್ಲಿ ಯಾರಿಗೆ ಜಯ ಸಿಗಲಿದೆ ಎಂಬ ಪ್ರಶ್ನೆ ಹೊನ್ನಾದೇವಿ ಬಲಭಾಗದಲ್ಲಿ ಹೂ ಬೀಳಿಸುವ ಮೂಲಕ ‘ಕೈ’ ಅಭ್ಯರ್ಥಿಗೆ ಗೆಲವು ಸೂಚಿಸಿದ್ದಾಳೆ.

ಈ ಹಿಂದೆ ಸುಮಾಲತಾ ಅಂಬರೀಷ್ ಅವರಿಗೆ ಇದೇ ದೇವಿ ಗೆಲುವಿನ ಸಂಕೇತ ನೀಡಿದ್ದಳು. ಈ ಬಾರಿ ದೇವಿ ‘ಕೈ’ಗೆ ಗೆಲುವಿನ ಪ್ರಸಾದ ನೀಡಿದ್ದಾಳೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಉತ್ಸಾಹ ಮೂಡಿದೆ.

ಆಡಳಿತಾರೂಢ ಬಿಜೆಪಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಉಪಚುನಾವಣೆಯ ಫಲಿತಾಂಶದ ಮೆಲೆ ಹಲವು ಹಿರಿಯ ನಾಯಕರ ಭವಿಷ್ಯ ಅಡಗಿದೆ. ಅದರಲ್ಲಿ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರದ್ದು ಕೂಡಾ. ಶಿರಾ ಮತ್ತು ರಾಜರಾಜೇಶ್ವರಿ ನಗರದ ಚುನಾವಣೆಯ ಫಲಿತಾಂಶ ನೇರವಾಗಿ ಸರಕಾರದ ಆಯುಸ್ಸಿಗೆ ತೊಂದರೆ ತರದಿದ್ದರೂ, ಇದರ ಸೋಲು ಗೆಲುವು ಹಲವು ರಾಜಕೀಯ ಲೆಕ್ಕಾಚಾರಕ್ಕೆ ನಾಂದಿ ಹಾಡಲಿದೆ.

ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದ ಯಡಿಯೂರಪ್ಪನವರ ನೇತೃತ್ವದ ಸರಕಾರಕ್ಕೆ ಮೊದಲಿನಿಂದಲೂ ಬಿಜೆಪಿ ವರಿಷ್ಠರ ಸಹಕಾರ ಅಷ್ಟಕಷ್ಟೇ. ನೆರೆ ಪರಿಹಾರ, ಸಂಪುಟ ವಿಸ್ತರಣೆ ಸೇರಿದಂತೆ ಹಲವು ವಿಚಾರದಲ್ಲಿ ಇದು ಸಾಬೀತಾಗಿ ಹೋಗಿದೆ.

ಸಿಎಂ ಯಡಿಯೂರಪ್ಪ ಸಂಪುಟ ವಿಸ್ತರಣೆಗಾಗಿ ದೆಹಲಿಗೆ ಹಿಂದೆ ತೆರಳಿದ್ದರು. ಅಲ್ಲಿ ಅವರಿಗೆ ನಿರೀಕ್ಷಿತ ಸಹಕಾರ ಬಿಜೆಪಿ ಹೈಕಮಾಂಡ್ ನಿಂದ ಸಿಗಲಿಲ್ಲ. ಇನ್ನೂ ಮುಖ್ಯಮಂತ್ರಿ ಬದಲಾವಣೆ ವಿಚಾರ ಅಲ್ಲಲ್ಲಿ ಚಾಲ್ತಿಯಲ್ಲಿ ಇರುವುದರಿಂದ ಉಪಚುನಾವಣೆಯ ಫಲಿತಾಂಶ ಬಿಎಸ್ವೈಗೆ ನಿರ್ಣಾಯಕವಾಗುವ ಸಾಧ್ಯತೆಯಿಲ್ಲದಿಲ್ಲ.

ಹೀಗಾಗಿ ಆರ್ ಆರ್ ನಗರ ಹಾಗೂ ಶಿರಾ ಉಪಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಭಾರೀ ನಿರೀಕ್ಷೆಯನ್ನು ಹೊಂದಿದೆ. ಆದರೆ ಈ ಬಾರಿ ಹೊನ್ನಾದೇವಿ ಕಾಂಗ್ರೆಸ್ ಗೆ ಗೆಲುವಿನ ಪ್ರಸಾದ ನೀಡಿದ್ದೂ ಭಾರೀ ಕುತೂಹಲ ಮೂಡಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights