ಯತ್ನಾಳ್‌ ಹಾದಿ ಹಿಡಿದ ಮತ್ತೊಬ್ಬ BJP ಶಾಸಕ: ಬಿಎಸ್‌ವೈ ಸರ್ಕಾರದ ವಿರುದ್ದ ಆಕ್ರೋಶ!

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪಕ್ಷದ ಒಳಗೆ ಅಸಮಾಧಾನ, ಬಂಡಾಯದ ಕಾವು ಹೊಗೆಯಾಡುತ್ತಲೇ ಇದೆ. ಸಿಎಂ ಯಡಿಯೂರಪ್ಪನವರಿಗೆ ಸಚಿವ ಸಂಪುಟ ವಿಸ್ತರಣೆಯೇ ದೊಡ್ಡ ತಲೆನೋವಾಗಿರುವ ಸಂದರ್ಭದಲ್ಲಿ ಹಲವು ಶಾಸಕರು ಬಿಎಸ್‌ವೈ ವಿರುದ್ದ ಅಸಮಾಧಾನ ಹೊರಹಾಕುತ್ತಿಲೇ ಇದ್ದಾರೆ. ಇತ್ತ ಬಿಜೆಪಿ ಹೈಕಮಾಂಡ್‌ ಇದತ ಬಗ್ಗೆ ತಲೆಕೆಡಿಸಿಕೊಳ್ಳದೆ ಮೌನವಹಿಸಿದೆ.

ಸುಮಾರು ತಿಂಗಳುಗಳಿಂದ ಸಿಎಂ ಬಿಎಸ್‌ವೈ ವಿರುದ್ದ ವಿಜಯಪುರ ಶಾಸಕ ಬಸನಗೌಡ ಯತ್ನಾಳ್‌ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಇದೀಗ ಅವರ ಹಾದಿಯನ್ನೇ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್ ಹಿಡಿದಿದ್ದು, ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಕ್ಷೇತ್ರಗಳ ಅಭಿವೃದ್ದಿಗೆ ಸರ್ಕಾರ ಅನುದಾನವನ್ನು ನೀಡುತ್ತಿಲ್ಲ… ಅನುದಾವಿಲ್ಲದೇ, ಕ್ಷೇತ್ರದ ಅಭಿವೃದ್ಧಿಯೂ ಇಲ್ಲ. ಕ್ಷೇತ್ರದಲ್ಲಿ ಯಾವುದೇ ಕೆಲಸಗಳೂ ಆಗುತ್ತಿಲ್ಲ. ಜನ ನಮ್ಮನ್ನು ಬೈಯ್ಯುತ್ತಿದ್ದಾರೆ. ಹೀಗೆ ಅದರೆ, ಮುಂದಿನ ಕತೆ ಏನು. ಏನಾದರೂ ಮಾತನಾಡಿದರೆ ಅದಕ್ಕೊಂದು ಬಣ್ಣ ಕಟ್ಟುತ್ತಾರೆ. ಹಾಗಾಗಿ ಬಡವ ನೀ ಮಡಗಿದಂಗಿರುವ ಅಂತಾರಾಲ್ಲ ಹಾಗೆ ಸುಮ್ಮನಿದ್ದೇವೆ ಎಂದು ಸರ್ಕಾರದ ವಿರುದ್ದ ಬಿಜೆಪಿ ಶಾಸಕ ಗೂಳಿಹಟ್ಟಿ ಶೇಖರ್‌ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಸ್ಥಾನಮಾನ ಸಿಕ್ಕರೆ ಬಿಜೆಪಿಗೆ ಸೇರುತ್ತೇನೆ: ಶಾಸಕ ಎನ್‌ ಮಹೇಶ್‌

ಕ್ಷೇತ್ರದ ಅಭಿವೃದ್ಧಿ, ಅನುದಾನಗಳ ಬಗ್ಗೆ ಮಾತನಾಡುಲು ಸಚಿವರು ಕೈಗೆ ಸಿಗುತ್ತಿಲ್ಲ. ಮುಖ್ಯಮಂತ್ರಿಗೆ ಪತ್ರ ಬರೆದರೂ ಕೆಲಸ ಆಗುತ್ತಿಲ್ಲ. ನಾವು ಏನನ್ನೂ ಮಾತನಾಡಲಾರದ ಸ್ಥಿತಿಯಲ್ಲಿದ್ದೇವೆ ಎಂದು ಅವರು ಹೇಳಿದ್ದಾರೆ.

ದಿನ ಕಳೆದಂತೆ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೇಳುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿಎಸ್‌ವೈ ಕಳೆದ ವಾರ ಶಾಸಕರ ಸಭೆ ನಡೆಸಿ, ಸಮಾಧಾನ ಮಾಡಲು ಮುಂದಾಗಿದ್ದರು. ಅಲ್ಲದೆ, ಉತ್ತರ ಕರ್ನಾಟಕ ಪ್ರವಾಸವನ್ನು ಕೈಗೊಳ್ಳುತ್ತಿದ್ದಾರೆ. ಆದರೆ, ಇವೆಲ್ಲವೂ ಕಣ್ಣೀರು ವರೆಸುವ ಕೆಲಸವೆಂದು ಭಾವಿಸಿರುವ ಬಿಜೆಪಿ ಶಾಸಕರ ಅಸಮಾಧಾನ ಮಾತ್ರ ಕಡಿಮೆಯಾಗಿಲ್ಲ. ಅಲ್ಲದೆ, ಕೆಲವು ಶಾಸಕರು ಮಾತನಾಡಿದರೆ ಟಾರ್ಗೆಟ್‌ ಆಗ್ತೀವಿ ಎಂಬ ಭಯದಿಂದ ಮೌನವಾಗಿದ್ದಾರೆ ಎಂಬ ಅಭಿಪ್ರಾಯಗಳು ಕೇಳಿಬಂದಿವೆ.


ಇದನ್ನೂ ಓದಿ: ಬಿಎಸ್‌ವೈ ಮೇಲೆ ವಾಗ್ದಾಳಿ ನಡೆಸುತ್ತಿರುವ ಯತ್ನಾಳ್‌ ವಿರುದ್ಧ ಕ್ರಮ ಕೈಗೊಳ್ಳದ BJP: ಯಾಕೆ ಗೊತ್ತೇ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights