ವಾಜಪೇಯಿ ಕುಡಿಯುತ್ತಿದ್ದರಂತೆ ಅದೇನು ತಪ್ಪಾ? : ಪ್ರಿಯಾಂಕ್ ಖರ್ಗೆ ವಿವಾದಾತ್ಮಕ ಹೇಳಿಕೆ!

ನಿನ್ನೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ವಿರುದ್ಧ ವಿರುದ್ಧ ಕೆಪಿಸಿಸಿ ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಮಾಡಿದ್ದಾರೆ.

ಕಾಂಗ್ರೆಸ್​ನವರು ಇಂದಿರಾ ಬಾರ್, ಹುಕ್ಕಾ ಬಾರ್‌ ಮಾಡಿಕೊಳ್ಳಲಿ ಎಂದು ಹೇಳುವ ಮೂಲಕ ಕೈ ನಾಯಕರನ್ನು ಕೆರಳಿಸಿದ ಸಿಟಿ ರವಿ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶಗೊಂಡಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಕಲಬುರಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ‘ಸಚಿವರಾಗಿಲ್ಲವೆಂದು ಹತಾಶೆಯಿಂದ ಸಿಟಿ ರವಿ ಏನೇನೋ ಮಾತನಾಡುತ್ತಿದ್ದಾರೆ. ಸಿಗರೇಟ್ ಸೇದುವುದು ಅಪರಾಧವಾ? ವಾಜಪೇಯಿ ಕುಡಿಯುತ್ತಿದ್ದರಂತೆ, ಹಾಗಂತ ಅದೇನು ತಪ್ಪಾ? ಎಂದು ಸಿಟಿ ರವಿಗೆ ಟಾಂಗ್ ಕೊಟ್ಟಿದ್ದಾರೆ.

ಸಿಟಿ ರವಿ ಮಾತನಾಡುವುದರಿಂದ ಯಾರ ಘನತೆ ಕೂಡ ಕಡಿಮೆಯಾಗುವುದಿಲ್ಲ. ಬಿಜೆಪಿ ಅಧಿಕಾರಕ್ಕೆ ಬಂದು 7 ವರ್ಷವಾಯಿತು. ಯಾವ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಏನೇನೋ ಮಾತನಾಡಿ ಜನರ ಗಮನ ಬೇರೆಡೆ ಸೆಳೆಯುತ್ತಿದ್ದಾರೆ ಎಂದು ಗರಂ ಆದ್ರು.

ನೆಹರೂ ಬಗ್ಗೆ ನಾನು ಮಾತನಾಡಿದ್ದಕ್ಕೆ ಕಾಂಗ್ರೆಸ್‌ನವರಿಗೆ ಉರಿ ಹತ್ತಿಕೊಂಡಿದೆ. ನೆಹರೂ ಹುಕ್ಕಾ ಸೇದುತ್ತಿದ್ದದ್ದು ತಪ್ಪೋ, ನಾನು ಹೇಳಿದ್ದು ತಪ್ಪೋ? ಒಂದುವೇಳೆ, ನಾನು ಹೇಳಿದ್ದು ತಪ್ಪು ಎನ್ನುವುದಾದರೆ, ನೆಹರೂ ಸೇದಿದ್ದು ತಪ್ಪಲ್ಲವೇ? ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ಸಿಗರನ್ನು ಪ್ರಶ್ನಿಸಿದ್ದರು. ಇದಕ್ಕೆ ಕಾಂಗ್ರೆಸ್ ನಾಯಕರು ತಿರುಗೇಟು ಕೊಟ್ಟಿದ್ದು, ಸಿಟಿ ರವಿ ನಾಲಿಗೆ ಬಾತ್‌ರೂಮ್ ಚಪ್ಪಲಿ ಇದ್ದ ಹಾಗೆ ಎಂದು ಗುಡುಗಿದ್ದಾರೆ.

ಇದೇ ವೇಳೆ ಸಾವರ್ಕರ್ ಬಗ್ಗೆಯೂ ಮಾತನಾಡಿರುವ ಪ್ರಿಯಾಂಕ್ ಖರ್ಗೆ, ಸಾವರ್ಕರ್​ ವೀರ್ ಸಾವರ್ಕರ್​ ಹೇಗಾದ್ರು ಅಂತ ಬಿಜೆಪಿಯ ಯಾವುದೇ ಶಾಸಕ, ಸಂಸದರಿಗೂ ಗೊತ್ತಿಲ್ಲ. ಅವರು ಏನೇನೋ ಮಾತನಾಡುತ್ತಾರೆ. ಸಿ.ಟಿ.ರವಿ ಮಂತ್ರಿಯಾಗಿಲ್ಲ ಅಂತ ಹತಾಶರಾಗಿದ್ದಾರೆ. ಇಷ್ಟಕ್ಕೂ ಯಾರೋ ಮಾತನಾಡುವುದರಿಂದ ಘನತೆ ಕಡಿಮೆಯಾಗಲ್ಲ ಎಂದು ತಿಳಿಸಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights