4 ಮುಸ್ಲಿಂ ಕುಟುಂಬಗಳಿಗಾಗಿ ಮಸೀದಿ ನಿರ್ಮಿಸಲು ಒಗ್ಗೂಡಿದ ಗ್ರಾಮಸ್ಥರು…!
ನಾಲ್ಕು ಮುಸ್ಲಿಂ ಕುಟುಂಬಗಳಿಗೆ ಮಸೀದಿ ನಿರ್ಮಿಸಲು ಪಂಜಾಬ್‌ನ ಮೊಗಾದಲ್ಲಿನ ಭೂಲಾರ್ ಗ್ರಾಮದ ಜನ ಮುಂದಾಗಿದ್ದಾರೆ. ಈ ಗ್ರಾಮದಲ್ಲಿ ಏಳು ಗುರುದ್ವಾರಗಳು ಮತ್ತು ಎರಡು ದೇವಾಲಯಗಳಿವೆ. ಆದರೆ ಮಸೀದಿ ಇಲ್ಲ.
ಹೀಗಾಗಿ 100 ರೂಪಾಯಿಯಿಂದ 1 ಲಕ್ಷ ರೂ.ವರೆಗೆ ಎಲ್ಲಾ ಗ್ರಾಮಸ್ಥರು ಮಸೀದಿ ನಿರ್ಮಾಣಕ್ಕೆ ಹಣದ ಸಹಾಯ ಮಾಡಿದ್ದಾರೆ. ಜಾತಿ ಬೇಧಭಾವ ಮಾಡುವ ಈ ಕಾಲದಲ್ಲಿ ನಾಲ್ಕು ಮುಸ್ಲಿಂ ಕುಟುಂಬಗಳಿಗಾಗಿ ಮಸೀದಿ ನಿರ್ಮಾಣಕ್ಕೆ ಗ್ರಾಮಸ್ಥರು ಒಗ್ಗೂಡಿರುವುದು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡಿದೆ.
ಮಸೀದಿಯ ಅಡಿಪಾಯವನ್ನು ಭಾನುವಾರ ಬೆಳಿಗ್ಗೆ ನಿಗದಿಪಡಿಸಲಾಗಿತ್ತು. ಆದರೆ ಭಾರೀ ಮಳೆಯಿಂದ ಅಡಿಪಾಯಕ್ಕೆ ಅಡ್ಡಿಯಾಗಿದೆ. ಆಗ ಗ್ರಾಮಸ್ಥರು ಮಸೀದ್ ಸ್ಥಳವನ್ನು ಹತ್ತಿರದ ಗುರುದ್ವಾರಕ್ಕೆ ಸ್ಥಳಾಂತರಿಸಿದರು. ಎಲ್ಲರೂ ಒಗ್ಗೂಡಿ ಎಲ್ಲವನ್ನೂ ವ್ಯವಸ್ಥೆಗೊಳಿಸಿದರು. ಎಲ್ಲಾ ಗ್ರಾಮಸ್ಥರು ತಮ್ಮ ಧರ್ಮವನ್ನು ಲೆಕ್ಕಿಸದೆ ಭಾಗವಹಿಸಿದ್ದಾರೆ.
“1947 ರಲ್ಲಿ ವಿಭಜನೆಗೆ ಮುಂಚಿತವಾಗಿ ಒಂದು ಮಸೀದಿ ಇತ್ತು. ಆದರೆ ಅದು ತುಂಬಾ ಹಳೆಯದಾಗಿದ್ದರಿಂದ ಹಾಳಾಗಿದೆ. ನಮ್ಮಲ್ಲಿ ನಾಲ್ಕು ಮುಸ್ಲಿಂ ಕುಟುಂಬಗಳಿವೆ. ಅವರಿಗೆ ಮಸೀದಿ ಇರಲಿಲ್ಲ. ಆದ್ದರಿಂದ ನಾವು ಇದನ್ನ ಮಾಡಲು ನಿರ್ಧರಿಸಿದ್ದೇವೆ. ಹಿಂದೂ, ಮುಸ್ಲಿಂ ಮತ್ತು ಸಿಖ್ ಕುಟುಂಬಗಳು ನಮ್ಮ ಗ್ರಾಮದಲ್ಲಿ ಸಾಮರಸ್ಯದಿಂದ ವಾಸಿಸುತ್ತಿವೆ” ಸರ್ಪಂಚ್ ಪಾಲಾ ಸಿಂಗ್ (45) ಹೇಳುತ್ತಾರೆ.
“ಮುಸ್ಲಿಂ ಕುಟುಂಬಗಳು ತಮ್ಮ ಪೂಜಾ ಸ್ಥಳವನ್ನು ಹೊಂದಬೇಕೆಂದು ಗ್ರಾಮಸ್ಥರು ಬಯಸಿದ್ದರು. ಆದ್ದರಿಂದ ಮಸೀದಿಯನ್ನು ಮೊದಲೇ ಅಸ್ತಿತ್ವದಲ್ಲಿದ್ದ ಭೂಮಿಯಲ್ಲಿ ಪುನರ್ನಿರ್ಮಿಸಲು ನಿರ್ಧರಿಸಲಾಯಿತು” ಎಂದು ಸಿಂಗ್ ಅವರು ಹೇಳುತ್ತಾರೆ.
ಈ ಒಂದು ಹೊಸಾ ಮಸೀದಿ ಗ್ರಾಮದಲ್ಲಿ ಎಲ್ಲರಾ ಇಚ್ಚೆ ಮೇರೆಗೆ 10 ನೇ ಪೂಜಾ ಸ್ಥಳವಾಗಲಿದೆ.