ದೇಶದಲ್ಲಿ 60,471 ಹೊಸ ಕೊರೊನಾ ಕೇಸ್ : 2,726 ಜನ ಬಲಿ…!

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 60,471 ಹೊಸ ಕೊರೊನಾ ಕೇಸ್ ದಾಖಲಾಗಿದ್ದು, 2,726 ಜನ ಬಲಿಯಾಗಿದ್ದಾರೆ.

ಭಾರತ ಮಂಗಳವಾರ 60,471 ಹೊಸ ಕೊರೊನವೈರಸ್ ಪ್ರಕರಣಗಳನ್ನು ದಾಖಲಿಸಿದ್ದು, ಇದು ಸುಮಾರು 77 ದಿನಗಳಲ್ಲಿ ಅತಿ ಕಡಿಮೆ ಪ್ರಕರಣಗಳ ಸಂಖ್ಯೆಯಾಗಿದೆ. ದೇಶದಲ್ಲಿ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 2.95 ಕೋಟಿಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ 2,726 ರೋಗಿಗಳು ಸಾವನ್ನಪ್ಪಿದ್ದು ಕೋವಿಡ್ ಸಾವಿನ ಸಂಖ್ಯೆ 3.77 ಲಕ್ಷಕ್ಕೆ ಏರಿದೆ.

ಒಂದೇ ದಿನದಲ್ಲಿ 1,17,525 ಚೇತರಿಕೆಗೊಂಡಿದ್ದು, ಭಾರತದ ಚೇತರಿಕೆ ಪ್ರಮಾಣ ಈಗ ಶೇಕಡಾ 95.64 ರಷ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಭಾರತದಲ್ಲಿ 9,13,378 ಕೋವಿಡ್ ಸಕ್ರಿಯ ಪ್ರಕರಣಗಳಿವೆ.

ಕಳೆದ 24 ಗಂಟೆಗಳಲ್ಲಿ ಗರಿಷ್ಠ ಕೋವಿಡ್ ಪ್ರಕರಣಗಳನ್ನು ದಾಖಲಿಸಿದ ಮೊದಲ ಐದು ರಾಜ್ಯಗಳಲ್ಲಿ ತಮಿಳುನಾಡು 12,772 ಪ್ರಕರಣಗಳು, ಮಹಾರಾಷ್ಟ್ರ 8,129 ಪ್ರಕರಣಗಳು, ಕೇರಳ 7,719 ಪ್ರಕರಣಗಳು, ಕರ್ನಾಟಕ 6,835 ಪ್ರಕರಣಗಳು ಮತ್ತು ಆಂಧ್ರಪ್ರದೇಶ 4,549 ಪ್ರಕರಣಗಳನ್ನು ದಾಖಲಿಸಿದೆ.

ಕಳೆದ 24 ಗಂಟೆಗಳಲ್ಲಿ ಭಾರತವು ದೇಶದಲ್ಲಿ 2,726 ಸಾವುಗಳನ್ನು ದಾಖಲಿಸಿದೆ. ಗರಿಷ್ಠ ಸಾವುನೋವು ಮಹಾರಾಷ್ಟ್ರದಲ್ಲಿ (1,592) ವರದಿಯಾಗಿದ್ದು,  ತಮಿಳುನಾಡಿನಲ್ಲಿ 254 ಸಾವುಗಳು ಸಂಭವಿಸಿವೆ.

ಕಳೆದ 24 ಗಂಟೆಗಳಲ್ಲಿ ಒಟ್ಟು 1,17,525 ರೋಗಿಗಳು ಚೇತರಿಸಿಕೊಂಡಿದ್ದು ಒಟ್ಟು ಚೇತರಿಕೆ ಪ್ರಕರಣಗಳ ಸಂಖ್ಯೆ 2,82,80,472 ರಷ್ಟಿದೆ. ಭಾರತದ ಸಕ್ರಿಯ ಪ್ರಕರಣಗಳ ಸಂಖ್ಯೆ 9,13,378 ರಷ್ಟಿದೆ. ಕಳೆದ 24 ಗಂಟೆಗಳಲ್ಲಿ, ಸಕ್ರಿಯ ಪ್ರಕರಣಗಳು 59,780 ರಷ್ಟು ಕಡಿಮೆಯಾಗಿದೆ.

ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಒಟ್ಟು 39,27,154 ಡೋಸ್‌ಗಳನ್ನು ನೀಡಲಾಗಿದೆ. ಈವರೆಗೆ ಒಟ್ಟು 25,90,44,072 ಡೋಸ್‌ಗಳನ್ನು ನೀಡಲಾಗಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 17,51,358 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights