ಪಣಜಿ ಪಾಲಿಕೆಯಲ್ಲಿ BJPಗೆ ಭರ್ಜರಿ ಜಯ; 30ರಲ್ಲಿ 25 ಸ್ಥಾನಗಳು ಕೇಸರಿ ಪಡೆಗೆ!

ಗೋವಾದ ರಾಜಧಾನಿ ಪಣಜಿಯ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಸಮಿತಿಯು 30 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಗೆದ್ದಿದೆ.

2019 ರಲ್ಲಿ ಬಿಜೆಪಿಗೆ ಹೊಸದಾಗಿ ಸೇರ್ಪಡೆಗೊಂಡ ಅಟಾನಾಸಿಯೊ ಮೊನ್‌ಸೆರೇಟ್ ಈ ಸಮಿತಿಯ ನೇತೃತ್ವ ವಹಿಸಿದ್ದರು. “ನಾನು ಬಿಜೆಪಿ ಪಕ್ಷದ ಕಾರ್ಯಕರ್ತ, ಈ ಅಭಿಯಾನವನ್ನು ನಡೆಸಲು ಪಕ್ಷವು ನನ್ನನ್ನು ಆಯ್ಕೆ ಮಾಡಿದೆ” ಎಂದು ಗೆಲುವಿನ ನಂತರ ಮಾನ್ಸರರೇಟ್ ಹೇಳಿದ್ದಾರೆ.

ಪಕ್ಷವು ಎಲ್ಲಾ 30 ವಾರ್ಡ್‌ಗಳನ್ನು ಗೆಲ್ಲುವ ಭರವಸೆ ಇತ್ತು. ಆದರೆ, 25 ವಾರ್ಡ್‌ಗಳನ್ನು ಗೆದ್ದಿದ್ದೇವೆ. ಇದು ಸಣ್ಣ ಗೆಲುವಲ್ಲ ಎಂದು ಮಹಾನಗರ ಪಾಲಿಕೆಯ ಮಾಜಿ ಮೇಯರ್, ಬಿಜೆಪಿ ಮುಖಂಡ ಉದಯ್ ಮಡ್ಕೈಕರ್ ಹೇಳಿದ್ದಾರೆ.

ಮಾರ್ಚ್ 20 ರಂದು ಪಣಜಿ ಮಹಾನಗರ ಪಾಲಿಕೆ, ಆರು ಪುರಸಭೆಗಳು, ಒಂದು ಜಿಲ್ಲಾ ಪಂಚಾಯತ್ ಮತ್ತು 22 ಪಂಚಾಯತ್‌ಗಳಿಗೆ ಮತದಾನ ನಡೆದಿತ್ತು.

ಕಳೆದ ಶನಿವಾರ ಕೆನಕೋನಾ, ಕರ್ಚೋರೆಮ್-ಕ್ಯಾಕೋರಾ, ಬಿಚೋಲಿಮ್, ಕುಂಕೋಲಿಮ್, ವಾಲ್ಪೊಯಿ ಮತ್ತು ಪೆರ್ನೆಮ್ ಪುರಸಭೆಗಳಿಗೆ ಮತದಾನ ನಡೆದಿತ್ತು.

ಉಳಿದ ಎಲ್ಲಾ ಪಂಚಾಯತ್‌ಗಳ ಫಲಿತಾಂಶ ಇನ್ನೂ ಹರಬೀಳಬೇಕಿದೆ.

ಇದನ್ನೂ ಓದಿ: 100 ಕೋಟಿ ರೂ ಲಂಚ ಆರೋಪ; ಮಹಾರಾಷ್ಟ್ರ ಗೃಹ ಸಚಿವ ರಾಜೀನಾಮೆ ನೀಡಲ್ಲ ಎಂದ NCP

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights