100 ಕೋಟಿ ರೂ ಲಂಚ ಆರೋಪ; ಮಹಾರಾಷ್ಟ್ರ ಗೃಹ ಸಚಿವ ರಾಜೀನಾಮೆ ನೀಡಲ್ಲ ಎಂದ NCP

ಮಹಾರಾಷ್ಟ್ರದಲ್ಲಿ ಗೃಹ ಸಚಿವ ಅನಿಲ್‌ ದೇಶ್‌ ಮುಖ್‌ ಅವರ ವಿರುದ್ದ 100 ಕೋಟಿ ರೂಪಾಯಿಗಳ ಲಂಚ ಪಡೆದಿರುವ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಮುಂಬೈಯ ಬಾರ್ ಮತ್ತು ಹೋಟೆಲ್ ಗಳಿಂದ ಮಾಸಿಕ 100 ಕೋಟಿ ರೂಪಾಯಿಗಳನ್ನು ವಸೂಲಿ ಮಾಡಲು ಪೊಲೀಸ್ ಅಧಿಕಾರಿಗಳಿಗೆ ಅನಿಲ್ ದೇಶ್ ಮುಖ ಸೂಚಿಸಿದ್ದರು ಎಂದು ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಆರೋಪಿಸಿದ್ದಾರೆ.

ಈ ಹಿನ್ನಲೆಯಲ್ಲಿ ಬಿಜೆಪಿ ನಾಯಕರು ದೇಶ್‌ಮುಖ್‌ ಅವರು ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿವೆ.

ಆರೋಪದ ಕುರಿತಂತೆ,  ಮಹಾರಾಷ್ಟ್ರದ ಆಡಳಿತಾರೂಢ ಮಹಾವಿಕಾಸ್‌ ಅಗಾಢಿ ಮೈತ್ರಿಕೂಟದ ಶಿವಸೇನಾ-ಎನ್‌ಸಿಪಿ-ಕಾಂಗ್ರೆಸ್‌ ಪಕ್ಷಗಳ ನಾಯಕರು ಸಭೆ ನಡೆಸಿದ್ದಾರೆ. ಸಭೆಯಲ್ಲಿ ಅನಿಲ್‌ ದೇಶ್‌ ಮುಖ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ನಿರ್ಧರಿಸಲಾಗಿದೆ. ಅನಿಲ್‌ ದೇಶ್‌ ಮುಖ್ ಅವುರ ತಮ್ಮ ಸ್ಥಾನದಲ್ಲಿಯೇ ಮುಂದುವರೆಯುತ್ತಾರೆ ಎಂದು ಎನ್‌ಸಿಪಿ ಹೇಳಿದೆ.

ಅನಿಲ್‌ ದೇಶ್‌ ಮುಖ್ ಅವರು ಎನ್‌ಸಿಪಿ ನಾಯಕರಾಗಿದ್ದು, ಮಹಾ ಮೈತ್ರಿ ಸರ್ಕಾರದಲ್ಲಿ ಗೃಹ ಇಲಾಖೆ ಖಾತೆಯನ್ನು ನಿಭಾಯಿಸುತ್ತಿದ್ದಾರೆ.

ಇದನ್ನೂ ಓದಿ: ಬಂಗಾಳಕ್ಕೆ BJP ಪ್ರಣಾಳಿಕೆ ಬಿಡುಗಡೆ; ಸಿಎಎ ಜಾರಿ, ಪ್ರತಿ ಕುಟುಂಬಕ್ಕೂ ಉದ್ಯೋಗ ಭರವಸೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights