‘ಯುವರತ್ನ’ ಸಿನಿಮಾ ಪ್ರಚಾರಕ್ಕಾಗಿ ಬಳ್ಳಾರಿಗೆ ಭೇಟಿ ನೀಡಿದ ಪವರ್ ಸ್ಟಾರ್…!

‘ಯುವರತ್ನ’ ಸಿನಿಮಾ ಪ್ರಚಾರಗಾಗಿ ಬಳ್ಳಾರಿಗೆ ಭೇಟಿ ನೀಡಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಅಭಿಮಾನಿಗಳು ‘ಪವರ್’ಫುಲ್ಲಾಗಿ ಸ್ವಾಗತ ಮಾಡಿದ್ದಾರೆ.

ಹೌದು.. ಇಂದು ಬಳ್ಳಾರಿಯಲ್ಲಿ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’ ಸಿನಿಮಾದ ಪ್ರಚಾರ ಅದ್ದೂರಿಯಾಗಿತ್ತು. ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ ಅಭಿಮಾನಿಗಳು ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು. ನೆಚ್ಚಿನ ನಟನನ್ನು ನೋಡಲು ಮುಗಿಬಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸವೇ ಪಡಬೇಕಾಯಿತು.

ಜೊತೆಗೆ ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಯೋಗ ಮಾಡಿದ್ದಾರೆ. ಅಪ್ಪು ಅಪ್ಪು ಎಂದು ಜೈಕಾರ ಹಾಕುತ್ತಾ ಫೋಟೋ, ವೀಡಿಯೋಗಳಿಗಾಗಿ ಜನ ಮುಗಿಬಿದ್ದಿದ್ದರು. ಪುನೀತ್ ಡಾಲಿಯನ್ನು ನೋಡಲು ಅಭಿಮಾನಿಗಳು ನೂಕುನುಗ್ಗಲಾಟ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಪುನೀತ್, “ಎಲ್ಲದಕ್ಕೂ ಮುಖ್ಯವಾಗಿ ಸೇಫ್ಟಿ ಬೇಕು. ಹುಷಾರಾಗಿ ಬಂದು ಸಿನಿಮಾ ನೋಡಿ” ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

 

Spread the love

Leave a Reply

Your email address will not be published. Required fields are marked *