ಲಕ್ಷದ್ವೀಪಕ್ಕೆ ಪ್ರಫುಲ್ ಪಟೇಲ್ ಭೇಟಿ; ದ್ವೀಪದ ಜನರಿಂದ ‘ಕರಾಳ ದಿನ’ ಆಚರಣ!

ವ್ಯಾಪಕ ಅಸಮಾಧಾನಕ್ಕೆ ಕಾರಣವಾದ ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು ಒಂದು ವಾರದ ಭೇಟಿಗಾಗಿ ಸೋಮವಾರ ಲಕ್ಷದ್ವೀಪಕ್ಕೆ ಆಗಮಿಸಿದ್ದಾರೆ. ಏತನ್ಮಧ್ಯೆ, ದ್ವೀಪದ ನಿವಾಸಿಗಳು ತಮ್ಮ ಪ್ರತಿಭಟನೆಯನ್ನು ಪ್ರದರ್ಶಿಸಲು ‘ಕರಾಳ ದಿನ’ವನ್ನು ಆಚರಿಸುತ್ತಿದ್ದಾರೆ.

ಪ್ರಫುಲ್ ಪಟೇಲ್ ಅವರು ಅಗತ್ತಿಯಿಂದ ಕವರಟ್ಟಿಗೆ ಹೋಗುವ ರಸ್ತೆಯ ಉದ್ದಕ್ಕೂ ಕಂಬಗಳ ಮೇಲೆ ಕಪ್ಪು ಧ್ವಜಗಳನ್ನು ಕಟ್ಟಲಾಗಿದೆ. ಹಲವಾರು ಜನರು ರಸ್ತೆ ಬದಿಯಲ್ಲಿ ಕಪ್ಪು ಬಾವುಟ ಮತ್ತು ಪ್ಲೆಕಾರ್ಡ್‌ಗಳನ್ನು ಪ್ರದರ್ಶಿಸಿದ್ದಾರೆ. ಲಕ್ಷದ್ವೀಪದಲ್ಲಿ ಪ್ರಫುಲ್‌ ಅವರು ಜಾರಿಗೆ ತಂದಿರುವ ನೀತಿಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಫಲಕಗಳನ್ನು ಹಾಕಿದ್ದಾರೆ.

ಇದನ್ನೂ ಓದಿ: ಲಕ್ಷದ್ವೀಪ: ನಟಿ, ನಿರ್ಮಾಪಕಿ ವಿರುದ್ದ ದೇಶದ್ರೋಹ ಕೇಸ್‌; ಬಿಜೆಪಿ ತೊರೆದ 15 ನಾಯಕರು!

“ನಾವು ಇಂದು ದ್ವೀಪದಲ್ಲಿ ಕರಾಳ ದಿನವನ್ನು ಆಚರಿಸುತ್ತಿದ್ದೇವೆ. ಜನರು ಕಪ್ಪು ಉಡುಪುಗಳು ಮತ್ತು ಕಪ್ಪು ಮಾಸ್ಕ್‌ಗಳನ್ನು ಧರಿಸುತ್ತಾರೆ. ಪೊಲೀಸರು ಅನೇಕ ಸ್ಥಳಗಳಲ್ಲಿ ಕಪ್ಪು ಧ್ವಜಗಳನ್ನು ಹಾರಿಸಿದ್ದಾರೆ. ದ್ವೀಪದಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿಯಲ್ಲಿರುವುದರಿಂದ ನಾವು ಮನೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ ಮತ್ತು ಚಿತ್ರಗಳನ್ನು ಪೋಸ್ಟ್ ಮಾಡುತ್ತಿದ್ದೇವೆ. ರಾತ್ರಿ 9 ಗಂಟೆಗೆ ನಿವಾಸಿಗಳು ‘ಗೋ ಪಟೇಲ್ ಗೋ’ ಎಂಬ ಘೋಷಣೆಯನ್ನು ಎತ್ತುವ ದೀಪಗಳು ಮತ್ತು ಖಣಿಲು ಪಾತ್ರೆಗಳನ್ನು ಪ್ರದರ್ಶಿಸಿ, ಪೋಟೋಗಳನ್ನು ಪೋಸ್ಟ್‌ ಮಾಡುತ್ತಾರೆ. ಅಲ್ಲದೆ, ಅವುಗಳ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುವುದು” ಎಂದು ಲಕ್ಷದ್ವೀಪ ಜಿಲ್ಲಾ ಪಂಚಾಯತ್ ಸದಸ್ಯ ಕೆ.ಐ. ನಿಜಾಮುದ್ದೀನ್ ಹೇಳಿದ್ದಾರೆ.

ಇದನ್ನೂ ಓದಿ: ಹಸುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದನೆಂದು ವ್ಯಕ್ತಿಯನ್ನು ಥಳಿಸಿ ಕೊಂದ ಜನರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights